ಕುಶಾಲನಗರ, ಫೆ. ೭: ಕುಶಾಲ ನಗರ ರಸ್ತೆ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಮಧ್ಯಾಹ್ನ ಏಕಾಏಕಿ ಬೆಂಕಿ ಕಂಡುಬAದು ಆತಂಕದ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಬಸ್ಸು ನಿಲ್ದಾಣದ ಆವರಣ ದಲ್ಲಿರುವ ಶೌಚಾಲಯದ ಸಮೀಪ ರಾಶಿ ಬಿದ್ದಿದ್ದ ಕಸಕ್ಕೆ ಬೆಂಕಿ ತಗುಲಿದೆ.

ಈ ಸಂದರ್ಭ ಗಮನಿಸಿದ ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿ ನೀರು ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೌಚಾಲಯಕ್ಕೆ ತೆರಳಿದ ಪ್ರಯಾ ಣಿಕನೊಬ್ಬ ಸಿಗರೇಟ್ ಸೇದಿ ಅದನ್ನು ಹೊರಗೆ ಎಸೆದ ಸಂದರ್ಭ ಈ ಬೆಂಕಿ ತಗಲಿದೆ ಎಂದು ತಿಳಿದು ಸ್ವಚ್ಛತಾ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಶೌಚಾಲಯದ ಸಮೀಪದಲ್ಲಿ ಹಲವು ದ್ವಿಚಕ್ರ ವಾಹನಗಳನ್ನು ನಿಲುಗಡೆಗೊಳಿಸಿದ್ದು ತಕ್ಷಣ ಬೆಂಕಿ ಆರಿಸಿದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ.