ಕರಿಕೆ, ಫೆ. ೨೨: ನಾಗರಹೊಳೆ ರಾಷ್ಟಿçÃಯ ಉದ್ಯಾನದಂಚಿಗೆ ಹೊಂದಿಕೊAಡಿರುವ ವನ್ಯಜೀವಿ ಅಭಯಾರಣ್ಯ ಹಾಗೂ ಮಡಿಕೇರಿ ಉಪವಿಭಾಗದ ಮೀಸಲು ಅರಣ್ಯಗಳಲ್ಲಿ ಕಾಡ್ಗಿಚ್ಚು ಹಾಗೂ ಕೇರಳ ಕರ್ನಾಟಕ ಗಡಿಭಾಗವಾದ ಮಂಜೆಚಾಲ್, ಮಾಡತ್ ಮಲೆ, ಆನೆಪಾರೆ ಭಾಗದಲ್ಲಿ ವನ್ಯಜೀವಿಗಳ ಕಳ್ಳಬೇಟೆ ಹಾಗೂ ಇತರ ಅಕ್ರಮ ಚಟುವಟಿಕೆಗಳನ್ನು ತಡೆಯಲು ಅಗತ್ಯ ಸಲಕರಣೆ ಹಾಗೂ ಸಿಬ್ಬಂದಿಗಳನ್ನು ನೇಮಿಸಲು ಇಲಾಖೆಯಿಂದ ಕ್ರಮವಹಿಸಲಾಗುವುದೆಂದು ಮಡಿಕೇರಿ ಪ್ರಾದೇಶಿಕ ಅರಣ್ಯ ವನ್ಯಜೀವಿ ಉಪವಿಭಾಗದ ಅರಣ್ಯ ಸಂರಕ್ಷಣಾ ಅಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.
ಭಾಗಮಂಡಲ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಆವರಣದಲ್ಲಿ ಸಿಬ್ಬಂದಿಗಳಿಗೆ ಕಾಡ್ಗಿಚ್ಚು ನಿಯಂತ್ರಣ ಮಾಡಲು ಆಧುನಿಕ ಯಂತ್ರೋಪಕರಣ ಗಳ ವಿತರಣೆ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಕರಿಕೆ ಚೆಕ್ಪೋಸ್ಟ್, ಮಾಡತ್ ಮಲೆ ಕಳ್ಳ ಬೇಟೆ ತಡೆ ಶಿಬಿರ, ಸಂಪಾಜೆ ಚೆಕ್ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಭಾಗಮಂಡಲ - ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ರವೀಂದ್ರ, ತಲಕಾವೇರಿ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಕೊಟ್ರೆಶ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು. -ಸುಧೀರ್