ಗೋಣಿಕೊಪ್ಪಲು, ಫೆ. ೩: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದÀ ಎ.ಎಸ್. ಪೊನ್ನಣ್ಣರವರ ತವರು ಕ್ಷೇತ್ರವಾದ ಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಗ್ರಾಮ ಪಂಚಾಯಿತಿಯ ನಡಾವಳಿ ಪುಸ್ತಕದಲ್ಲಿ ಆಡಳಿತ ಅಧಿಕಾರಿಯ ಸಹಿಯನ್ನು ನಕಲು ಮಾಡುವ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಪ್ಪಣಮಾಡ ನಿವ್ಯ ಕಾವೇರಮ್ಮ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಹುದಿಕೇರಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದ ಅಧ್ಯಕ್ಷೆ ಕಾವೇರಮ್ಮ, ೨೦೨೦-೨೧ನೇ ಸಾಲಿನಲ್ಲಿ ಹುದಿಕೇರಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಯಾಗಿ ಪೊನ್ನಂಪೇಟೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ಅಧಿಕಾರಿಯು ಹುದಿಕೇರಿ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ಯಾಗಿ ಕೆಲವು ಸಮಯ ಕೆಲಸ ನಿರ್ವಹಿಸಿದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಗಿ ಎನ್.ಜಿ. ಪರಮೇಶ್ವರ್ ಅಧಿಕಾರ ವಹಿಸಿಕೊಂಡಿದ್ದರು. ಇವರ ಅವಧಿಯಲ್ಲಿ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತಿಳಿದು ಬಂದಿದ್ದು ಇವುಗಳನ್ನು ಸಂಪೂರ್ಣವಾಗಿ ತನಿಖೆ ಮಾಡುವಂತೆ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಪಂಚಾಯಿತಿ ನಡಾವಳಿ ಪುಸ್ತಕದ ಪುಟ ಸಂಖ್ಯೆ ೬೫ರಿಂದ ೧೦೧ರವರೆಗಿನ ಸಭೆಯ ನಡಾವಳಿಗಳಲ್ಲಿ ಆಡಳಿತಾಧಿಕಾರಿಯಾಗಿ ಮಾಡಿರುವ ಸಹಿಯು ನನ್ನದಲ್ಲ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ನೀಡಿರುವ ಮಾಹಿತಿಯ ದೃಢೀಕರಣದ ಹಿನೆÀ್ನಲೆಯಲ್ಲಿ ಇದೀಗ ಭ್ರಷ್ಟಾಚಾರದ ಆರೋಪವು ಗಂಭೀರ ಸ್ವರೂಪ ಪಡೆದಿದೆ.
ಪಂಚಾಯಿತಿ ಆವರಣದಲ್ಲಿರುವ ಸಂತೆ ಮಾರುಕಟ್ಟೆಯಲ್ಲಿ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಕಟ್ಟಡಗಳು ಪಂಚಾಯಿತಿಗೆ ಹಸ್ತಾಂತರಗೊAಡ ನಂತರ ಸ್ಥಳೀಯ ಗ್ರಾಮಸ್ಥರಾದ ಕಾವೇರಪ್ಪ ಎಂಬವರಿಗೆ ೨೦೧೬ರ ಆಗಿನ ಆಡಳಿತ ಮಂಡಳಿಯ ಶಿಫಾರಸ್ಸಿನಂತೆ
ಗುತ್ತಿಗೆ ರೂಪದಲ್ಲಿ ಪಡೆದಿದ್ದಾರೆ.
ಈ ಸಂದರ್ಭ ಠೇವಣಿಯನ್ನು ಪಡೆದುಕೊಂಡು ಅಂದಿನ ಆಡಳಿತ ಮಂಡಳಿ ಕಟ್ಟಡವನ್ನು
ಅವರಿಗೆ ನೀಡಿರುವ ಬಗ್ಗೆ ಪಂಚಾಯಿ ತಿಯ ನಡಾವಳಿ ಪುಸ್ತಕದಲ್ಲಿ ಉಲ್ಲೇಖವಿದೆ.
(ಮೊದಲ ಪುಟದಿಂದ) ನಂತರ ವರ್ಷದಲ್ಲಿ ೬ ಸಾವಿರ ಬಾಡಿಗೆಯನ್ನು ಪಂಚಾಯಿತಿಗೆ ನೀಡುವಂತೆ ತಿಳಿಸಲಾಗಿದೆ. ಈ ಸಂಬAಧ ೨೦೧೬ರಿಂದ ೨೦೨೧ರವರೆಗೆ ಪಂಚಾಯಿತಿ ವತಿಯಿಂದ ಕರಾರು ಪತ್ರವನ್ನು ೫ ವರ್ಷಕ್ಕೆ ನಿಗದಿಪಡಿಸಿ ಮಾಡಿಕೊಡಲಾಗಿದೆ.ಆದರೆ ಕಟ್ಟಡ ಹೊಂದಿರುವ ವ್ಯಕ್ತಿಯು ಠೇವಣಿ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಪಂಚಾಯಿತಿಗೆ ಬರಬೇಕಾದ ಬಾಡಿಗೆ ಹಣವು ಎಲ್ಲಿಯೂ ಕೂಡ ಕಡತದಲ್ಲಿ ನಮೂದಾಗಿರುವುದಿಲ್ಲ.
