ಪಾಲಿಬೆಟ್ಟ, ಫೆ. ೮: ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ತಾ. ೯ ರಿಂದ ೧೨ ತನಕ ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ.

ತಾ. ೯ರಂದು ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಸೀದಿಯ ಖತಿಬ್ ಅಲಿ ಸಖಾಫಿ ಉದ್ಘಾಟನೆ ಮಾಡಲಿದ್ದಾರೆ.

ಧಾರ್ಮಿಕ ಪಂಡಿತ ಸಯ್ಯದ್ ಜಾಫರ್ ಸಾಧಿಕ್ ತಂಗಳ್ ಕೊಂಬೋಳ್ ದುಆ ನೇತೃತ್ವ ವಹಿಸಲಿದ್ದಾರೆ. ರಾತ್ರಿ ಮತ ಪ್ರಭಾಷಣ ಮತ್ತು ದಿಕ್ರ್ ದುವಾ ಮಜ್ಲೀಸ್ ನೇತೃತ್ವವನ್ನು ಸಯ್ಯದ್ ಮೊಹಸ್ಸಿನ್ ಆಲವಿಕೋಯ ತಂಗಳ್ ಕೇರಳ ಇವರು ವಹಿಸಲಿದ್ದಾರೆ. ತಾ.೧೦ ರಂದು ರಾತ್ರಿ ಧಾರ್ಮಿಕ ಪಂಡಿತ ಶಾಕಿರ್ ದಾರಿಮಿ ಕೇರಳ ಇವರು ಮತ ಪ್ರಭಾಷಣ ಮಾಡಲಿದ್ದಾರೆ. ತಾ.೧೧ ರಂದು ರಾತ್ರಿ ಲುಖುಮಾನುಲ್ ಹಕೀಮ್ ಸಖಾಫಿ ಅವರಿಂದ ಮತ ಪ್ರವಚನ ಹಾಗೂ ತಾ.೧೨ ರಂದು ಸಂಜೆ ೭-೦೦ ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಕನ್ನಡ ಮಠದ ಶ್ರೀ ಚನ್ನಬಸವ ದೇಸೀ ಕೇಂದ್ರ ಸ್ವಾಮಿ, ಪಾಲಿಬೆಟ್ಟ ಲೂರ್ಡ್ಸ್ ಚರ್ಚ್ ಧರ್ಮಗುರು ಶಶಿ ಕುಮಾರ್, ಶೈಖುನ ಸಮಸ್ತ ಕೇಂದ್ರ ಮುಶಾವರ ಸದಸ್ಯ ಎಂ.ಎA. ಅಬ್ದುಲ್ಲ ಫೈಜಿ, ಪಾಲಿಬೆಟ್ಟ ಮಸೀದಿ ಜಂಟಿ ಕಾರ್ಯದರ್ಶಿ ಸಮೀರ್ ಎ.ಹೆಚ್, ಪ್ರದಾನ ಕಾರ್ಯದರ್ಶಿ ಅಶ್ರಫ್ ಅಪ್‌ಸನಿ, ವಕ್ಫ್ ಮಾಜಿ ಅಧ್ಯಕ್ಷ ಅನ್ವಾರಲ್ ಹುದಾ, ಟಾಟಾ ಕಾಫಿ ಉಪಾಧ್ಯಕ್ಷ ಎಂ.ಬಿ. ಗಣಪತಿ, ಕಾಯಂಬೆಟ್ಟ ಎಸ್ಟೇಟ್ ಮಾಲೀಕ ಕಾರ್ತಿ ಚಿದಂಬರA ಪಾಲ್ಗೊಳ್ಳಲಿದ್ದಾರೆ. ತಾ.೧೨ ರಂದು ಸಂಜೆ ೬.೩೦ ಗಂಟೆಯಿAದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.