ಮಡಿಕೇರಿ, ಫೆ. ೨: ಹೊರಜಿಲ್ಲೆ, ಹೊರರಾಜ್ಯಗಳಿಗೆ ಕುಡಿಯುವ ನೀರಿನ ಮೂಲವಾಗಿರುವ ಕಾವೇರಿ ನದಿಯು ಸಂಗಮವಾಗಿ ಮುಂದುವರಿಯುವ ಭಾಗಮಂಡಲ ತ್ರಿವೇಣಿ ಸಂಗಮವು ವಾರ್ಷಿಕ ಮಳೆಗಾಲದಲ್ಲಿ ಉಕ್ಕಿ ಹರಿದು ಭಗಂಡೇಶ್ವರ ಸನ್ನಿಧಿಯ ಅರ್ಧದಷ್ಟು ಎತ್ತರಕ್ಕೆ ಪ್ರವಹಿಸಿ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಯ ಕಾಮಗಾರಿ ಪ್ರಾರಂಭವಾಗಿ ಐದು ಕಾಲು ವರ್ಷಗಳು ಸರಿದಿವೆ. ಆದರಿನ್ನೂ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮಳೆಗಾಲದಲ್ಲಿ ದೋಣಿ, ರ‍್ಯಾಫ್ಟ್ ಮೂಲಕ ಸಂಗಮಾವೃತ ರಸ್ತೆಯನ್ನು ದಾಟುತ್ತಿದ್ದ ಸ್ಥಳೀಯರು ಇಷ್ಟೊತ್ತಿಗಾಗಲೇ ಮೇಲ್ಸೇತುವೆಯ ಮೂಲಕ ತಮ್ಮ ತಮ್ಮ ವಾಹನಗಳಲ್ಲಿ ಸುಗಮವಾಗಿ ಸಂಚರಿಸ ಬೇಕಾಗಿತ್ತಾದರೂ ಸಣ್ಣ ಪ್ರಮಾಣದ ಮಳೆ ಬಂದರೂ ಅರ್ಧಂಬರ್ಧ ಕಾಮಗಾರಿಯಿಂದಾಗಿ ಸೃಷ್ಟಿಯಾಗುವ ಕೆಸರುಮಯ ರಸ್ತೆಯಲ್ಲಿ ಕಳೆದೈದು ವರ್ಷಗಳಿಂದ ಸಂಕಟದಿAದ ಸಂಚರಿಸುತ್ತಿದ್ದಾರೆ. ಸಂಗಮದ ಮೇಲಿನಿಂದ ಬೀಸುವ ತಂಪಾದ ಗಾಳಿಯನ್ನು ಉಸಿರಾಡುವ ಬದಲು ಸ್ಥಳೀಯರು ಬೇಸಿಗೆ-ಚಳಿಗಾಲದ ಒಣ ಋತು ಸಂದರ್ಭ ಧೂಳನ್ನು ಸೇವಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಪ್ರಸ್ತುತ ವರ್ಷದ ಮಳೆಗಾಲ ಇನ್ನು ೪,೫ ತಿಂಗಳುಗಳಲ್ಲಿ ಆಗಮಿಸಲಿದ್ದು, ‘ಮುಂದಿನ ಮಳೆಗಾಲದ ಒಳಗೆ ಮೇಲ್ಸೇತವೆ ರೆಡಿ ಆಗುತ್ತೆ’ ಎಂಬ ಜನಪ್ರತಿನಿಧಿಗಳ, ಅಧಿಕಾರಿಗಳ ‘ಭರವಸೆಯ’ ಮಾತುಗಳಿಗೆ ಮೇಲ್ಸೇತುವೆಯೇ ಪ್ರತಿಧ್ವನಿಸಬೇಕಿದೆ.