ಈ ಬಗ್ಗೆ ಆಡಿಟ್ ವರದಿಯಲ್ಲಿ ಸಮಗ್ರವಾಗಿ ಉಲ್ಲೇಖಿಸಲಾಗಿದೆ. ಪಂಚಾಯಿತಿ ಬಾಡಿಗೆ ಪಡೆಯುವಲ್ಲಿ ನಿರ್ಲಕ್ಷö್ಯ ವಹಿಸಿದ್ದಾರೆ ಎಂಬುದಾಗಿ ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾಜಿ ಪಂಚಾಯಿತಿ ಅಧ್ಯಕ್ಷರನ್ನು ಹಾಲಿ ಇರುವ ಪಂಚಾಯಿತಿ ಅಧ್ಯಕ್ಷರು ಕಚೇರಿಗೆ ಕರೆಸಿ ವಿಚಾರಿಸಿದಾಗ ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ. ನಂತರ ಪಂಚಾಯಿತಿಯಿAದ ನೋಟಿಸ್ ಜಾರಿಗೊಳಿಸಿ ಉತ್ತರ ಬಯಸಿದರೂ ಇದಕ್ಕೆ ಸ್ಪಂಧಿಸಿರುವುದಿಲ್ಲ.
ಈ ಸಂಬAಧ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರನ್ನು ನೀಡಲಾಗಿದೆ. ಈ ವೇಳೆ ಪಂಚಾಯಿತಿ ಆಡಳಿತಾಧಿಕಾರಿ ಗಮನಕ್ಕೆ ಬಾರದ ರೀತಿಯಲ್ಲಿ ಆಗಿನ ಪಿಡಿಒರವರ ಸಹಕಾರ ಪಡೆದು ೩ ಸಾವಿರ ಬಾಡಿಗೆಯಂತೆ ನಕಲಿ ಕರಾರು ಪತ್ರವನ್ನು ಹೊಂದಿಕೊAಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪಂಚಾಯಿತಿಯ ನಡಾವಳಿಯ ಪುಸ್ತಕದಲ್ಲಿ ಈ ವಿಷಯವು ನಮೂದಾಗಿರುವುದಿಲ್ಲ. ಇದರಲ್ಲಿ ೮ ವರ್ಷಗಳ ಅವಧಿಗೆ ಕಟ್ಟಡವನ್ನು ಕರಾರು ಒಪ್ಪಂದ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಇದು ಕಾನೂನು ಬಾಹಿರ ಚಟುವಟಿಕೆಯಾಗಿದೆ.
ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರನ್ನು ನೀಡಲಾಗಿದೆ. ಕಟ್ಟಡದಲ್ಲಿ ಯಾವುದೇ ವ್ಯಾಪಾರ ವಹಿವಾಟು ಇಲ್ಲಿತನಕ ನಡೆಸುತ್ತಿಲ್ಲ. ನಿಯಮ ಉಲ್ಲಂಘಿಸಿ ಕಟ್ಟಡವನ್ನು ಮತ್ತೊಬ್ಬರಿಗೆ ಬಾಡಿಗೆ ರೂಪದಲ್ಲಿ ನೀಡುವುದು ತಿಳಿದು ಬಂದಿದೆ. ಪಂಚಾಯಿತಿ ಮಾಡಿಕೊಟ್ಟಿರುವ ಕರಾರು ಪತ್ರದಲ್ಲಿ ಅನೇಕ ನಿಬಂಧನೆಗಳಿದ್ದರೂ ಇದನ್ನು ಗಾಳಿಗೆ ತೂರಲಾಗಿದೆ. ಹಳೆಯ ಬಾಡಿಗೆಯನ್ನು ಪಡೆಯದೆ ಎನ್ಒಸಿ ರೂಪದಲ್ಲಿ ೩೦ ಸಾವಿರ ಹಣವನ್ನು ಕಟ್ಟಡದವರಿಂದ ಪಡೆದುಕೊಂಡಿರುವ ಬಗ್ಗೆ ನಡಾವಳಿ ಪುಸ್ತಕದಲ್ಲಿ ಉಲ್ಲೇಖವಿರುವುದಿಲ್ಲ.
