ವೀರಾಜಪೇಟೆ, ಫೆ. ೨೧: ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಅನವಶ್ಯಕವಾಗಿ ಮೊಕದ್ದಮೆ ದಾಖಲಿಸಿರುವುದನ್ನು ವೀರಾಜಪೇಟೆ ವಕೀಲರ ಸಂಘ ತೀವ್ರವಾಗಿ ಖಂಡಿಸಿದ್ದು, ವಕೀಲರು ತಾ.೨೦ರಂದು (ಇಂದು) ನ್ಯಾಯಾಲಯ ಕಲಾಪ ಬಹಿಷ್ಕರಿಸಿದರು.

ಕ್ಷುಲ್ಲಕ ವಿಚಾರಕ್ಕೆ ಸಂಬAಧಿಸಿದAತೆ ರಾಮನಗರದಲ್ಲಿ ನಡೆದ ಪ್ರಕರಣ ಹಿನ್ನೆಲೆಯಲ್ಲಿ ೪೫ ವಕೀಲರ ಮೇಲೆ ರಾಮನಗರ ಪೊಲೀಸರು ಮೊಕದ್ದಮೆ ದಾಖಲಿಸಿರುವುದನ್ನು ರಾಜ್ಯವ್ಯಾಪಿ ವಕೀಲರು ಖಂಡಿಸಿದ್ದಾರೆ. ವಕೀಲರ ಮೇಲೆ ಪ್ರಕರಣ ದಾಖಲು ಮಾಡಿರುವುದನ್ನು ಖಂಡಿಸಿ ರಾಮನಗರದ ನ್ಯಾಯಾಲಯದ ಕಲಾಪಗಳನ್ನು ಅಲ್ಲಿನ ವಕೀಲರು ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.

ರಾಮನಗರದ ವಕೀಲ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿ, ಪೊಲೀಸರ ನಿಲುವು ಖಂಡಿಸಿ ವೀರಾಜಪೇಟೆ ವಕೀಲರ ಸಂಘವು ಕೂಡ ನಿರ್ಣಯ ಕೈಗೊಂಡಿತು.