ಸಿದ್ದಾಪುರ, ಫೆ. ೨೨: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ ಬೆಟ್ಟದಕಾಡು ಕಾಂಕ್ರಿಟ್ ರಸ್ತೆ ಕಾಮಗಾರಿ ಕಳಪೆ ಹಾಗೂ ಪರಿಶಿಷ್ಟ ಜಾತಿ ಕಾಲೋನಿ ಹಣ ದುರುಪಯೋಗ ಆಗಿರುವುದು ಓಂಬುಡ್ಸö್ಮನ್ ತನಿಖೆ ವೇಳೆ ಸಾಬೀತಾಗಿದೆ.
ನರೇಗಾ ಯೋಜನೆಯಡಿ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಅಭಿವೃದ್ಧಿಗೆ ಬಳಕೆ ಆಗ ಬೇಕಿದ್ದ ಹಣವನ್ನು ಸಾರ್ವಜನಿಕ ರಸ್ತೆಗೆ ಬಳಸಲಾಗಿದ್ದು, ಕೇವಲ ೫೦೦ ಮೀಟರ್ ರಸ್ತೆಗೆ ೨೩ಲಕ್ಷ ರೂ. ಖರ್ಚು ಮಾಡಲಾಗಿದೆ. ಮಾತ್ರವಲ್ಲ ರಸ್ತೆಯ ಕಾಂಕ್ರಿಟ್ ಸಂಪೂರ್ಣ ಹಾಳಾಗಿದ್ದು, ತನಿಖೆ ಆಗಬೇಕೆಂದು ಗ್ರಾ.ಪಂ. ಸದಸ್ಯ ಶಿವದಾಸ್ ಗ್ರಾಪಂ ಲೆಕ್ಕ ಪರಿಶೋಧನಾ ಸಭೆಯಲ್ಲಿ ದೂರು ನೀಡಿದ್ದರು. ಗುರುವಾರ ಜಿಲ್ಲಾ ಪಂಚಾಯಿತಿ ಓಂಬುಡ್ಸö್ಮನ್ ಪರ್ಸನ್ ಮಹದೇವಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಕ್ರಮ ಸಾಬೀತಾಗಿದೆ. ಪರಿಶಿಷ್ಟ ಜಾತಿ ಲಕ್ಷಿö್ಮ ಅವರ ಮನೆಗೆ ತೆರಳುವ ರಸ್ತೆ ಕಾಮಗಾರಿ ಹೆಸರಿನಲ್ಲಿ ಬಿಲ್ ಪಾವತಿ ಮಾಡಲಾಗಿದ್ದು, ಲಕ್ಷಿö್ಮ ಅವರ ಮನೆಗೆ ರಸ್ತೆ ಕಾಮಗಾರಿ ಮಾಡಿಸದೆ ಸಾರ್ವಜನಿಕ ರಸ್ತೆಗೆ ಹಣ ವ್ಯಯಿಸಲಾಗಿದೆ. ಧನೇಶ್ ಅವರ ಅಂಗಡಿಯಿAದ ಪ್ರಾರಂಭ ಮಾಡಬೇಕಿದ್ದ ರಸ್ತೆಯು ೮೦ ಮೀ. ದೂರ ಬಿಟ್ಟು ಪ್ರಾರಂಭಿಸಲಾಗಿದೆ.
ಕಾಮಗಾರಿಯ ಫಲಕಗಳಲ್ಲಿ ಸಾಮಗ್ರಿಯ ಮೊತ್ತ ಪಾವತಿಸಲೇ ಇಲ್ಲ. ರಸ್ತೆಯ ಅಲ್ಲಲ್ಲಿ ಗುಂಡಿಗಳಾಗಿದ್ದು, ಕಾಮಗಾರಿಯು ಕಳಪೆ ಆಗಿದೆ ಎಂದು ಈ ಭಾಗದ ಗ್ರಾಪಂ ಸದಸ್ಯರು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಕಾಮಗಾರಿಯ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಪಿಡಿಓ ಅನಿಲ್ ಕುಮಾರ್, ಅಧ್ಯಕ್ಷ ಸಾಬು ವರ್ಗೀಸ್, ಪ್ರಸಕ್ತ ಪಿಡಿಓ ನಂಜುAಡ ಸ್ವಾಮಿ, ಅಧ್ಯಕ್ಷೆ ಧಮಯಂತಿ, ಗ್ರಾಪಂ ಸದಸ್ಯ ಹನೀಫ, ಸಫಿಯಾ, ದೂರುದಾರ ಶಿವದಾಸ್ ಇದ್ದರು.