೨೦೧೪ ರಲ್ಲಿ ಸೇತುವೆ ನಿರ್ಮಾಣಕ್ಕೆ ಮನವಿ

೨೦೧೪ ರ ಜುಲೈನಲ್ಲಿ ತ್ರಿವೇಣಿ ಸಂಗಮ ಜಲಾವೃತಗೊಂಡು ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿತ್ತು. ಈ ಸಂದರ್ಭ ಹಿರಿಯ ಕಾಂಗ್ರೆಸ್ ಪ್ರಮುಖ ಮಿಟ್ಟು ಚಂಗಪ್ಪ, ಮಾಜಿ ಸಚಿವ ಎಂ.ಎA ನಾಣಯ್ಯ, ಮಾಜಿ ಎಮ್.ಎಲ್.ಸಿ ವೀಣಾ ಅಚ್ಚಯ್ಯ, ಕಾಂಗ್ರೆಸ್ ಪ್ರಮುಖರಾದ ದಿವಂಗತ ಬಿ.ಟಿ ಪ್ರದೀಪ್, ಜೆ.ಎ ಕರುಂಬಯ್ಯ, ಮನೆಯಪಂಡ ಪೊನ್ನಪ್ಪ ಹಾಗೂ ಭಾಗಮಂಡಲದ ನಾಗರಿಕರು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ಅವರಿಗೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದ್ದರು. ಕೆಲ ದಿನಗಳ ಬಳಿಕವೇ ಮನವಿಗೆ ಸ್ಪಂದನ ದೊರೆತು ಕಾಮಗಾರಿಗೆ ಅನುಮೋದನೆ ದೊರಕಿತು.

೪ ಮುಖ್ಯಮಂತ್ರಿಗಳನ್ನು ಕಂಡರೂ ಪೂರ್ಣಗೊಳ್ಳದ ಸೇತುವೆ

ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆದ ಸಂದರ್ಭ ಕೊಡಗಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು, ೨೦೧೮ರ ಜನವರಿ ೯ ರಂದು ಜಿಲ್ಲೆಯಲ್ಲಿ ಒಟ್ಟು ರೂ.೧೬೫.೫೯ ಕೋಟಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ರೂ.೨೯ ಕೋಟಿ ೬೨ ಲಕ್ಷ ವೆಚ್ಚದ ಭಾಗಮಂಡಲ ಮೇಲ್ಸೇತುವೆ ಕಾಮಗಾರಿಗೂ ಮಡಿಕೇರಿಯಿಂದಲೇ ಸಾಂಕೇತಿಕವಾಗಿ ಚಾಲನೆ ನೀಡಿದ್ದರು. ಇದಲ್ಲದೆ ಹೆಚ್ಚುವರಿಯಾಗಿ ರೂ. ೪.೫ ಕೋಟಿ ವೆಚ್ಚದಲ್ಲಿ ಮೇಲ್ಸೇತುವೆಯ ಪ್ರವೇಶ ದ್ವಾರಗಳ ಕಾಮಗಾರಿ ಸೇರಿ ಒಟ್ಟು ೩೪.೧೨ ಕೋಟಿಯ ಯೋಜನೆ ಇದಾಗಿದೆ. ೫ ವರ್ಷಗಳ ಆಡಳಿತ ಕಾಲಾವಧಿಯಲ್ಲಿ ಕರ್ನಾಟಕ ರಾಜ್ಯದ ಅಸ್ಥಿರ ಆಡಳಿತದಿಂದಾಗಿ ಕುಮಾರಸ್ವಾಮಿ ಬಳಿಕ ಯಡಿಯೂರಪ್ಪ, ನಂತರ ಬಸವರಾಜ ಬೊಮ್ಮಾಯಿ ಸಿ.ಎಂ ಗಳಾಗಿದ್ದು ಇದೀಗ ನೂತನ ಸರಕಾರದಲ್ಲಿ ಮತ್ತೆ ಪುನಃ ಸಿದ್ದರಾಮಯ್ಯ ಅವರೇ ಸಿ.ಎಂ ಆಗಿದ್ದಾರಾದರೂ ಮೇಲ್ಸೇತುವೆ ಮಾತ್ರ ಪೂರ್ಣಗೊಂಡಿರದೇ ಇರುವುದು ವಿಪರ್ಯಾಸ. ಒಟ್ಟು ೪ ಮುಖ್ಯಮಂತ್ರಿಗಳನ್ನು ಕಂಡಿರುವ ಅಪೂರ್ಣ ಮೇಲ್ಸೇತುವೆ ೫ನೇ ಮುಖ್ಯಮಂತ್ರಿ ನೋಡದಿದ್ದರೆ ಸಾಕು ಎಂಬAತಾಗಿದೆ ಭಾಗಮಂಡಲ ನಿವಾಸಿಗಳ ಪರಿಸ್ಥಿತಿ.

