ಸಿದ್ದಾಪುರ, ಫೆ. ೮: ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ದೇವಾಲಯದ ೩೧ನೇ ವರ್ಷದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ತಾ. ೧೭ ಹಾಗೂ ೧೮ ರಂದು ನಡೆಯಲಿದೆ.
ತಾ. ೧೭ ರಂದು ಬೆಳಿಗ್ಗೆ ೮.೦೦ ಗಂಟೆಗೆ ಗಣಪತಿ ಹೋಮ, ಸಂಜೆ ೫.೩೦ಕ್ಕೆ ಧ್ವಜಾರೋಹಣವನ್ನು ತೋಟಂಬೈಲು ಬಿ.ತಿಮ್ಮಯ್ಯ ನವರು ನೆರವೇರಿಸಲಿದ್ದಾರೆ. ೫.೪೫ಕ್ಕೆ ಉತ್ಸವವನ್ನು ಎಸ್.ಎನ್.ಡಿ.ಪಿ ಜಿಲ್ಲಾ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಹಾಗೂ ನಿವೃತ್ತ ವಲಯ ಅರಣ್ಯಾಧಿಕಾರಿ ಎಂ.ಬಿ ಮೊಣ್ಣಪ್ಪರವರು ಉದ್ಘಾಟಿಸಲಿದ್ದಾರೆ. ಸಂಜೆ ೬.೩೦ಕ್ಕೆ ಕೆ.ಪಿ ಶ್ರೀ ಮುತ್ತಪ್ಪನ ಕಲಶವನ್ನು ವಾದ್ಯಗೋಷ್ಠಿಯೊಂದಿಗೆ ಶ್ರೀ ಮುತ್ತಪ್ಪ ದೇವಾಲಯಕ್ಕೆ ಕರೆತರಲಾಗುವುದು. ಸಂಜೆ ೬.೦೦ಕ್ಕೆ ಮುತ್ತಪ್ಪನ ಮಲೆ ಇಳಿಸುವುದು. ೬.೩೦ಕ್ಕೆ ಮುತ್ತಪ್ಪನ ವೆಳ್ಳಾಟಂ, ರಾತ್ರಿ ೮.೦೦ಕ್ಕೆ ಶಾಸ್ತಪ್ಪನ ವೆಳ್ಳಾಟಂ, ರಾತ್ರಿ ೯.೦೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ೧೦.೦೦ ಕ್ಕೆ ಶ್ರೀ ಭಗವತಿ ವೆಳ್ಳಾಟಂ, ರಾತ್ರಿ ೧೧.೦೦ ಕ್ಕೆ ಗುಳಿಗನ ವೆಳ್ಳಾಟಂ ನಡೆಯಲಿದೆ.
ತಾ. ೧೮ರಂದು ಬೆಳಿಗ್ಗೆ ೫.೦೦ ಗಂಟೆಗೆ ಗುಳಿಗನ ತೆರೆ, ೫.೩೦ಕ್ಕೆ ಶಾಸ್ತಪ್ಪನ ತೆರೆ, ಬೆಳಿಗ್ಗೆ ೬.೦೦ ಗಂಟೆಗೆ ತಿರುವಪ್ಪನ ತೆರೆ, ಬೆಳಿಗ್ಗೆ ೯.೦೦ ಗಂಟೆಗೆ ಭಗವತಿ ತೆರೆ, ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.