ಅಮ್ಮತ್ತಿ, ಫೆ. ೨೧: ಅಮ್ಮತ್ತಿಯಲ್ಲಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಯೂನಿಯನ್ ಎಂಬ ನೂತನ ಆಟೋರಿಕ್ಷಾ ಸಂಘ ರಚಿಸಲಾಗಿದ್ದು ಅಧ್ಯಕ್ಷರಾಗಿ ಮಹದೇವ್ ಕಾರ್ಯದರ್ಶಿಯಾಗಿ ಮದನ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ನೂತನ ಸಂಘದ ಅಧ್ಯಕ್ಷ ಮಹದೇವ್ ಆಟೋ ಚಾಲಕರ ಹಿತದೃಷ್ಟಿಯಿಂದ ನೂತನ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮದನ್ ಶೆಟ್ಟಿ ಉಪಾಧ್ಯಕ್ಷರಾಗಿ ಪ್ರಶಾಂತ್ ಸಹಕಾರ್ಯದರ್ಶಿ ಮುಸ್ತಕ್ ಆಲಿ ಖಜಾಂಚಿಯಾಗಿ ರಜಾಕ್ ಆಯ್ಕೆಯಾಗಿದ್ದಾರೆ. ಈಗಾಗಲೇ ಸಂಘದಲ್ಲಿ ೨೦ ಸದಸ್ಯರಿದ್ದು ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಮುಂದೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.