ಅಕ್ಟೋಬರ್ ೨೦೧೮ ರಲ್ಲಿ ಕಾಮಗಾರಿಗೆ ಚಾಲನೆ

ಮೇಲ್ಸೇತುವೆ ಕಾಮಗಾರಿಗೆ ೨೦೧೮ರ ಜನವರಿಯಲ್ಲಿ ಭೂಮಿಪೂಜೆಯಾಗಿದ್ದರೂ, ೨೦೧೮ರ ಅಕ್ಟೋಬರ್ ೨೮ಕ್ಕೆ ಕಾಮಗಾರಿ ಪ್ರಾರಂಭವಾಯಿತು. ತೇಜಸ್ ಸನ್ಟಾçಪ್ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯು ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಅಕ್ಟೋಬರ್ ೨೭ ರಂದು ಸ್ಥಳದಲ್ಲಿಯೇ ಅಧಿಕಾರಿಗಳ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಯನ್ನು ೨೯ಕ್ಕೆ ಪ್ರಾರಂಭಿಸಿತು. ಮೇಲ್ಸೇತುವೆಗಾಗಿ ಹೆಚ್ಚುವರಿ ಜಾಗದ ಅಗತ್ಯವಿದ್ದು, ಸುತ್ತಮುತ್ತಲಿನ ಸುಮಾರು ೩೧ ಮಂದಿಯಿAದ

(ಮೊದಲ ಪುಟದಿಂದ) ನಿಗಮದವರು ಜಾಗ ಖರೀದಿ ಮಾಡಿದ್ದಾರೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯರ ಮಳೆಗಾಲದ ಸಮಸ್ಯೆಗೆ ಪರಿಹಾರ ಕಂಡುಕೊಡಬೇಕಿದ್ದುದು, ಐದು ಕಾಲು ವರ್ಷಗಳಾದರೂ ಪೂರ್ಣಗೊಳ್ಳದೆ ಇರುವುದು ವಿಪರ್ಯಾಸ.

ಜನವರಿ ಇನ್ನೂ ಅಂತ್ಯವಾಗಿಲ್ಲವೇ..??

