ಗೋಣಿಕೊಪ್ಪ ವರದಿ, ಫೆ. ೮: ತೂಚಮಕೇರಿ ಗ್ರಾಮದ ಶತಾಯುಷಿ ಚಿಂಡಮಾಡ ಮಾದಪ್ಪ ಅವರನ್ನು ಕಿಗ್ಗಟ್ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಟೈಲರಿಂಗ್ ವೃತ್ತಿಯೊಂದಿಗೆ ತೂಚಮಕೇರಿ ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಸಾಮಾಜಿಕ, ರಾಜಕೀಯವಾಗಿ, ತೂಚಮಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸೇವೆ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭಕೋರಲಾಯಿತು.
ವೇದಿಕೆ ಆಡಳಿತ ಮಂಡಳಿ ಸದಸ್ಯರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಮಂಡೆಚAಡ ಗಣಪತಿ, ಚೇಂದೀರ ಎಂ. ಬೋಪಣ್ಣ, ಐನಂಡ ಕೆ. ಮಂದಣ್ಣ, ಮಾಚಿಮಾಡ ಲೌಲಿ ಸೋಮಯ್ಯ, ಕೇಚೇಟ್ಟೀರ ಕಾಮುಣಿ ಪೂಣಚ್ಚ, ಮದ್ರೀರ ಸಿ. ಕರುಂಬಯ್ಯ, ಕಾಟಿಮಾಡ ಡಿಕ್ಕಿ ಅಣ್ಣಯ್ಯ, ಮಾಣಿಪಂಡ ಪಾರ್ವತಿ ಜೋಯಪ್ಪ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ನೆರೆಯಂಡಮ್ಮನ ಎಸ್. ಸುಬ್ರಮಣಿ, ಚಿಂಡಮಾಡ ಬೋಪಯ್ಯ ಇದ್ದರು.