ಮಡಿಕೇರಿ, ಫೆ. ೨೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಎರಡನೇ ವರ್ಷದ ೧೦ ಕುಟುಂಬ ೧೮ ಗೋತ್ರದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಕ್ರೀಡಾಕೂಟದ ಬಿಡ್ಡಿಂಗ್ ಪ್ರಕ್ರಿಯೆ ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿದರು. ಇಂತಹ ಕ್ರೀಡಾಕೂಟಗಳ ಮೂಲಕ ಜನಾಂಗದ ಆಸಕ್ತ ಕಿರಿಯರಿಗೆ ವೃತ್ತಿಪರವಾಗಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎಂದರು. ಗೌಡ ಸಮಾಜದ ಖಜಾಂಚಿ ಕುಯ್ಯಮುಡಿ ವಸಂತ್, ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ವೇದಿಕೆಯ ಕಾನೂನು ಸಮಿತಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ್, ಬಿಡ್ಡಿಂಗ್ ನಿರ್ವಾಹಕರಾಗಿ ಕಟ್ಟೆಮನೆ ಸೋನಾಜಿತ್ ಉಪಸ್ಥಿತರಿದ್ದರು.ಕೋಳಿಬೈಲು ಮಾಲೀಕತ್ವದ ಮಡಿಕೇರಿ ಚಾಂಪಿಯನ್ ಬಾವಾಸ್ (ಎಂಸಿಬಿ), ಬೇಕಲ್ ದೇವರಾಜ್, ಬೇಕಲ್ ಚಂದನ್ ರಾಜ್ ಮತ್ತು ಬೈಮನ ಹೇಮಂತ್ ಮಾಲೀಕತ್ವದ ಫೀನಿಕ್ಸ್ ಫ್ಲೆöÊಯರ್ಸ್, ಕೇಚಪ್ಪನ ಕುಜಲ್ ಕಾರ್ಯಪ್ಪ, ಅಚ್ಚಾಂಡಿರ ಮೊಣ್ಣಪ್ಪ, ಚಂಡೀರ ಭರತ್, ಕೂಡಕಂಡಿ ಪುನೀತ್ ಮಾಲೀಕತ್ವದ ಕೂರ್ಗ್ ವಾರಿಯರ್ಸ್, ಪೂಳಕಂಡ್ರ ಸಂದೀಪ್, ಬೈಮನ ಶರ್ವಿನ್ ಮಾಲೀಕತ್ವದ ದಿ ಮರಗೋಡಿಯನ್ಸ್ ಮತ್ತು ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ಫ್ರಾಂಚೈಸಿಗಳು ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದವು. ಎರಡು ಹಂತಗಳಲ್ಲಿ ಬಿಡ್ಡಿಂಗ್ ನಡೆಸಲಾಯಿತು. ಏಪ್ರಿಲ್ ೧೮ ರಿಂದ ೨೮ ರವರೆಗೆ ನಡೆಯುವ ಕ್ರೀಡಾಕೂಟದಲ್ಲಿ ಹತ್ತು ಫ್ರಾಂಚೈಸಿಗಳ ೧೫೦ ಆಟಗಾರರು ಮುಖಾಮುಖಿ ಯಾಗಲಿದ್ದಾರೆ.