ಮೇಲ್ಸೇತುವೆಗೆ ಬೆಂಬಲವಾಗಿ ನಿಲ್ಲಬೇಕಿರುವ ಪಿಲ್ಲರ್‌ಗಳು ಕೆಳಗಿನ ರಸ್ತೆಯನ್ನೇ ಆವರಿಸಿವೆ. ಬಸ್, ಲಾರಿ ಮಾತ್ರವಲ್ಲದೆ ಇತರ ಸಣ್ಣ ವಾಹನಗಳೂ ಈ ಕೆಳಗಿನ ರಸ್ತೆಯಲ್ಲಿ ಸಂಚರಿಸುವಾಗ ಚಾಲಕರು ಎಚ್ಚರದಿಂದಿರುವುದು ಅಗತ್ಯ. ಒಂದು ವೇಳೆ ಕೆಳಗಿನ ರಸ್ತೆಯಲ್ಲಿ ವಾಹನವನ್ನು ‘ಓವರ್‌ಟೇಕ್’ ಮಾಡಲು ಪ್ರಯತ್ನಿಸಿದರೆ ಅಥವಾ ಸ್ವಲ್ಪ ಬಲ ಭಾಗಕ್ಕೆ ವಾಹನಗಳು ಸರಿದರೆ ಈ ಪಿಲ್ಲರ್‌ಗಳಿಗೆ ಅಪ್ಪಳಿಸಿ ಅಪಘಾತ ಸೃಷ್ಟಿಯಾಗುವುದು ಖಚಿತ. ಈಗಾಗಲೇ ಹಲವಾರು ಸ್ಥಳೀಯರ ವಾಹನಗಳಿಗೆ ಈ ರೀತಿ ಹಾನಿಯಾಗಿರುವ ನಿದರ್ಶನಗಳಿವೆ.ಮೇಲ್ಸೇತುವೆಗೆ ಬೆಂಬಲವಾಗಿ ನಿಲ್ಲಬೇಕಿರುವ ಪಿಲ್ಲರ್‌ಗಳು ಕೆಳಗಿನ ರಸ್ತೆಯನ್ನೇ ಆವರಿಸಿವೆ. ಬಸ್, ಲಾರಿ ಮಾತ್ರವಲ್ಲದೆ ಇತರ ಸಣ್ಣ ವಾಹನಗಳೂ ಈ ಕೆಳಗಿನ ರಸ್ತೆಯಲ್ಲಿ ಸಂಚರಿಸುವಾಗ ಚಾಲಕರು ಎಚ್ಚರದಿಂದಿರುವುದು ಅಗತ್ಯ. ಒಂದು ವೇಳೆ ಕೆಳಗಿನ ರಸ್ತೆಯಲ್ಲಿ ವಾಹನವನ್ನು ‘ಓವರ್‌ಟೇಕ್’ ಮಾಡಲು ಪ್ರಯತ್ನಿಸಿದರೆ ಅಥವಾ ಸ್ವಲ್ಪ ಬಲ ಭಾಗಕ್ಕೆ ವಾಹನಗಳು ಸರಿದರೆ ಈ ಪಿಲ್ಲರ್‌ಗಳಿಗೆ ಅಪ್ಪಳಿಸಿ ಅಪಘಾತ ಸೃಷ್ಟಿಯಾಗುವುದು ಖಚಿತ. ಈಗಾಗಲೇ ಹಲವಾರು ಸ್ಥಳೀಯರ ವಾಹನಗಳಿಗೆ ಈ ರೀತಿ ಹಾನಿಯಾಗಿರುವ ನಿದರ್ಶನಗಳಿವೆ.ಮೇಲ್ಸೇತುವೆಗೆ ಬೆಂಬಲವಾಗಿ ನಿಲ್ಲಬೇಕಿರುವ ಪಿಲ್ಲರ್‌ಗಳು ಕೆಳಗಿನ ರಸ್ತೆಯನ್ನೇ ಆವರಿಸಿವೆ. ಬಸ್, ಲಾರಿ ಮಾತ್ರವಲ್ಲದೆ ಇತರ ಸಣ್ಣ ವಾಹನಗಳೂ ಈ ಕೆಳಗಿನ ರಸ್ತೆಯಲ್ಲಿ ಸಂಚರಿಸುವಾಗ ಚಾಲಕರು ಎಚ್ಚರದಿಂದಿರುವುದು ಅಗತ್ಯ. ಒಂದು ವೇಳೆ ಕೆಳಗಿನ ರಸ್ತೆಯಲ್ಲಿ ವಾಹನವನ್ನು ‘ಓವರ್‌ಟೇಕ್’ ಮಾಡಲು ಪ್ರಯತ್ನಿಸಿದರೆ ಅಥವಾ ಸ್ವಲ್ಪ ಬಲ ಭಾಗಕ್ಕೆ ವಾಹನಗಳು ಸರಿದರೆ ಈ ಪಿಲ್ಲರ್‌ಗಳಿಗೆ ಅಪ್ಪಳಿಸಿ ಅಪಘಾತ ಸೃಷ್ಟಿಯಾಗುವುದು ಖಚಿತ. ಈಗಾಗಲೇ ಹಲವಾರು ಸ್ಥಳೀಯರ ವಾಹನಗಳಿಗೆ ಈ ರೀತಿ ಹಾನಿಯಾಗಿರುವ ನಿದರ್ಶನಗಳಿವೆ.‘ಮಳೆ ತೀವ್ರಗೊಂಡು ಪ್ರವಾಹ ಸೃಷ್ಟಿಯಾಗಿದೆ’, ‘ಈ ಬಾರಿ ಕೊರೊನಾದಿಂದ ಕಾಮಗಾರಿ ಪೂರ್ಣಗೊಳಿಸಲು ಅಸಾಧ್ಯ’ ಎಂಬಿತ್ಯಾದಿ ನೆಪಗಳ ಆಶ್ರಯದಲ್ಲಿ ಒಂದೂವರೆ ವರ್ಷದ ಕಾಮಗಾರಿ ಐದು ವರ್ಷಗಳವರೆಗೂ ತಳ್ಳಲ್ಪಟ್ಟಿದೆ. ಇದೀಗ ನೂತನ ಸರಕಾರ ರಚನೆಯಾದ ಬಳಿಕ ಜಿಲ್ಲೆಗೆ ನೇಮಕವಾದ ಉಸ್ತುವಾರಿ ಸಚಿವ ಎನ್.ಎಸ್ ಬೋಸರಾಜು ಅವರು, ಜನವರಿ ೯ ರಂದು ಬೆಂಗಳೂರಿನಲ್ಲಿ ನಡೆದ ಸಭೆಯೊಂದರಲ್ಲಿ ಜನವರಿ ಅಂತ್ಯದೊಳಗೆ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಪೂರ್ಣಗೊಳಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದರು. ಪ್ರತಿ ನಿತ್ಯವೂ ಕಾಮಗಾರಿಯ ವಿವರ ನೀಡುವಂತೆಯೂ ಈ ಸಂದರ್ಭ ಸೂಚನೆ ನೀಡಿದ್ದರು. ಆದರೆ ಇದು ಕೇವಲ ಮಾತಾಗಿಯೇ ಉಳಿದಿದ್ದು ಫೆಬ್ರವರಿ ಅಂತ್ಯಕ್ಕೂ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಡಾಂಬರೀಕರಣಕ್ಕೆ ಇದೀಗ ಸಿದ್ಧತೆ

