ಮಡಿಕೇರಿ, ಫೆ. ೮: ನಗರಸಭೆ ಯಲ್ಲಿ ನಾಲ್ಕು ವರುಷಗಳಿಂದ ದುಡಿಯುತ್ತಿದ್ದು, ಅನಾರೋಗ್ಯದಿಂದ ಕಾಲು ಕಳೆದುಕೊಂಡ ಹೋಬಳೇಶ್ (ಹೋಬ್ಳಿ) ಅವರಿಗೆ ಇಂದು ಮಡಿ ಕೇರಿ ರೋಟರಿ ವುಡ್ಸ್ ವತಿಯಿಂದ ಕೃತಕ ಕಾಲು ಒದಗಿಸಲಾಯಿತು.

ಅಧ್ಯಕ್ಷ ವಸಂತ್ ಕುಮಾರ್ ಹಾಗೂ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಕೃತಕ ಕಾಲನ್ನು ಹಸ್ತಾಂತರಿಸಿದರು. ಶ್ರಮಜೀವಿ ಹೋಬಳೇಶ್ ಅವರಿಗೆ ಐದು ತಿಂಗಳ ಹಿಂದೆ ಪಾದದ ಬಳಿ ನೋವು ಆರಂಭಗೊAಡು, ತೊಡೆಯಿಂದ ಕೆಳಗೆ ಒಂದು ಕಾಲು ಕತ್ತರಿಸ ಬೇಕಾಗಿ ಬಂದಿತ್ತು.

ಈ ಸಂದರ್ಭ ಮಾತ ನಾಡಿದ ಜಿ. ರಾಜೇಂದ್ರ ಅವರು, ಮಲ್ಲಿಕಾರ್ಜುನ ನಗರದ ಶ್ರೀ ರಾಮ ದೇಗುಲದ ಜಾಗವನ್ನು ಹೋಬಳೇಶ್ ಅವರ ಕುಟುಂಬ ಒದಗಿಸಿದ್ದು, ಕಾಲು ಕಳೆದುಕೊಂಡ ಅವರಿಗೆ ಕೃತಕ ಕಾಲು ನೀಡಲು ಸಾಧ್ಯವೇ ಎಂದು ರೋಟರಿ ಸಂಸ್ಥೆ ಯನ್ನು ಕೇಳಿದುದಾಗಿ ಹೇಳಿದರು.

ರೋಟರಿ ವುಡ್ಸ್ ಸೇವೆ ಒದಗಿಸಲು ಸದಾ ಸಿದ್ಧವಿದ್ದು, ಸದ್ಯದಲ್ಲೇ ಮತ್ತೊಬ್ಬರಿಗೆ ಗಾಲಿ ಕುರ್ಚಿ ನೀಡಲಿರುವುದಾಗಿ ವಸಂತ್‌ಕುಮಾರ್ ಹೇಳಿದರು.

ರೋಟರಿ ವುಡ್ಸ್ ಸಲಹೆಗಾರ ಬಿ.ಜಿ. ಅನಂತಶಯನ, ಸದಸ್ಯ ರುಗಳಾದ ರಾಜೇಶ್ ಚೌಧುರಿ, ಝಹೀರ್ ಅಹ್ಮದ್, ಧನಂಜಯ ಶಾಸ್ತಿç, ಪ್ರವೀಣ್, ರವಿಕುಮಾರ್ ಭಾಗವಹಿಸಿದ್ದರು.