ಮಡಿಕೇರಿ, ಫೆ. ೨೨: ಚಾಮಿಯಾಲ ಫೈಟರ್ಸ್ ಕ್ಲಬ್ ವತಿಯಿಂದ ಇದೇ ಪ್ರಥಮ ಬಾರಿಗೆ ಕೊಡವ ಮುಸ್ಲಿಂ ಕುಟುಂಬ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳು ಮಾ. ೨೫ ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆಯೋಜಕ ಮುನೀರ್ ಚಾಮಿಯಾಲ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏಪ್ರಿಲ್ ೧೬ ರಿಂದ ೨೧ ರವರೆಗೆ ವೀರಾಜಪೇಟೆಯ ಚಾಮಿಯಾಲ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿದೆ. ವಿಜೇತ ತಂಡಕ್ಕೆ ರೂ. ೧ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೫೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಆಕರ್ಷಕ ಟ್ರೋಫಿ ಮತ್ತು ನಾಲ್ಕನೇ ವಿಜೇತ ತಂಡಕ್ಕೆ ಬಹುಮಾನ ನೀಡಲಾಗುವುದು.

ಭಾಗವಹಿಸುವ ತಂಡಗಳು ಮಾ. ೨೫ ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಾವಣೆಗಾಗಿ ೭೪೧೧೧೧೦೦೪೧, ೭೩೪೯೦೬೪೮೩೪ ನ್ನು ಸಂಪರ್ಕಿಸಬಹುದಾಗಿದೆ ಎಂದು ಮುನೀರ್ ಚಾಮಿಯಾಲ ತಿಳಿಸಿದ್ದಾರೆ.