ಒಟ್ಟು ರೂ ೨೯.೬೨ ಕೋಟಿ ಸಂಗಮದಲ್ಲಿನ ಮೇಲ್ಸೇತುವೆಗೆ ಖರ್ಚು. ಆದರೆ ನಾಪೋಕ್ಲು ರಸ್ತೆ, ಭಾಗಮಂಡಲ ಪ್ರವೇಶ(ಮಡಿಕೇರಿಯೆಡೆಗೆ) ಹಾಗೂ ನಿರ್ಗಮನ (ತಲಕಾವೇರಿ ಕಡೆಗೆ) ಸ್ಥಳಗಳಲ್ಲಿ ಸೇತುವೆಯ ಪ್ರವೇಶ - ನಿರ್ಗಮನಗಳಲ್ಲಿ ಸೇತುವೆಯಿಂದ ಕೆಳ ರಸ್ತೆಗೆ ಸಂಪರ್ಕ ಕಲ್ಪಿಸಲು ಹೆಚ್ಚುವರಿಯಾಗಿ ರೂ.೪.೫ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಬೇಕಿದ್ದು, ಈ ರಸ್ತೆಯ ಡಾಂಬರೀಕರಣ ಕಾಮಗಾರಿ ಈಗಷ್ಟೆ ಶುರುವಾಗಿದೆ. ೩ ಕಡೆಗಳಲ್ಲಿ ಡಾಂಬರು ಸೂಚಿಸಿದ್ದರು. ಪ್ರತಿ ನಿತ್ಯವೂ ಕಾಮಗಾರಿಯ ವಿವರ ನೀಡುವಂತೆಯೂ ಈ ಸಂದರ್ಭ ಸೂಚನೆ ನೀಡಿದ್ದರು. ಆದರೆ ಇದು ಕೇವಲ ಮಾತಾಗಿಯೇ ಉಳಿದಿದ್ದು ಫೆಬ್ರವರಿ ಅಂತ್ಯಕ್ಕೂ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಡಾಂಬರೀಕರಣಕ್ಕೆ ಇದೀಗ ಸಿದ್ಧತೆ

ಒಟ್ಟು ರೂ ೨೯.೬೨ ಕೋಟಿ ಸಂಗಮದಲ್ಲಿನ ಮೇಲ್ಸೇತುವೆಗೆ ಖರ್ಚು. ಆದರೆ ನಾಪೋಕ್ಲು ರಸ್ತೆ, ಭಾಗಮಂಡಲ ಪ್ರವೇಶ(ಮಡಿಕೇರಿಯೆಡೆಗೆ) ಹಾಗೂ ನಿರ್ಗಮನ (ತಲಕಾವೇರಿ ಕಡೆಗೆ) ಸ್ಥಳಗಳಲ್ಲಿ ಸೇತುವೆಯ ಪ್ರವೇಶ - ನಿರ್ಗಮನಗಳಲ್ಲಿ ಸೇತುವೆಯಿಂದ ಕೆಳ ರಸ್ತೆಗೆ ಸಂಪರ್ಕ ಕಲ್ಪಿಸಲು ಹೆಚ್ಚುವರಿಯಾಗಿ ರೂ.೪.೫ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಬೇಕಿದ್ದು, ಈ ರಸ್ತೆಯ ಡಾಂಬರೀಕರಣ ಕಾಮಗಾರಿ ಈಗಷ್ಟೆ ಶುರುವಾಗಿದೆ. ೩ ಕಡೆಗಳಲ್ಲಿ ಡಾಂಬರು ಒಂದೂವರೆ ತಿಂಗಳಾದರೂ ಅಗತ್ಯವಿರುವಂತೆ ಕಾಣುತ್ತಿದೆ. ಆದರೆ ಮತ್ತಿನ್ನಾವುದಾದರು ನೆಪವೊಡ್ಡಿ ಈ ಅವಧಿ ವಿಸ್ತರಿಸಿದರೂ ಸಂಶಯವಿಲ್ಲ. ಇಲ್ಲಿ ಮತ್ತೊಂದು ಗಂಭಿರ ಸಮಸ್ಯೆಯೆಂದರೆ, ಕೆಳಗಿನ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿದೆಯಾದರೂ ಚರಂಡಿ ಈ ರಸ್ತೆಗಿಂತ ಮೇಲೇರಿದೆ. ಸ್ವಲ್ಪ ಮಳೆ ಬಂದರೂ ಸ್ಥಳೀಯರು ನಡೆದಾಡಲಸಾಧ್ಯ ಎಂಬAತೆ ಕಾಮಗಾರಿ ನಡೆದಿದೆ.

-ಪ್ರಜ್ವಲ್ ಜಿ.ಆರ್, ಸುನಿಲ್ ಕುಯ್ಯಮುಡಿ