ಕೋವರ್‌ಕೊಲ್ಲಿ ಇಂದ್ರೇಶ್
ಬೆAಗಳೂರು, ಫೆ. ೨೩: ಸಂಪುಟ ಉಪ ಸಮಿತಿಯ ಶಿಫಾರಸ್ಸಿನಂತೆ ರಾಜ್ಯದ ಆರು ವನ್ಯಜೀವಿಧಾಮಗಳನ್ನು ಪರಿಸರ ಸೂಕ್ಷö್ಮ ವಲಯ ಎಂದು ಘೋಷಿಸುವ ಹೊಸ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದ ಉಪಸಮಿತಿಯು ರಾಜ್ಯದಲ್ಲಿನ ಬುಕ್ಕಾಪಟ್ಟಣದ ಚಿಂಕಾರ ವನ್ಯಜೀವಿಧಾಮ, ಕಾಮಸಂದ್ರ ವನ್ಯಜೀವಿಧಾಮ, ರಾಜೀವ್ ಗಾಂಧಿ ರಾಷ್ಟಿçÃಯ ಉದ್ಯಾನವನ (ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ), ಕಪ್ಪತಗುಡ್ಡ ವನ್ಯಜೀವಿಧಾಮ, ಅಣಶಿ ರಾಷ್ಟಿçÃಯ ಉದ್ಯಾನವನ ಮತ್ತು ದಾಂಡೇಲಿ ವನ್ಯಜೀವಿಧಾಮ (ಕಾಳಿ ಹುಲಿ ಸಂರಕ್ಷಿತ ಪ್ರದೇಶ) ಹಾಗೂ ಕಾವೇರಿ ವಿಸ್ತರಿತ ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ‘ಪರಿಸರ ಸೂಕ್ಷö್ಮ ವಲಯ'ವೆಂದು ಘೋಷಿಸುವಂತೆ ಶಿಫಾರಸು ಮಾಡಿತ್ತು. ಅದರಂತೆ ನೂತನ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸುಪ್ರಿಂಕೋರ್ಟ್ ಈಗಾಗಲೇ ನೀಡಿರುವ ನಿರ್ದೇಶನದ ಅನುಸಾರ ರಾಷ್ಟಿçÃಯ ಉದ್ಯಾನವನ ಮತ್ತು ವನ್ಯಜೀವಿ ಧಾಮ, ಅಭಯಾರಣ್ಯ, ಹುಲಿ ಸಂರಕ್ಷಣಾ ವಲಯಗಳ ಸುತ್ತಮುತ್ತ ಕನಿಷ್ಟ ೧ ಕಿ.ಮೀ.ನಿಂದ ಗರಿಷ್ಠ ೨೩.೦೬ ಕಿ.ಮೀ. ಪರಿಸರ ಸೂಕ್ಷö್ಮ ವಲಯ ಎಂದು ಘೋಷಣೆ ಮಾಡಬೇಕಾಗಿದೆ. ಈ ವಲಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು, ವಸತಿ, ಶಾಲೆ, ಆಸ್ಪತ್ರೆ, ರಸ್ತೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಸಂರಕ್ಷಿತ ವಲಯದ ವ್ಯಾಪ್ತಿಯನ್ನು ಶಿಫಾರಸು ಮಾಡಲಾಗಿದೆ.