ಈ ಸಂಬAಧ ನಕಲಿ ಕರಾರು ಪತ್ರ, ಈ ಹಿಂದೆ ಪಂಚಾಯಿತಿಯಿAದ ಮಾಡಿಕೊಟ್ಟ ಕರಾರು ಪತ್ರ ಹಾಗೂ ಹಲವು ದಾಖಲೆಗಳನ್ನು ಒಳಗೊಂಡ ಲಿಖಿತ ದೂರನ್ನು ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಲಾಗಿದೆ. ಕಾರ್ಯನಿರ್ವಹಣಾಧಿಕಾರಿಗಳು ಈ ಸಂಬAಧ ನೋಟೀಸ್ ಜಾರಿಗೊಳಿಸಿದ್ದಾರೆ. ಇಒ ರವರಿಗೆ ದೂರು ಸಲ್ಲಿಸುವ ಸಂದರ್ಭ ಪಂಚಾಯಿತಿಯಲ್ಲಿ ಇರಬೇಕಾದ ೨೦೧೯-೨೦ರ ನಡಾವಳಿ ಪುಸ್ತಕವು ಲಭ್ಯವಿರುವುದಿಲ್ಲ.
ಆಡಳಿತ ಮಂಡಳಿ ಇಲ್ಲದ ಅವಧಿಯಲ್ಲಿ ಪೊನ್ನಂಪೇಟೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಪಂಚಾಯಿಯ ಆಡಳಿತಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಇವರ ಅವಧಿಯಲ್ಲಿದ್ದ ನಡಾವಳಿ ಪುಸ್ತಕವು ಇತ್ತೀಚೆಗೆ ಪಂಚಾಯಿತಿ ಕಚೇರಿಗೆ ಅಂದಿನ ಪಿಡಿಒ ಗ್ರಂಥಪಾಲಕರ ಮೂಲಕ ಒಪ್ಪಿಸಿದ್ದಾರೆ. ಇದನ್ನು ಆಡಳಿತ ಮಂಡಳಿ ಗಮನಿಸಿದಾಗ ನಡಾವಳಿ ಪುಸ್ತಕದಲ್ಲಿ ಆಡಳಿತಾಧಿಕಾರಿಯ ಸಹಿಯ ಬಗ್ಗೆ ಸಂಶಯಗೊAಡು ಅಧಿಕಾರಿಯನ್ನು ವಿಚಾರಿಸಿದ ವೇಳೆ ಸಹಿ ನನ್ನದಲ್ಲ ನಕಲಿ ಸಹಿ ಎಂದು ಲಿಖಿತ ದೃಢೀಕರಣ ನೀಡಿದ್ದಾರೆ.
ಕಟ್ಟಡವನ್ನು ಹೊಂದಿಕೊAಡಿರುವ ವ್ಯಕ್ತಿಯು ಇಲ್ಲಿಯ ತನಕ ಪಂಚಾಯಿತಿಗೆ ಬರಬೇಕಾದ ಬಾಡಿಗೆಯನ್ನು ಪಾವತಿಸದೆ, ಕಟ್ಟಡವನ್ನು ತೆರವುಗೊಳಿಸದೆ ಇರುವುದರಿಂದ ಸರ್ಕಾರಕ್ಕೆ ಬರಬೇಕಾದ ತೆರಿಗೆ ಹಣವು ನಷ್ಟವಾಗುತ್ತಿದೆ. ಅಲ್ಲದೆ ಮತ್ತೊಬ್ಬರಿಗೂ ಕಟ್ಟಡವನ್ನು ನೀಡಲು ಪಂಚಾಯಿತಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಿ ಆಡಳಿತಾಧಿಕಾರಿಯ ಅವಧಿಯ ೨೦೨೦-೨೧ನೇ ಸಾಲಿನ ಪುಟ ಸಂಖ್ಯೆ ೬೫ರಿಂದ ೧೦೧ರವರೆಗೆ ಇರುವ ವಿಷಯಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬAಧ ಲೋಕಾಯುಕ್ತರಿಗೆ, ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಹಾಗೂ ಉಪಕಾರ್ಯದರ್ಶಿರವರಿಗೆ ಲಿಖಿತ ದೂರು ನೀಡಲಾಗಿದೆ. ಕ್ಷೇತ್ರÀÀದ ಶಾಸಕರಿಗೂ ಈ ಬಗ್ಗೆ ಗಮನ ಸೆಳೆಯಲಾಗುವುದು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಗ್ರಾ.ಪಂ. ಪ್ರಮುಖರು ತಿಳಿಸಿದರು.
ಗೋಷ್ಠಿಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಚೋಂದು, ಸದಸ್ಯರಾದ ಚೆಕ್ಕೆರ ಚಂದ್ರಪ್ರಕಾಶ್, ಕೊಡಂಗಡ ದಮಯಂತಿ, ಮಂಡೆಚAಡ ಪೊನ್ನಪ್ಪ, ಬೊಜ್ಜಂಗಡ ಸುನೀಲ್, ಚೇಂದಿರ ತಂಗಮ್ಮ, ಐರಿರ ಮೈನಾ, ಕೊಡಂಗಡ ವಾಸುಬಿದ್ದಪ್ಪ, ಕಿರಿಯಮಾಡ ಮಿಲನ್ ಗಣಪತಿ ಉಪಸ್ಥಿತರಿದ್ದರು.