ಪೊನ್ನಂಪೇಟೆ, ಫೆ. ೨೧: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನಂಪೇಟೆ ಗ್ರಾಮದ ತಹಶೀಲ್ದಾರ್ ಕಚೇರಿಯ ಮುಂಭಾಗಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ಉಪಾಧ್ಯಕ್ಷ ಆಲಿರ ರಶೀದ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಅವರು ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ನಂತರ ಬಲೂನ್ ಹಾರಿಸುವ ಮೂಲಕ ಜಾಥಾಗೆ ಚಾಲನೆ ನೀಡಲಾಯಿತು.

ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪೊನ್ನಂಪೇಟೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಚಿಕ್ಕ ಮಾದಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ನೇತ್ರಾವತಿ, ಯಮುನಾ, ಕೆ.ಡಿ. ಯಮುನಾ, ಮೂಕಳೆರ ಸುಮಿತ, ಆರತಿ ಸುರೇಶ್, ಕರ್ತಮಾಡ ರಶಿಕ, ಜುನೈದ್, ವಿವಿಧ ಸಂಘದ ಸದಸ್ಯರು, ವಿವಿಧ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಸಂಜೀವಿನಿ ಸ್ತಿçà ಶಕ್ತಿ ಒಕ್ಕೂಟದ ಮಹಿಳಾ ಸದಸ್ಯರು ಕಳಸ ಹಿಡಿದು ಜಾಥಾದೊಂದಿಗೆ ಹೆಜ್ಜೆ ಹಾಕಿದರು. ಕೆಪಿಎಸ್ ಪ್ರೌಢ ಶಾಲೆಯ ಎನ್.ಸಿ.ಸಿ. ಕೆಡೆಟ್‌ಗಳು, ಕೆಪಿಎಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಸಂತ ಅಂತೋಣಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಅಪ್ಪಚ್ಚು ಕವಿ ವಿದ್ಯಾಸಂಸ್ಥೆ, ನಿನಾದ ವಿದ್ಯಾಸಂಸ್ಥೆಯ ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು. ವಿವಿಧ ಶಾಲೆಗಳ ಮಕ್ಕಳು ವಿವಿಧ ರಾಷ್ಟçನಾಯಕರ ಛದ್ಮವೇಷಧಾರಿಗಳಾಗಿ ನಗರದ ಮುಖ್ಯ ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಈ ಸಂದರ್ಭ ಉಪ ಪ್ರಾಂಶುಪಾಲ ಎಂ.ಯು. ಚಂಗಪ್ಪ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಜೀವನ್ ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪಿ.ಡಿ.ಓ. ಪುಟ್ಟರಾಜು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಟಿ.ಎಸ್. ಮಹೇಶ್ ವಂದಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ಪ್ರಾಥಮಿಕ ವಿಭಾಗ ಪ್ರಬಂಧ ಸ್ಪರ್ಧೆಯಲ್ಲಿ ದೀಪಿಕಾ. ಪಿ.