ವೀರಾಜಪೇಟೆ, ಫೆ. ೨೨: ಮಾಕುಟ್ಟ ಅರಣ್ಯ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಪಿಕಪ್ ಜೀಪಿಗೆ ಆಕಸ್ಮಿಕ ಬೆಂಕಿ ತಾಗಿ ಪಿಕಪ್ ವಾಹನ ಬೆಂಕಿಗೆ ಆಹುತಿಯಾದ ಘಟನೆ ಬುಧವಾರ ಸಂಜೆ ೭.೩೦ರ ಸಮಯದಲ್ಲಿ ನಡೆದಿದೆ.

ಬೆಂಗಳೂರಿನಿAದ ಕೇರಳದ ಇರಿಟ್ಟಿಯಲ್ಲಿನ ಆಸ್ಪತ್ರೆಗೆ ಪಿಕ್ ಅಪ್ ವಾಹನದಲ್ಲಿ ಔಷಧಿಗಳನ್ನು(ಗ್ಲುಕೋಸ್) ಸಾಗಿಸುತ್ತಿದ್ದ ಸಂದರ್ಭ ರಾಜ್ಯ ಹೆದ್ದಾರಿಯ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದ ಹಿನ್ನೆಲೆ ವಾಹನ ಚಾಲಕ ಸತೀಶ್ ವೀರಾಜಪೇಟೆ ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ವೀರಾಜಪೇಟೆ ಠಾಣೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.