ಕೂಡಿಗೆ, ಫೆ. ೨೧: ತೊರೆನೂರು ಸೂರ್ಯೋದಯ ಪುರುಷರ ಸ್ವಸಹಾಯ ಸಂಘ ಇದರ ೨೦ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರೈತರ ಕನ್ನಡ ಸಿರಿ ಸಂಕ್ರಾAತಿ ಸುಗ್ಗಿ ಹಬ್ಬವು ತೊರೆನೂರುವಿನಲ್ಲಿ ತಾ.೨೪ ರಂದು ನಡೆಯಲಿದೆ.

ಮೆರವಣಿಗೆಯ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ವೀರಾಜಪೇಟೆ ಅರಮೇರಿ ಕಳಂಚರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಮತ್ತು ತೊರೆನೂರು ವಿರಕ್ತ ಮಠ ಶ್ರೀ ಮಲ್ಲೇಶ ಸ್ವಾಮಿ ವಹಿಸುವರು. ಅಧ್ಯಕ್ಷತೆಯನ್ನು ಸೂರ್ಯೋದಯ ಸ್ವಸಹಾಯ ಸಂಘದ ಪ್ರತಿನಿಧಿ ಟಿ.ಬಿ. ಜಗದೀಶ್ ವಹಿಸುವರು. ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ಮಾಜಿ ಸಚಿವರಾದ ಎಂ.ಪಿ. ಅಪ್ಪಚ್ಚು ರಂಜನ್, ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ವೆಂಕಟರಾಜಾ, ಬೆಂಗಳೂರು ಹಳ್ಳಿಕಾರು ರಾಸುಗಳ ಒಡೆಯ ವರ್ತೂರ್ ಸಂತೋಷ್ ಆಗಮಿಸಲಿದ್ದಾರೆ

ಮುಖ್ಯ ಅತಿಥಿಗಳಾಗಿ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭ, ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಅಶೋಕ್ ಎಸ್. ಆಲೂರು, ಕುಶಾಲನಗರ ಪೋಲೀಸ್ ಉಪ ಅಧೀಕ್ಷಕ ಆರ್. ವಿ. ಗಂಗಾಧರಪ್ಪ, ಮೈಸೂರು ಮಾಜಿ ನಗರಪಾಲಿಕೆ ಸದಸ್ಯ, ಹಾವುಗಳ ಸಂರಕ್ಷಕ ಸ್ನೇಕ್ ಶ್ಯಾಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್, ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಕುಶಾಲನಗರ ಕನ್ನಡ ಸಿರಿ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಸೋಮವಾರಪೇಟೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಆರ್.ಕೆ. ಯಾದವ್ ಬಾಬು ಅಗಮಿಸುವರು ಎಂದು ಸಂಘದ ಪ್ರಕಟಣೆ ತಿಳಿದಿದೆ. ಸುಗ್ಗಿ ಹಬ್ಬದಲ್ಲಿ ಹಳೆಯ ಗ್ರಾಮೀಣ ಕ್ರೀಡಾಕೂಟ, ರಾಸುಗಳ ಪ್ರದರ್ಶನ ಸೇರಿದಂತೆ ಗ್ರಾಮೀಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.