ಮಡಿಕೇರಿ, ಫೆ. ೬: ಕೇಂದ್ರದ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲ ಯವನ್ನು ಬಳಸಿಕೊಂಡು ಪ್ರತಿಪಕ್ಷದವರಿಗೆ ಕಿರುಕುಳ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿದ್ದು, ಇಂತಹ ರಾಜಕಾರಣ ಜನತಂತ್ರ ವ್ಯವಸ್ಥೆಗೆ ಮಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಆರೋಪಿದ್ದು, ಇಂತಹ ರಾಜಕಾರಣ ಜನತಂತ್ರ ವ್ಯವಸ್ಥೆಗೆ ಮಾರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಮಾಡುತ್ತಿದ್ದಾರೆ. ಭಾರತಕ್ಕೆ ಸ್ವಾತಂತ್ರö್ಯ ಬಂದಾಗ ಇದ್ದ ೩೩ ಕೋಟಿ ಜನರಿಗೆ ಅನ್ನವಿರಲಿಲ್ಲ. ಅಂತಹ ಸಂದರ್ಭದಲ್ಲಿ ನೆಹರು ಅವರು ಪಂಚವಾರ್ಷಿಕ ಯೋಜನೆಗಳ ಮೂಲಕ, ಹರಿಯುವ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿಸಿ ದೇಶದಲ್ಲಿ ಅನ್ನ ಬೆಳೆಯುವಂತೆ ಮಾಡಿದ್ದರು. ಇದನ್ನು ಈಗಿನ ಪ್ರಧಾನಿಗಳು ಅರ್ಥ ಮಾಡಿಕೊಳ್ಳ ಬೇಕೆಂದು ವಿಶ್ವನಾಥ್ ಹೇಳಿದರು.
ದಕ್ಷಿಣದ ಹಣ ಉತ್ತರದತ್ತ
ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲು ಹಣಕ್ಕಾಗಿ
(ಮೊದಲ ಪುಟದಿಂದ) ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಮಾತನಾಡಿದ ವಿಶ್ವನಾಥ್, ಕರ್ನಾಟಕ ರಾಜ್ಯ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿದೆ. ಆದರೆ ನಮ್ಮ ಹಣ ನಮ್ಮ ಜನರಿಗೆ ತಲುಪುವ ಬದಲು ಬೇರೆಯವರ ಪಾಲಾಗುತ್ತಿದೆ.
ಸಂಸದರುಗಳು ಕೂಡ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ದಕ್ಷಿಣದ ಹಣ ಉತ್ತರದತ್ತ ಹರಿಯುತ್ತಿದೆ ಎಂದು ನುಡಿದರು. ಶ್ರೀರಾಮ ಈ ದೇಶದ ಅಸ್ಮಿತೆ. ಶ್ರೀರಾಮನನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸುವುದು; ಚುನಾವಣೆ ವೇಳೆ ಮುಖ್ಯ ಚುನಾವಣಾ ಆಯುಕ್ತರಂತೆ ಬಿಂಬಿಸುವುದು ಒಳ್ಳೆಯದಲ್ಲ ಎಂದು ಹೇಳಿದರು.
ಟಿಕೇಟ್ ಕೇಳೋಣ ಅಂತ ಇದ್ದೀನಿ
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈ ಹಿಂದೆಯೂ ಸಂಸದನಾಗಿ ಮಂತ್ರಿಯಾಗಿ ಕೆಲಸ ಮಾಡಿದ ಅನುಭವವಿದೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ಕೇಳೋಣ ಅಂತ ಇದ್ದೀನಿ ಎಂದು ವಿಶ್ವನಾಥ್ ತಿಳಿಸಿದರು. ಸಾಹಿತ್ಯ ವಲಯದಿಂದ ಆರ್ಎಸ್ಎಸ್ ಮುಕುಂದ್ ಜೀ ಹಾಗೂ ಕೆಲ ನಾಯಕರ ಪ್ರೋತ್ಸಾಹದಿಂದ ನಾನು ವಿಧಾನಪರಿಷತ್ ಸದಸ್ಯನಾಗಿದ್ದೇನೆ. ರಾಜಕಾರಣ ನಿಂತ ನೀರಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರೂ ಕೂಡ ಒಂದೇ ಪಕ್ಷಕ್ಕೆ ಸೀಮಿತವಾದವರಲ್ಲ. ತನ್ನನ್ನು ರಾಜ್ಯಪಾಲರು ಎಂ.ಎಲ್.ಸಿ.ಯಾಗಿ ಮಾಡಿದ್ದು, ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ ಎಂದು ವಿಶ್ವನಾಥ್ ಹೇಳಿದರು. ಜೆಡಿಎಸ್ ಮಾಜಿ ಅಧ್ಯಕ್ಷ ಕೆ.ಎಂ. ಗಣೇಶ್ ಮತ್ತಿತರರು ನಿಮ್ಮನ್ನು ಬೆಂಬಲಿಸಿ ಪಕ್ಷ ತೊರೆದು ಇದೀಗ ಅತಂತ್ರರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ ಎಲ್ಲರಿಗೂ ಒಳ್ಳೆಯ ಸಮಯ ಬರುತ್ತದೆ ಎಂದು ಪ್ರತಿಕ್ರಿಯಿಸಿದರು.
