ಮಡಿಕೇರಿ, ಫೆ. ೨೧: ಸಿದ್ದಾಪುರ-ಅಮ್ಮತ್ತಿ ಹೋಬಳಿಯ ಅಮೃತ ಯುವ ಮೊಗೇರ ವತಿಯಿಂದ ದ್ವಿತೀಯ ವರ್ಷದ ಮೊಗೇರ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯ ತಾ. ೨೪, ೨೫ ಮತ್ತು ೨೬ ರಂದು ಅಮ್ಮತ್ತಿಯ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ.

ಟೀಮ್ ಹಂಟರ್ಸ್ ಮರಗೋಡು, ಫ್ರೆಂಡ್ಸ್ ಕ್ರಿಕೆಟರ್ಸ್ ಅಮ್ಮತಿ, ಎಸ್.ಪಿ.ಎಂ. ರಾಯಲ್ ವೀರಾಜಪೇಟೆ, ಪ್ರೆಸಿಡೆಂಟ್ಸ್ ಘಿI ಸೋಮವಾರಪೇಟೆ, ಟೀಮ್ ಕಾರ್ಣಿಕ ಕೊಡಗು, ರಾಪ್ಟಾರ್ ಕಾನನಕಾಡು, ಟೀಮ್ ಬ್ರದರ್ಸ್ ಬಕ್ಕ, ಫ್ರೆಂಡ್ಸ್ ಘಿಟ ಅಮ್ಮತ್ತಿ, ಮರ್ಸಿಲೆಸ್ಸ್ ಕ್ರಿಕೆಟರ್ಸ್, ಕ್ಯಾಪ್ಟನ್ ಕ್ರಿಕೆಟರ್ಸ್ ಸುಂಟಿಕೊಪ್ಪ, ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿವೆ.

ವಿಜೇತ ತಂಡಕ್ಕೆ ರೂ. ೫೦,೦೦೦ ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. ೨೫,೦೦೦ ಹಾಗೂ ಆಕರ್ಷಕ ಟ್ರೋಫಿ ಮತ್ತು ವೈಯಕ್ತಿಕ ಟ್ರೋಫಿಗಳನ್ನು ನೀಡಲಾಗುತ್ತದೆ.

ಕ್ರೀಡಾಕೂಟದ ಉದ್ಘಾಟನೆಯನ್ನು ಅಮೃತ ಯುವ ಮೊಗೇರ ಸೇವಾ ಸಮಾಜದ ಕ್ರೀಡಾ ಸಮಿತಿ ಅಧ್ಯಕ್ಷ ಪಿ.ಸಿ. ರಮೇಶ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮೃತ ಯುವ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಮಂಜು. ಪಿ.ಕೆ., ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್, ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಘಟಕದ ಅಧ್ಯಕ್ಷ ಪಿ.ಎಂ. ರವಿ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಸಮಿತಿ ಅಧ್ಯಕ್ಷ ಎಂ.ಜಿ. ಚಂದ್ರ, ಸಮಾಜದ ಗೌರವಾಧ್ಯಕ್ಷೆ ಅಕ್ಕಮ್ಮ ಮೂರ್ತಿ ಪಾಲ್ಗೊಳ್ಳಲಿದ್ದಾರೆ.