ಎಂ., ಕೆಪಿಎಸ್ ಪ್ರಾಥಮಿಕ ಶಾಲೆ ಪ್ರಥಮ, ಲಕ್ಷಿö್ಮ ವೈ.ಜಿ. ಕೆಪಿಎಸ್ ಪ್ರಾಥಮಿಕ ಶಾಲೆ ದ್ವಿತೀಯ, ಬಿ.ಎಸ್. ಡಿಂಚಲ್ ದೇಚಮ್ಮ, ಸಂತ ಅಂತೋಣಿ ಪ್ರಾಥಮಿಕ ಶಾಲೆ ತೃತೀಯ, ರಸಪ್ರಶ್ನೆಯಲ್ಲಿ ಡಬ್ಲ್ಯೂ. ಕೆ. ನಿರೀಕ್ಷಿತಾ ಸಂತ ಅಂತೋಣಿ ಪ್ರಾಥಮಿಕ ಶಾಲೆ ಪ್ರಥಮ, ನಿಮಿತ ಕೆ.ಆರ್. ಸಂತ ಅಂತೋಣಿ ಪ್ರಾಥಮಿಕ ಶಾಲೆ ದ್ವಿತೀಯ, ಪಿ.ಎನ್. ಅಜಿತ್, ಅಪ್ಪಚ್ಚು ಕವಿ ವಿದ್ಯಾಸಂಸ್ಥೆ ತೃತೀಯ, ಪ್ರೌಢ ಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಕೆ.ಕೆ. ಲವೀನ್, ಸಂತ ಅಂತೋಣಿ ಪ್ರೌಢ ಶಾಲೆ ಪ್ರಥಮ, ಎಂ.ವಿ. ಯುಕ್ತಿ ಕೆಪಿಎಸ್ ಪ್ರೌಢಶಾಲೆ ದ್ವಿತೀಯ, ಟಿ.ಕೆ. ಭೂಮಿಕಾ ಸಂತ ಅಂತೋಣಿ ಪ್ರೌಢಶಾಲೆ ತೃತೀಯ, ರಸ ಪ್ರಶ್ನೆಯಲ್ಲಿ ಕೆ.ಡಿ. ತನಿಕ್ಷಾ, ಸಂತ ಅಂತೋಣಿ ಪ್ರೌಢಶಾಲೆ ಪ್ರಥಮ, ತೇಜಸ್ವಿ ಭಟ್. ಕೆಪಿಎಸ್ ಪ್ರೌಢಶಾಲೆ ದ್ವಿತೀಯ, ಟಿ.ಎಂ. ಶ್ರಾವತ್ ಗೌಡ ಸಂತ ಅಂತೋಣಿ ಪ್ರೌಢಶಾಲೆ ಪೊನ್ನಂಪೇಟೆ ತೃತೀಯ, ಛದ್ಮ ವೇಷ ಪ್ರಾಥಮಿಕ ವಿಭಾಗದಲ್ಲಿ ಸಾನ್ವಿಕ ಕೆಪಿಎಸ್ ಪೊನ್ನಂಪೇಟೆ ಪ್ರಥಮ, ಶಾಲಿನಿ ಕೆಪಿಎಸ್ ಪೊನ್ನಂಪೇಟೆ ದ್ವಿತೀಯ, ಹರ್ಷಿತ್ ಗೌಡ ತೃತೀಯ, ಪ್ರೌಢ ಶಾಲಾ ವಿಭಾಗದ ಛದ್ಮವೇಷ ಸ್ಪರ್ಧೆ ತೇಜಸ್ವಿ ಸೂರ್ಯ ಪ್ರಥಮ, ಮನೋಜ್, ಕೆಪಿಎಸ್ ಪ್ರೌಢಶಾಲೆ ದ್ವಿತೀಯ, ಅಕ್ಷತಾ, ಕೆಪಿಎಸ್ ಪ್ರೌಢಶಾಲೆ ತೃತಿಯ ಸ್ಥಾನ ಪಡೆದುಕೊಂಡರು. ಎಲ್ಲಾ ಸ್ಪರ್ಧೆಯ ವಿಜೇತರಿಗೆ ವೇದಿಕೆಯಲ್ಲಿ ಪ್ರಶಂಸನಾ ಪತ್ರ ಮತ್ತು ಬಹುಮಾನ ನೀಡಿ ಗೌರವಿಸ ಲಾಯಿತು. ಸಂತ ಅಂತೋಣಿ ಪ್ರಾಥಮಿಕ ಶಾಲೆ, ಅಪ್ಪಚ್ಚಕವಿ, ನಿನಾದ ಶಾಲೆ ಮತ್ತು ಪೊನ್ನಂಪೇಟೆ ಹಾಸ್ಟೆಲ್ ವಿದ್ಯಾರ್ಥಿಗಳಿಂದ ನೃತ್ಯ ದೇಶಭಕ್ತಿ ಗೀತೆ ಮೂಡಿಬಂತು.

ಈ ಸಂದರ್ಭ ಪಂಚಾಯಿತಿ ಸಿಬ್ಬಂದಿಗಳಾದ ಸುರೇಶ್ ಎಂ.ಹೆಚ್., ಯೋಗೀಶ್ ಕುಮಾರ್ ವೈ.ಎಂ, ಜಮುನಾ ಕೆ.ಕೆ, ಮಹೇಶ್, ಮಂಜು, ಮಹಾದೇವ, ಪರಮೇಶ, ನಂಜುAಡ. ನಂಜಯ್ಯ, ಶಂಕರ, ಮುತ್ತಪ್ಪ, ಉಮಾ, ನಾಗಿ, ಪಾಪಮ್ಮ, ಗೌರಮ್ಮ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್. ಮುಖ್ಯ ಶಿಕ್ಷಕರಾದ ಬಿ ಎಂ ವಿಜಯ್, ಅಮ್ಮತ್ತಿರ ವಾಸುವರ್ಮ, ಯೋಗೇಶ್ ಹಾಜರಿದ್ದರು.