ಪಾಲಿಬೆಟ್ಟ, ಫೆ. ೮: ತಾ.೯ ರಿಂದ ೧೨ರವರೆಗೆ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ಪ್ರಯುಕ್ತ ವೃತ್ತ ನಿರೀಕ್ಷಕರಾದ ರಾಜು ಅಧ್ಯಕ್ಷತೆಯ ವಿವಿಧ ಧರ್ಮಗಳ ಪ್ರಮುಖರ ಶಾಂತಿ ಸಭೆ ಪಾಲಿಬೆಟ್ಟ ಉಪಠಾಣೆಯಲ್ಲಿ ನಡೆಯಿತು.

ಉರೂಸ್‌ಗೆ ಭಕ್ತಾದಿಗಳು ಬರಲು ತೊಂದರೆಯಾಗದAತೆ, ವಾಹನ ಸಂಚಾರದ ಮೇಲೆ ನಿಗಾವಹಿಸುವುದು, ಅನಾವಶ್ಯಕವಾಗಿ ರಸ್ತೆಯಲ್ಲಿ ವಾಹನಗಳು ಸಂಚರಿಸುವAತಿಲ್ಲ. ನಾಲ್ಕು ದಿನ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಮೂರು ಧರ್ಮದವರು ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್, ಗಣಪತಿ ಸೇವಾ ಮಿತ್ರ ಮಂಡಳಿ ಅಧ್ಯಕ್ಷ ಅಜಿತ್ ಕರುಂಬಯ್ಯ, ಜುಮ್ಮಾ ಮಸೀದಿ ಉಪಾಧ್ಯಕ್ಷ ಸೈನುದ್ದೀನ್ , ಕಾರ್ಯದರ್ಶಿ ಶಮೀರ್, ಕ್ರೆöÊಸ್ತ ಸಮುದಾಯದ ಮುಖಂಡರುಗಳಾದ ಸ್ಟಾö್ಯನ್ಲಿ, ರಿಚರ್ಡ್, ಮೈಕಲ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಬ್ದುಲ್ ನಾಸಿರ್, ಮಾಳೇಟಿರ ಪವಿತ್ರ, ಆಟೋ ಚಾಲಕರ ಸಂಘದ ಅಧ್ಯಕ್ಷ ಪವನ್, ಎಸ್‌ಐ ಮೋಹನ್, ಸಿಬ್ಬಂದಿಗಳಾದ ರತನ್ ಮತ್ತು ಮೊಹಮ್ಮದ್ ಅಲಿ ಇದ್ದರು.