ಗೋಣಿಕೊಪ್ಪಲು, ಫೆ. ೨೦: ರಾಜ್ಯ ಹೆದ್ದಾರಿಯ ಅನತಿ ದೂರದಲ್ಲಿ ಕಾಡಾನೆಯೊಂದು ಕಾರ್ಮಿಕ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಗೋಣಿಕೊಪ್ಪ - ದೇವರಪುರ ರಾಜ್ಯ ಹೆದ್ದಾರಿ ಬಳಿಯ ಚನ್ನಂಗೊಲ್ಲಿ ಬಳಿಯ ಈಸ್ಟ್, ವೆಸ್ಟ್ ಕಾಫಿ ಮಿಲ್ ಬಳಿಯ ರಸ್ತೆ ಬಳಿ ಇರುವ ಪುತ್ತರಿ ಬರೆ ಕಾಫಿ ತೋಟದಲ್ಲಿ ಕಾಡಾನೆ ಗೋಣಿಕೊಪ್ಪಲು, ಫೆ. ೨೦: ರಾಜ್ಯ ಹೆದ್ದಾರಿಯ ಅನತಿ ದೂರದಲ್ಲಿ ಕಾಡಾನೆಯೊಂದು ಕಾರ್ಮಿಕ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಗೋಣಿಕೊಪ್ಪ - ದೇವರಪುರ ರಾಜ್ಯ ಹೆದ್ದಾರಿ ಬಳಿಯ ಚನ್ನಂಗೊಲ್ಲಿ ಬಳಿಯ ಈಸ್ಟ್, ವೆಸ್ಟ್ ಕಾಫಿ ಮಿಲ್ ಬಳಿಯ ರಸ್ತೆ ಬಳಿ ಇರುವ ಪುತ್ತರಿ ಬರೆ ಕಾಫಿ ತೋಟದಲ್ಲಿ ಕಾಡಾನೆ ಮಂಜಿತ್ ಜೊತೆ ಒಂದೂವರೆ ವರ್ಷ ಪ್ರಾಯದ ಅಕ್ಕನ ಮಗು ಸಹ ಇತ್ತು. ಆನೆ ಕೋರೆಯಿಂದ ಆತನನ್ನು ಎತ್ತಿ ಒಂದು ಅಡಿ ದೂರ ಎಸೆದಿದೆ. ಮಗುವನ್ನು ಗಟ್ಟಿಯಾಗಿ ಅಪ್ಪಿಕೊಂಡು ಆನೆಯ ಎಸೆತಕ್ಕೆ ದೂರ ಬಿದ್ದ ಮಂಜೀದ್ ಸೊಂಟ ಮತ್ತು ಹೊಟ್ಟೆಯ ಭಾಗಕ್ಕೆ ತೀವ್ರ ಘಾಸಿಯಾಗಿದೆ.

ಬಿದ್ದ ರಭಸಕ್ಕೆ ಮಗುವಿನ ದವಡೆ ಭಾಗವು ಊದಿಕೊಂಡಿದೆ. ಕಾಫಿ ಕೆಲಸಕ್ಕೆ ಹಿಂದಿನಿAದ ಬರುತ್ತಿದ್ದ ಕಾರ್ಮಿಕರು ಜೋರಾಗಿ ಕಿರುಚಿಕೊಂಡ ಕಾರಣ ಆನೆ ಸ್ಥಳದಿಂದ ತೆರಳಿದೆ. ಇದರಿಂದಾಗಿ ಹೆಚ್ಚಿನ ಅನಾಹುತವಾಗುವುದು ತಪ್ಪಿದಂತಾಗಿದೆ.

ಪತ್ರಕರ್ತ ಜಗದೀಶ್ ಜೋಡುಬೀಟಿ, ದಲಿತ ಸಂಘರ್ಷ ಸಮಿತಿಯ ಟಿ.ಎನ್. ಗೋವಿಂದಪ್ಪ, ಸತೀಶ್ ಸಿಂಗಿ ಹಾಗೂ ನಾಗೇಂದ್ರ ಅವರು ಮಂಜೀದ್ ಹಾಗೂ ಮಗುವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆಯನ್ನು ನೀಡಲು ಸಹಕರಿಸಿದರು.

ಆನೆ ದಾಳಿ ನಡೆಸಿದ ಸ್ಥಳಕ್ಕೆ ತಿತಿಮತಿ ಅರಣ್ಯ ಅಧಿಕಾರಿಗಳಾದ ಎಸಿಎಫ್ ಗೋಪಾಲ್, ಆರ್.ಎಫ್.ಒ. ಗಂಗಾಧರ್, ಉಮಾಶಂಕರ್, ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಆಸ್ಪತ್ರೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ಕಾಫಿ ತೋಟದಲ್ಲಿ ಕಾಡಾನೆ ಇದ್ದ ಕಾರಣ ಯಾವುದೇ ಕಾರ್ಮಿಕರು ಕೆಲಸಕ್ಕೆ ಮುಂದಾಗಲಿಲ್ಲ. ಕಾಡಾನೆ ಓಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮುಂದಾಗಿದ್ದಾರೆ.

- ಹೆಚ್.ಕೆ. ಜಗದೀಶ್/ ಎನ್. ಎನ್. ದಿನೇಶ್