ವೀರಾಜಪೇಟೆ, ಫೆ. ೨೧: ಸಮೀಪದ ಬೇಟೋಳಿ ರಾಮನಗರದ ಲ್ಲಿರುವ ಶ್ರೀ ಕುರಂಬ ಭಗವತಿ ದೇವಸ್ಥಾನದ ೩೮ನೇ ವಾರ್ಷಿಕೋತ್ಸವ ಹಾಗೂ ಶ್ರೀ ಭಗವತಿ ಅಮ್ಮನವರ ತೆರೆ ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕ ಉತ್ಸವದ ಪ್ರಯುಕ್ತ ಬೆಳಗಿನಿಂದಲೇ ಪೂಜಾ ಕಾರ್ಯಕ್ರಮಗಳು ಜರುಗಿದವು. ಮೊದಲಿಗೆ ಉಷಾ ಪೂಜೆ, ನಂತರ ಮಹಾಪೂಜೆ ದೇವಿಯ ದರ್ಶನದ ತೆರೆ ಜರುಗಿತು. ಪ್ರಸಾದ ವಿತರಣೆ ಮತ್ತು ಭಕ್ತರಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಿತು. ಸಂಜೆ ತಾಲಪೊಲಿ ಮೆರವಣಿಗೆಯು ರಾಮನಗರ ಶಾಲೆಯ ಮುಂಭಾಗ ದಿಂದ ದೇವಸ್ಥಾನದವರೆಗೂ ನಡೆಯಿತು. ಗ್ರಾಮದ ಮಹಿಳೆಯರು ದೀಪಗಳನ್ನು ಹಿಡಿದು ಸಾಲಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಹಾಪೂಜೆ ದೇವಿಯ ದರ್ಶನದ ತೆರೆ ಜರುಗಿತು. ಪ್ರಸಾದ ವಿತರಣೆ ಮತ್ತು ಭಕ್ತರಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಿತು. ಸಂಜೆ ತಾಲಪೊಲಿ ಮೆರವಣಿಗೆಯು ರಾಮನಗರ ಶಾಲೆಯ ಮುಂಭಾಗ ದಿಂದ ದೇವಸ್ಥಾನದವರೆಗೂ ನಡೆಯಿತು. ಗ್ರಾಮದ ಮಹಿಳೆಯರು ದೀಪಗಳನ್ನು ಹಿಡಿದು ಸಾಲಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡರು.