ಮಡಿಕೇರಿ, ಫೆ. ೩: ರಂಗಸಮುದ್ರ ಸ.ಹಿ.ಪ್ರಾ. ಶಾಲೆಯಲ್ಲಿ ವಸ್ತುಪ್ರದರ್ಶನ, ಮಕ್ಕಳ ಸ್ವರಚಿತ ಕವನಗಳ ಹಾಗೂ ಓದಿದ ಪುಸ್ತಕಗಳ ಪರಿಚಯ ಕಾರ್ಯಕ್ರಮ ನಡೆಯಿತು.
ವಸ್ತುಪ್ರದರ್ಶನವನ್ನು ಕೊಡಗು ಜಿಲ್ಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಉದ್ಘಾಟಿಸಿದರು. ‘ಮಕರಂದ’ ಎಂಬ ಶೀರ್ಷಿಕೆಯಡಿ ರಚಿತವಾದ ಮಕ್ಕಳ ಬರಹಗಳ ಕೃತಿಯನ್ನು ಸೋಮವಾರಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಅನಾವರಣಗೊಳಿಸಿದರು.
ಶಿಕ್ಷಕರು ಅರ್ಪಣಾ ಭಾವದಿಂದ ತೊಡಗಿಸಿಕೊಂಡರೆ ಸರ್ಕಾರಿ ಶಾಲೆಯ ಅಭಿವೃದ್ಧಿ ಸಾಧ್ಯ ಎಂದರು. ಕವಯತ್ರಿ ಹಾಗೂ ಶಿಕ್ಷಕಿ ರಮ್ಯಾ ಮೂರ್ನಾಡು ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ ಎಂದರು. ಸಾಹಿತಿ ಕೃಪಾದೇವರಾಜ್ ಕವನ ವಾಚನ ಮಾಡಿದರು.
ಸೋಮವಾರಪೇಟೆ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೇಶವ, ಸಿ.ಆರ್.ಪಿ.ಗಳಾದ ಸುಷ್ಮಾ ಹಾಗೂ ವೈಶಾಲಿ, ಮುಖ್ಯ ಶಿಕ್ಷಕರಾದ ಲೀಲಾವತಿ ಹಾಗೂ ಶಿಕ್ಷಕಿಯರಾದ ಸುನಿತ, ವೀಣಾ, ರಜನಿ, ಪವಿತ್ರ ಹಾಗೂ ಪೋಷಕರು ಭಾಗವಹಿಸಿದ್ದರು.