ಚೆಯ್ಯಂಡಾಣೆ, ಫೆ. ೮: ಕೇರಳ ರಾಜ್ಯದ ಪಯ್ಯವೂರ್‌ನಿಂದ ಕೋಮರತಚ್ಚನ್ ದೈವ ಆಗಮಿಸಿದೆ. ಮುಂಡಿಯೋಳAಡ ತಕ್ಕ ಮುಖ್ಯಸ್ಥರು ಕೋಮರತಚ್ಚನ್‌ರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ನAತರ ಬೊವ್ವೇರಿಯಂಡ ಐನ್‌ಮನೆಗೆ ತೆರಳಿ ಅಲ್ಲಿಂದ ಕೊಕೇರಿ ಗ್ರಾಮದ ಚೇರುವಾಳಂಡ, ಬಿದ್ದಂಡ, ಮೂಡೇರ, ಮಚ್ಚಂಡ, ಪೆಮ್ಮಂಡ ಐನ್‌ಮನೆ ಹಾಗೂ ಕೊಕೇರಿ ಭಗವತಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಕಿರುಂದಾಡು ಮಚ್ಚಂಡ ಐನ್‌ಮನೆ ಕೈಕಾಡು ನಾಯಕಂಡ, ಪಾಡೇಯಂಡ, ಅಪ್ಪನೆರವಂಡ ಐನ್‌ಮನೆಗೆ ತೆರಳಿ ಚೇರಂಬಾಣೆಯ ಬೈಮನ, ಬಲಮುರಿ ಭಗವತಿ ದೇವಸ್ಥಾನ, ಚೆಯ್ಯಂಡ, ಬೊಳ್ ತಂಡ, ಬೆಲ್ಲತಂಡ, ಅರಪ್ಪಟ್ಟು ಗ್ರಾಮದ ಪಾಂಡAಡ, ಕರಡ ಗ್ರಾಮದ ನಡಿಕೇರಿಯಂಡ, ಐತಿಚಂಡ, ಪಾಲಂಗಾಲ ಗ್ರಾಮದ ಕರಿನೆರವಂಡ, ನರಿಯಂದಡ ಗ್ರಾಮದ ಪೊಕ್ಕುಳಂಡ್ರ ಐನ್‌ಮನೆಗೆ ತೆರಳಿ ಬೊವ್ವೇರಿಯಂಡ ಐನ್‌ಮನೆಯಲ್ಲಿ ಉಳಿದುಕೊಂಡಿತು.

ನAತರ ನಾಡ್ ಮಂದ್ ಪೆಬ್ಬಟ್ಟಾಣೆಯಲ್ಲಿ ದೇವರು ಬಂದು ನಿಂತ ಸ್ಥಳದಲ್ಲಿ ನಾಡಿನ ಎಲ್ಲರು ಸೇರಿ, ನಂತರ ಚೇಲಾವರದ ಪಟ್ಟಚೇರ್‌ವಂಡ ಐನ್‌ಮನೆಗೆ ತೆರಳಿ ಅಲ್ಲಿಂದ ಚೇಲಾವರ ಪೋನ್ನೋಲ ದೇವಸ್ಥಾನದಲ್ಲಿ ಉಳಿದು ತಾ.೯ ರಂದು (ಇಂದು) ಬೆಳಿಗ್ಗೆ ಕಾಲ್ನಡಿಗೆಯ ಮುಖಾಂತರ ಚೇಲಾವರದಿಂದ ಕಾಡುದಾರಿಯಲ್ಲಿ ಕೇರಳ ರಾಜ್ಯದ ಪಯ್ಯವೂರ್‌ಗೆ ತೆರಳಲಿದೆ. ಈ ಸಂದರ್ಭ ತಕ್ಕ ಮುಖ್ಯಸ್ಥರು, ನಾಡಿನ ಪ್ರಮುಖರು ಉಪಸ್ಥಿತರಿದ್ದರು.