ಮಡಿಕೇರಿ, ಫೆ. ೪: ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಮುಂಬೈನ ಪ್ರವಚನಕಾರರಾದ ಬ್ರಹ್ಮಕುಮಾರ್ ಗಿರೀಶ್‌ರವರು ಸಮಯದ ಕರೆ - ಸಕಾರಾತ್ಮಕ ಚಿಂತನೆಯ ಬಗ್ಗೆ ವಿಚಾರ ಸಂಕಿರಣವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಸಿ. ಶ್ಯಾಂ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಸಿದರು.

ಜಿಲ್ಲಾ ನ್ಯಾಯಾಧೀಶರು ಬಿ.ಕೆ. ಗಿರೀಶ್ ಅವರನ್ನು ಸನ್ಮಾನಿಸಿದರು. ಅಲ್ಲದೆ ವರ್ತಮಾನದ ಒತ್ತಡದ ಬದುಕಿಗೆ ಇಂತಹ ಕಾರ್ಯಕ್ರಮಗಳು ಅತೀ ಅವಶ್ಯಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ನ್ಯಾಯಾಧೀಶರುಗಳು, ವಕೀಲರ ಸಂಘದ ಅಧ್ಯಕ್ಷರಾದ ನಿರಂಜನ್, ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ಭಾಗವಹಿಸಿದ್ದರು. ಮಡಿಕೇರಿ ಬ್ರಹ್ಮಕುಮಾರೀಸ್‌ನ ಬಿ.ಕೆ. ಧನಲಕ್ಷಿö್ಮ ಹಾಗೂ ಬಿ.ಕೆ. ಪ್ರಾಣೇಶ ಹಾಜರಿದ್ದರು.