ಖಾಸಗಿ ಜಮೀನು ಖರೀದಿಗೆ ಮುಂದಾದ ಇಲಾಖೆ
ಇದಲ್ಲದೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ವನ್ಯಜೀವಿ - ಮಾನವ ಘರ್ಷಣೆ ತಪ್ಪಿಸಲೂ ಸರ್ಕಾರ ಮುಂದಾಗಿದ್ದು ಅರಣ್ಯ ವ್ಯಾಪ್ತಿ ಹೆಚ್ಚಿಸಲು ಅರಣ್ಯ ಪ್ರದೇಶಗಳನ್ನು ಒಗ್ಗೂಡಿಸಿ ವನ್ಯಜೀವಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ಸಂಪುಟ ಉಪಸಮಿತಿ ಶಿಫಾರಸಿನಂತೆ ಅರಣ್ಯ ಪ್ರದೇಶಗಳ ಮಧ್ಯದಲ್ಲಿ, ಅಂಚಿನಲ್ಲಿ ಮತ್ತು ಕಾರಿಡಾರ್ ಪ್ರದೇಶಗಳಲ್ಲಿ ಇರುವ ತೋಟ ಬೆಳೆಗಾರರು, ಆದಿವಾಸಿಗಳು, ಪಟ್ಟಾ ಭೂಮಿ ಹೊಂದಿರುವವರು, ರೈತರು ಸ್ವಯಂ ಪ್ರೇರಣೆಯಿಂದ ತಮ್ಮ ಜಮೀನಿನ ಮಾರಾಟಕ್ಕೆ ಮುಂದಾದರೆ ಅರಣ್ಯ ಇಲಾಖೆ ಅದನ್ನು ಖರೀದಿಸಲು ರಚಿಸಿರುವ ನಿಗದಿತ ಮಾರ್ಗಸೂಚಿಗೂ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ ೨೦೧೨ ರಲ್ಲಿ ಹೊರಡಿಸಿರುವ ಕ್ರೋಢೀಕೃತ ಮಾರ್ಗಸೂಚಿ ರೀತಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸಿಸುವ ಮತ್ತು ಹೊರಬರಲು ಸಿದ್ಧವಿರುವ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಪ್ರತಿ ಕುಟುಂಬಕ್ಕೆ ರೂ. ೧೫ ಲಕ್ಷ ನೀಡುವ ಕುರಿತೂ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಪರಿಸರ ಸೂಕ್ಷö್ಮ ವಲಯ ೨೩ ಕಿ.ಮೀ.ಗೆ ಏರಿಕೆ
ಪರಿಸರ ಸೂಕ್ಷö್ಮ ವಲಯ ಎಂದು ಘೋಷಿಸದೇ ಇದ್ದಾಗ ಈ ಅರಣ್ಯಗಳ ಸುತ್ತ ೧೦ ಕಿಲೋಮೀಟರ್‌ವರೆಗೆ ನಿರ್ಮಾಣ ಚಟುವಟಿಕೆಗಳಿಗೆ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಇದೀಗ ಆ ವ್ಯಾಪ್ತಿಯನ್ನು ಸುಮಾರು ೨೩ ಕಿಲೋಮೀಟರ್‌ಗಳವರೆಗೆ ಹೆಚ್ಚಿಸಬಹುದಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಹರ್ಷ ಅವರು ತಿಳಿಸಿದ್ದಾರೆ. ಈ ಘೋಷಣೆಯ ನಂತರ ರಾಜ್ಯ ಸರ್ಕಾರವು ಅರಣ್ಯಗಳ ಸೂಕ್ಷö್ಮ ವ್ಯಾಪ್ತಿ ಇಂತಿಷ್ಟು ಕಿಲೋಮೀಟರ್ ಎಂದು ನಿಗದಿಪಡಿಸಲಿದೆ. ನಂತರ ಈ ಪ್ರದೇಶದಲ್ಲಿ ನಿರ್ಮಾಣ ಅಥವಾ ವಾಣಿಜ್ಯ ಚಟುವಟಿಕೆ ಕೈಗೆತ್ತಿಕೊಳ್ಳಲು ಮೈಸೂರಿನ ವಿಭಾಗೀಯ ಆಯುಕ್ತರ ನೇತೃತ್ವದ ಸಮಿತಿಯ ಅನುಮತಿ ಪಡೆಯಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಗೆಜೆಟ್ ಪ್ರಕಟಣೆ ನಂತರ ಜಾರಿಗೆ
ರಾಜ್ಯ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಗೆ ಅನುಮತಿ ನೀಡಿದ್ದರೂ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲು ಕೆಲ ಸಮಯ ಬೇಕಾಗುತ್ತದೆ. ಸಲ್ಲಿಕೆಯ ನಂತರ ಕೇಂದ್ರ ಸರ್ಕಾರ ಪರಿಶೀಲಿಸಿ ಆದೇಶ ಹೊರಡಿಸಬೇಕಾಗಿದೆ. ಅದರ ನಂತರವಷ್ಟೇ ಪರಿಸರ ಸೂಕ್ಷö್ಮ ವಲಯ ಆಗಲಿದೆ. ಇದಕ್ಕೆ ಕೆಲ ತಿಂಗಳ ಸಮಯ ತಗುಲಲಿದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲಾ ಕ್ರಮಗಳಿಂದಾಗಿ ರಾಜ್ಯದ ಅರಣ್ಯ ವ್ಯಾಪ್ತಿ ಹಿಗ್ಗುವುದರ ಜೊತೆಗೆ ಪ್ರಾಣಿಗಳಿಗೂ, ಮನುಷ್ಯರಿಗೂ ಸಂಘರ್ಷ ಕಡಿಮೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.