ವೀರಾಜಪೇಟೆ, ಫೆ. ೬: ಕಂದಾಯ ಸಚಿವ ಕೃಷ್ಣ ಬೈರೇಗೌಡ ಪಟ್ಟಣದ ಮಿನಿ ವಿಧಾನಸೌಧದಲ್ಲಿನ ಉಪನೋಂದಣಿ ಅಧಿಕಾರಿಯ ಕಚೇರಿ ಹಾಗೂ ಕಂದಾಯ ಇಲಾಖೆಯ ಗಣಕೀಕರಣ ಯೋಜನೆಯಾದ ಭೂ ಸುರಕ್ಷಕ್ಕೆ ಚಾಲನೆ ನೀಡಿದರು.

ಕಂದಾಯ ಇಲಾಖೆಯ ಗಣಕೀಕರಣ ಶಾಖೆಗೆ ಚಾಲನೆ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕೆಲವು ಕಡತಗಳನ್ನು ಸ್ಥಳದಲ್ಲಿಯೇ ಗಣಕೀಕರಣಗೊಳಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ಬಳಿಕ ಶಾಖೆಯ ಸಿಬ್ಬಂದಿಗಳಿAದ ಮಾಹಿತಿ ಪಡೆದುಕೊಂಡು ಮಾತನಾಡಿ, ಜಾಗರೂಕತೆಯಿಂದ ಸ್ಕಾö್ಯನಿಂಗ್ ಮಾಡುವ ಮೂಲಕ ಡಿಜಿಟಲಿಕರಣ ನಡೆಸಬೇಕು. ವಿಶೇಷವಾಗಿ ದಾಖಲೆಗಳನ್ನು ಎಚ್ಚರಿಕೆಯಿಂದ ಡಿಜಿಟಲೀಕರಣಗೊಳಿಸಬೇಕು. ಮುಂದೆ ಅಗತ್ಯ ಬಿದ್ದಾಗ ನ್ಯಾಯಾಲಯಕ್ಕೂ ಗಣಕೀಕೃತ ದಾಖಲೆಗಳನ್ನೆ ಸಲ್ಲಿಸಬೇಕಾಗುತ್ತದೆ. ಅಪೂರ್ಣ ಅಥವಾ ಅಸಮರ್ಪವಾಗಿ ದಾಖಲೆಗಳನ್ನು ಗಣಕೀಕರಣಗೊಳಿಸಿದರೆ ಮುಂದೆ ಈ ಯೋಜನೆಯ ಉದ್ದೇಶ ವಿಫಲಗೊಂಡAತಾಗುತ್ತದೆ. ಇದರಿಂದ ಮತ್ತೆ ಮೂಲ ಪ್ರತಿಗಳನ್ನು ಆಶ್ರಯಿಸುವಂತಾಗುತ್ತದೆ. ಯೋಜನೆಯ ಉದ್ದೇಶ ಸಫಲವಾಗಬೇಕು ಎಂದು ಎಚ್ಚರಿಸಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ದಾಖಲೆಗಳ ವಿಲೇವಾರಿಗಳ ಕುರಿತು ತಾಲೂಕು ಕಚೇರಿಯ ಸಿಬ್ಬಂದಿಗಳಿAದ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ತಹಶೀಲ್ದಾರ್ ರಾಮಚಂದ್ರ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.