ಕುಶಾಲನಗರ, ಫೆ. ೬: ನಿನ್ನೆ ಕುಶಾಲನಗರದ ಬಿ.ಎಂ. ರಸ್ತೆಯಲ್ಲಿರುವ ಕೊಡಗನ ಮೋಟಾರ್ಸ್ ವೆಸ್ಪಾ ಶೋರೂಂನಲ್ಲಿ ನಡೆದಿದ್ದ ಸದಿದ್ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ದಿನ ಮಡಿಕೇರಿಯ ಗಣಪತಿ ಬೀದಿ ನಿವಾಸಿಗಳಾದ ಫವಾಜ್, ಇಸ್ಸಾಂ ಮತ್ತು ಸದಿದ್ ಇವರುಗಳು ಫವಾಜ್ನ (ಕೆಎ-೧೨ ಯು-೪೨೭೮) ವೆಸ್ಪ ಸ್ಕೂಟಿಯನ್ನು ಸರ್ವಿಸ್ ಮಾಡಿಸುವ ಸಲುವಾಗಿ ಕುಶಾಲನಗರದ ಬಿ.ಎಂ. ರಸ್ತೆಯಲ್ಲಿರುವ ಕೊಡಗನ ಮೋಟಾರ್ಸ್ ವೆಸ್ಪ ಶೋರೂಂಗೆ ತೆರಳಿದ್ದಾರೆ. ಅಲ್ಲಿ ಸದಿದ್ ತನ್ನ ಸ್ನೇಹಿತ ಫೈಜಲ್ ಎಂಬಾತನನ್ನು ಅಲ್ಲಿಗೆ ಕರೆಸಿಕೊಂಡಿದ್ದಾನೆ. ಬಳಿಕ ಸದಿದ್ ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತಿದ್ದು, ಫೈಜಲ್, ಫವಾಜ್ ಮತ್ತು ಇಸ್ಸಾಂ ಮೂರು ಜನ ಅಲ್ಲೇ ನಿಂತಿದ್ದರು. ಅಲ್ಲಿಗೆ ಬಂದ ಶೋರೂಂ ಮಾಲೀಕ ಶ್ರೀನಿಧಿ ಕುರ್ಚಿಯಲ್ಲಿ ಕುಳಿತಿದ್ದ ಸದಿದ್ನಿಗೆ ನನ್ನ ಕುರ್ಚಿಯಲ್ಲಿ ಕೂರಲು ನೀನು ಯಾವನು? ಎಂದು ಹೇಳಿ ಕೈಯಿಂದ ಕಪಾಳಕ್ಕೆ ಹೊಡೆದಿದ್ದಾನೆ. ಅಲ್ಲಿಯೇ ಇದ್ದ ಶ್ರೀನಿಧಿಯ ಸ್ನೇಹಿತ ಅಲೀಂ ಎಂಬಾತ ಬಂದು ಶ್ರೀನಿಧಿಗೆ ಬೆಂಬಲವಾಗಿ ನಿಂತು ನಾಲ್ಕು ಜನರಿಗೆ ನಿಂದಿಸಿದ್ದಾನೆ. ಫೈಜಲ್, ಫವಾಜ್ ಮತ್ತು ಇಸ್ಸಾಂ ಮೂರು ಜನ ಸೇರಿ ಶ್ರೀನಿಧಿ ಹಾಗೂ ಸದಿದ್ನ ಜಗಳವನ್ನು ಬಿಡಿಸಿದ್ದು, ಶ್ರೀನಿಧಿ ಶೋರೂಂನ ಒಳಗೆ ಟೈಲರಿಂಗ್ ಮಿಷನ್ ಮೇಲಿದ್ದ ಕತ್ತರಿಯನ್ನು ತಂದು ಏಕಾಏಕಿ ಸದಿದ್ನ ಬಲಭಾಗದ ಎದೆಯ ಭಾಗಕ್ಕೆ ಚುಚ್ಚಿ ಗಾಯಗೊಳಿಸಿ, ನಾನು ಹತ್ತು ವರ್ಷ ಜೈಲಿನಲ್ಲಿದ್ದರೂ ಪರವಾಗಿಲ್ಲ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಕೂಗಾಡಿದ್ದಾನೆ. ಆತನ ಸ್ನೇಹಿತ ಅಲೀಂ ಶ್ರೀನಿಧಿಯಾಗಿದ್ದಕ್ಕೆ ಎದೆಯ ಭಾಗಕ್ಕೆ ಚುಚ್ಚಿದ್ದಾರೆ ನಾನಾಗಿದ್ದರೇ ನೇರವಾಗಿ ನಿನ್ನ ಕುತ್ತಿಗೆಯ ಭಾಗಕ್ಕೆ ಚುಚ್ಚಿ ಸಾಯಿಸುವುದಾಗಿ ಬೈದು ಶ್ರೀನಿಧಿಗೆ ಬೆಂಬಲ ನೀಡುತ್ತಾನೆ.
