ಮಡಿಕೇರಿ, ಫೆ. ೪: ಕೊಡವ ಪದ್ಧತಿ-ಸಂಸ್ಕೃತಿ ಸೇರಿದಂತೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಆಟ್‌ಪಾಟ್‌ಗಳನ್ನು ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಸೇರಿದಂತೆ ಹೊಟೇಲ್ ಲಾಡ್ಜ್ಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಹಾಗೂ ಖಂಡನೀಯ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚೆಗೆ ಮಡಿಕೇರಿಯ ರೆಸಾರ್ಟ್ ಒಂದರಲ್ಲಿ ಅಮೇರಿಕಾದಲ್ಲಿ ಒಂದು ಜನಾಂಗದ ಧರ್ಮಗುರು ಒಬ್ಬರನ್ನು ತಮ್ಮ ರೆಸಾರ್ಟ್ಗೆ ಸ್ವಾಗತಿಸಲು ಕಾರ್ಮಿಕರಿಗೆ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆ ಸೇರಿದಂತೆ ಕೊಡವ ಸೀರೆಯನ್ನು ಉಡಿಸಿ, ತಲೆಗೆ ವಸ್ತç ