ಮಡಿಕೇರಿ, ಫೆ. ೫: ಇಬ್ನಿವಳವಾಡಿ ಪ್ರೀಮಿಯರ್ ಲೀಗ್ ಸೀಜನ್ ೪ ಅಂಗವಾಗಿ ಇತ್ತೀಚೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಟೀಮ್ ವಿರಾಟ್ ಪ್ರಥಮ ಸ್ಥಾನ ಗಳಿಸಿದ್ದು, ಕಿಂಗ್ಸ್ ಇಲೆವೆನ್ ಕಡಗದಾಳು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಟೂರ್ನಿಯಲ್ಲಿ ಟೀಮ್ ವಿರಾಟ್, ಕಿಂಗ್ಸ್ ಇಲೆವೆನ್ ಕಡಗದಾಳು, ಅಫಿಷಿಯಲ್ ನೀರುಕೊಲ್ಲಿ, ಚೀತಾ ಫೈಟರ್, ಟೀಮ್ ಲೋಸರ್, ಟೀಮ್ ಟೈಟಾನ್, ಕೂರ್ಗ್ ವಾರಿಯರ್ಸ್, ಟೀಮ್ ಜಾಗ್ವಾರ್ ಸೇರಿದಂತೆ ಒಟ್ಟು ೮ ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಸಮಾರಂಭದಲ್ಲಿ ಶಾಸಕ ಮಂಥರ್ ಗೌಡ, ಕಡಗದಾಳು ಗ್ರಾ.ಪಂ ಅಧ್ಯಕ್ಷೆ ಭಾರತಿ , ಕಡಗದಾಳು ಪಂಚಾಯಿತಿ ಮಾಜಿ ಸದಸ್ಯ ರಮೇಶ್ ಆಚಾರ್ಯ, ಕರ್ಣಂಗೇರಿ ಪಂಚಾಯಿತಿ ಸದಸ್ಯ ಜಾನ್ಸನ್ , ಮಾಜಿ ಸೈನಿಕ ಸಿ.ಕೆ ಪ್ರಭಾಕರ್, ಪ್ರಮುಖರಾದ ವಿಜು ಮಾಲೆರ, ಎಂ.ಎA ಮೊಯಿದು, ಮಾದೇಟ್ಟಿರ ಅಯ್ಯಪ್ಪ, ವಿವೇಕ್ ಮೊಗೇರ, ದೀಪಕ್ ರೈ, ರಂಜಿತ್, ತ್ಯಾಗ, ಶರತ್ ಕುಮಾರ್ ಮತ್ತು ಮುಸ್ತಾಫ ಹಂಸ ಕಡಗದಾಳು ಪಾಲ್ಗೊಂಡಿದ್ದರು. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿ ಕಿಂಗ್ಸ್ ಇಲೆವೆನ್ ಕಡಗದಾಳು ತಂಡವನ್ನು ೪ ಓವರ್ಗೆ ೪೬ ರನ್‌ಗಳಿಗೆ ನಿಯಂತ್ರಿಸಿತು. ವಿರಾಟ್ ತಂಡವು ೩.೩ ಓವರ್ಗಳಲ್ಲಿ ೪೭ ರನ್ ಗಳಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಕಿಂಗ್ಸ್ ಇಲೆವೆನ್ ಕಡಗದಾಳು ತಂಡದ ಕಿರಣ್ ಬಿ.ಟಿ ೨೮ ರನ್, ವಿರಾಟ್ ತಂಡದ ಸುನಿಲ್ ೨೫ ಮತ್ತು ಕಿರಣ್ ಪೂಜಾರಿ ೧೧ ರನ್ ಗಳಿಸಿದರು. ಚಾಂಪಿಯನ್ ತಂಡಕ್ಕೆ ರೂ.೪೦,೦೦೦ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.೨೦,೦೦೦ ಮತ್ತು ಆಕರ್ಷಕ ಟ್ರೋಫಿ ದೊರಕಿತು.

ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನೀರುಕೊಲ್ಲಿ ಶಾಲಾ ಮುಂಭಾಗದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಮಾಜಿ ಸೈನಿಕ ಪ್ರಭಾಕರ ಟಿ.ಬಿ ವಹಿಸಿದ್ದರು. ಅತಿಥಿಗಳಾಗಿ ಉಪನ್ಯಾಸಕ ಶ್ರೀನಿವಾಸ, ಮರಗೋಡು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶರತ್ ಪರಿಚನ, ಗೀತಾ ಬಾಲಕೃಷ್ಣ, ಮಡಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಹಂಸ ಹಾಗೂ ಇತರರು ಇದ್ದರು.

ಕಡಗದಾಳು ಶಾಲೆಯಲ್ಲಿ ೨೦೨೨-೨೩ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ ೯೫ ಅಂಕ ಗಳಿಸಿದ ನೀರುಕೊಲ್ಲಿಯ ವಿದ್ಯಾರ್ಥಿನಿ ಆಶಿಫಳಿಗೆ ಮತ್ತು ಕಡಗದಾಳು ಗ್ರಾಮದ ವಕೀಲರಾದ ಅಂತರರಾಷ್ಟಿçÃಯ ಕ್ರೀಡಾಪಟು ರೇಷ್ಮಾ ದೇವಯ್ಯ ಅವರಿಗೆ ಐಪಿಎಲ್ ಸೀಸನ್ ೪ ಸಮಿತಿಯು ಸನ್ಮಾನವನ್ನು ಮಾಡಿ ಪ್ರೋತ್ಸಾಹಿಸಿತು. ಪ್ರೇಮ್ ಕಡಗದಾಳು ವಂದಿಸಿದರು.