ಗಾಯಗೊಂಡ ಸದಿದ್ನನ್ನು ಚಿಕಿತ್ಸೆಗಾಗಿ ಆಟೋದಲ್ಲಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಆ್ಯಂಬುಲೆನ್ಸ್ ವಾಹನದಲ್ಲಿ ಫವಾಜ್ ಮತ್ತು ಇಸ್ಸಾಂ ಮೈಸೂರಿನ ಎನ್.ಹೆಚ್. ಆಸ್ಪತ್ರೆಗೆ ಸೇರಿಸಿದ್ದು, ರಾತ್ರಿ ೭.೫೫ ಗಂಟೆ ವೇಳೆಗೆ ಸದಿದ್ ಮೃತಪಟ್ಟಿದ್ದಾನೆ. ಈ ಬಗ್ಗೆ ಫೈಜಲ್ ದೂರು ನೀಡಿದ್ದು, ಕೊಲೆ ಮಾಡಿದ ಶ್ರೀನಿಧಿ, ಕೃತ್ಯಕ್ಕೆ ಬೆಂಬಲಿಸಿದ ಅಲೀಂನನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಇವರುಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
(ಮೊದಲ ಪುಟದಿಂದ)
ರಜೆಯಲ್ಲಿ ಬಂದಿದ್ದ ಸದಿದ್: ಗಣಪತಿ ಬೀದಿಯ ಸೌಕತ್ ಎಂಬವರ ದ್ವಿತೀಯ ಪುತ್ರನಾಗಿದ್ದ ಸದಿದ್ ದುಬೈನಲ್ಲಿ ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇತ್ತೀಚೆಗೆ ಸಂಬAಧಿಕರೊಬ್ಬರ ವಿವಾಹ ಸಮಾರಂಭಕ್ಕೆAದು ಮನೆಗೆ ಆಗಮಿಸಿದ್ದು, ಇನ್ನೇನು ಕೆಲ ದಿನಗಳಲ್ಲಿ ದುಬೈಗೆ ತೆರಳಬೇಕಿತ್ತು. ಮೂರು ತಿಂಗಳ ರಜೆಯಲ್ಲಿದ್ದ ಕಾರಣ ನಗರದಲ್ಲಿ ತಾತ್ಕಾಲಿಕವಾಗಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಸದಿದ್ ನಿನ್ನೆ ದಿನ ಕುಶಾಲನಗರಕ್ಕೆ ದ್ವಿಚಕ್ರ ವಾಹನ ರಿಪೇರಿ ಮಾಡಿಸಲು ತೆರಳಿದ್ದಾಗ ದುರ್ಘಟನೆ ಸಂಭವಿಸಿತ್ತು. ಇಂದು ಸದಿದ್ ಮೃತದೇಹ ಮಡಿಕೇರಿಗೆ ಬಂದ ಸಂದರ್ಭ ಗಣಪತಿ ಬೀದಿಯ ಆತನ ಮನೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾವಣೆಗೊಂಡಿದ್ದರು. ಚೌಕಿ, ಮಹದೇವಪೇಟೆ, ಗಣಪತಿ ಬೀದಿ ಸೇರಿದಂತೆ ಸೂಕ್ಷö್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸದಿದ್ ಅಂತ್ಯಕ್ರಿಯೆ ನಗರದ ಖಬರಸ್ಥಾನದಲ್ಲಿ ನೆರವೇರಿತು.
ಕುಶಾಲನಗರದಲ್ಲಿ ಬಂದೋಬಸ್ತ್: ಪ್ರಕರಣಕ್ಕೆ ಸಂಬAಧಿಸಿದAತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ, ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಘಟನೆ ನಡೆದ ಸ್ಥಳದಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಜಿಲ್ಲಾ ಸಶಸ್ತçದಳದ ವಾಹನ ನಿಯೋಜಿಸಲಾಗಿತ್ತು.
ನೆರೆಯ ಹಾಸನ ಜಿಲ್ಲೆಯಿಂದ ರಾಜ್ಯ ಮೀಸಲು ಪಡೆಯ ಎರಡು ಬಸ್ಸುಗಳ ಪೊಲೀಸರನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಭದ್ರತೆಗೆ ನಿಯೋಜಿಸಿದ್ದು ಕಂಡು ಬಂತು.