ಮಡಿಕೇರಿ, ಫೆ. ೪: ‘ಲಜ್ಞಾ ಇಮಾಇಲ್ಲಾ' ಅಹ್ಮದಿಯಾ ಮುಸ್ಲಿಮ್ ಸಂಘಟನೆಯ ಮಹಿಳಾ ವಿಭಾಗದ ವತಿಯಿಂದ ಮಡಿಕೇರಿಯ ವಿಕಾಸ್ ಜನ ಸೇವಾ ಟ್ರಸ್ಟ್ನ ಪುರುಷರು, ಹಾಗೂ ಮಹಿಳೆಯರಿಗೆ ದಂತಚಿಕಿತ್ಸಾ ಶಿಬಿರ ನಡೆಯಿತು.
“ಲಜ್ನಾ ಇಮಾಇಲ್ಲಾ' ಅಧ್ಯಕ್ಷೆ ರೂಮಾನ್ ರಿಜ್ವಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸರಕಾರಿ ಆಸ್ಪತ್ರೆಯ ದಂತ ವ್ಯೆದ್ಯರಾದ ಡಾ. ಅಫ್ರೀನ್, ಹಾಗೂ ಡಾ. ಮೆಲ್ವಿನ್ ಈ ಶಿಬಿರದ ನೇತೃತ್ವವನ್ನು ವಹಿಸಿದ್ದರು.
ಈ ಸಂದರ್ಭ ೩೫ ಜನರ ದಂತ ತಪಾಸಣೆ ನಡೆಸಿ ಅವರಿಗೆ ಬೇಕಾದ ಬ್ರಶ್, ಪೇಸ್ಟ್ ಹಾಗೂ ಔಷಧಿಗಳನ್ನು ವಿತರಿಸಲಾಯಿತು. ಅದರೊಂದಿಗೆ ಆಶ್ರಮಕ್ಕೆ ಅಗತ್ಯವಾಗಿದ್ದ ಕೆಲವು ಟೇಬಲ್ಗಳು ಹಾಗೂ ಫ್ಯಾನ್ಗಳನ್ನು ಆಶ್ರಮಕ್ಕೆ ಹಸ್ತಾಂತರಿಸಲಾಯಿತು.
ಲಜ್ನಾ ಇಮಾಇಲ್ಲಾಹ್ ವಿಭಾಗದ ಮಹಿಳಾ ಸದಸ್ಯರು, ಅಹ್ಮದಿಯಾ ಮುಸ್ಲಿಮ್ ಜಮಾತಿನ ಸದಸ್ಯರು, ಅನಾಥಾಶ್ರಮದ ಮುಖ್ಯಸ್ಥ ಮಂಜುನಾಥ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.