ಡಿಕೆಶಿ ಪಕ್ಷ ನಿಷ್ಠೆ
ಪಕ್ಷದ ಮೇಲಿನ ನಿಷ್ಠೆಯ ವಿಚಾರ ಬಂದಾಗ ಡಿ.ಕೆ. ಶಿವಕುಮಾರ್ ಎಂದು ಹೇಳಬಹುದು. ಒಂದೊಮ್ಮೆ ಬೆಜೆಪಿಯನ್ನು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಬೈದಷ್ಟು ಬೇರೆ ಯಾರು ಬೈದಿದ್ದಾರೆ ಎಂದು ಪ್ರಶ್ನಿಸಿದ ವಿಶ್ವನಾಥ್, ಟಿಪ್ಪುವಿನ ಖಡ್ಗ ಪೇಟ ತೊಟ್ಟು ಫೋಟೋ ತೆಗೆಸಿಕೊಂಡವರು ಈಗ ಟಿಪ್ಪುಗೆ ಬೈಯ್ಯುತ್ತಾರೆ ಎಂದು ಕುಟುಕಿದರು.
೨೦೧೧-೧೨-೧೩ರಲ್ಲಿ ಕಾಫಿ ಧಾರಣೆ ಕುಸಿದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಣಕಾಸು ಮಂತ್ರಿಯಾಗಿದ್ದ ಪ್ರಣಬ್ ಮುಖರ್ಜಿ ಅವರೊಂದಿಗೆ ತಾನು ಮಾತುಕತೆ ನಡೆಸಿ ೩೫೦ ಕೋಟಿ ಪ್ಯಾಕೇಜ್, ವಿಧರ್ಭ ಪ್ಯಾಕೇಜ್ ಬಿಡುಗಡೆಗೊಳಿಸಲಾಗಿತ್ತು. ಕೃಷಿಕರ ೭೫ ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು ಎಂದು ವಿಶ್ವನಾಥ್ ಹೇಳಿದರು. ೨೦೧೩ರಲ್ಲಿ ಆಸ್ಕರ್ ಫರ್ನಾಂಡಿಸ್ ಅವರು ಕೇಂದ್ರ ಮಂತ್ರಿಯಾಗಿದ್ದಾಗ ಕೊಡಗಿನ ಮೂಲಕ ಬೆಂಗಳೂರು-ಮAಗಳೂರು ಹೆದ್ದಾರಿ ಯೋಜನೆ ಮಾಡಲಾಗಿತ್ತು. ಕೊಡಗಿಗೆ ಸಂಬAಧಿಸಿದAತೆ ೬೫೦ ಕೋಟಿ ರೈಲ್ವೇ ಯೋಜನೆಗೆ ಆಗಿನ ಸಚಿವ ಮುನಿಯಪ್ಪ ಅವರು ಶಂಕುಸ್ಥಾಪನೆ ಮಾಡಿದ್ದರು ಎಂದು ವಿಶ್ವನಾಥ್ ವಿವರಿಸಿದರು.
ಗೋಷ್ಠಿಯಲ್ಲಿ ಬಿ.ಪಿ. ದೇವಪ್ಪಗೌಡ, ಕೆ.ಎಂ. ಗಣೇಶ್, ಶೌಕತ್ ಆಲಿ, ಡೆನ್ನಿಬರೋಸ್ ಉಪಸ್ಥಿತರಿದ್ದರು.