ಮಡಿಕೇರಿ, ಫೆ. ೭: ಕೊಡಗಿನ ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ಮಾಲೀಕರು ಹಾಗೂ ಸಿಬ್ಬಂದಿಗೆ ಕಿಂಬರ್ಲಿ ಕೂರ್ಗ್ ರಿಕ್ರಿಯೆಷನ್ ವತಿಯಿಂದ ಆಯೋಜಿಸಲಾದ ಕೂರ್ಗ್ ಕ್ರಿಕೆಟ್ ಕ್ಲಾಶ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಚಾಲನೆ ದೊರಕಿತು.
ಕ್ರೀಡಾಕೂಟಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಚಾಲನೆ ನೀಡಿ ಆಟಗಾರರಿಗೆ ಶುಭ ಕೋರಿದರು. ಈ ಸಂದರ್ಭ ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಪ್ರಮುಖರಾದ ಕೆ.ಎಂ. ಗಣೇಶ್, ಮದನ್ ಕೆ.ಜಿ. ಹಾಗೂ ಇತರರು ಹಾಜರಿದ್ದರು.
ಬಾಕ್ಸ್ ಕ್ರಿಕೆಟ್ ಹಾಗೂ ಸಾಧಾರಣ ಬೌಂಡರಿ ೨ ವಿಭಾಗಗಳಲ್ಲಿ ಪಂದ್ಯಾವಳಿಯು ತಾ.೯ ರವರೆಗೂ ನಡೆಯಲಿದೆ.
ಸಾಧಾರಣ ಬೌಂಡರಿ ವಿಭಾಗದಲ್ಲಿನ ಲೀಗ್ ಮಟ್ಟದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಇಂದು ಪ್ರಾರಂಭಗೊAಡಿದ್ದು, ಒಟ್ಟು ೧೬ ತಂಡಗಳಾದ ಕ್ಲಬ್ ಮಹೀಂದ್ರ ವೀರಾಜಪೇಟೆ, ಹೆರಿಟೇಜ್ ರೆಸಾರ್ಟ್, ಕೂರ್ಗ್ ವೈಲ್ಡರ್ನೆಸ್ ರೆಸಾರ್ಟ್, ಜೆ. ಡಬ್ಲೂö್ಯ ಮ್ಯಾರಿಯಟ್, ಕೂರ್ಗ್ ಇಂಟರ್ನ್ಯಾಷನಲ್, ಆಯತನ ರೆಸಾರ್ಟ್, ಅಮಾನ್ವಾನ ರೆಸಾರ್ಟ್, ಫೋರ್ಟ್ ಮರ್ಕೆರ, ಔರಿಕಾ ರೆಸಾರ್ಟ್, ಪರ್ಪಲ್ ಪಾಮ್ಸ್ ರೆಸಾರ್ಟ್, ವಿಷ್ಮ ರೆಸಾರ್ಟ್, ಕ್ಲಬ್ ಮಹೀಂದ್ರ ಮಡಿಕೇರಿ , ಗವದಾನ ರೆಸಾರ್ಟ್, ಕೂರ್ಗ್ ಕೌಂಟಿ, ಎವರ್ಗ್ರೀನ್ ಕೌಂಟಿ, ಮ್ಯಾಗ್ನೋಲಿಯ ರೆಸಾರ್ಟ್ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.
೪ ಗುಂಪುಗಳಲ್ಲಿ ೧೬ ತಂಡಗಳನ್ನು ವಿಂಗಡಿಸಲಾಗಿದ್ದು, ಇಂದು ೨ ಗುಂಪುಗಳ ಪಂದ್ಯಗಳು ನಡೆದವು. ಪ್ರತಿ ಪಂದ್ಯವು ೪ ಓವರ್ಗಳಿಗೆ ಸೀಮಿತವಾಗಿದ್ದು, ಇದರಲ್ಲಿ ವಿಷ್ಮ ರೆಸಾರ್ಟ್ ಹಾಗೂ ಹೆರಿಟೇಜ್ ರೆಸಾರ್ಟ್ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ. ತಾ.೮ ರಂದು ಮತ್ತೆರಡು ಗುಂಪಿಗಳಲ್ಲಿನ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ. ತೀರ್ಪುಗಾರರಾಗಿ ಶೈರಾನ್, ಹನೀಫ್ ಹಾಗೂ ಸುಮುಖ್ ಕಾರ್ಯನಿರ್ವಹಿಸಿದರು.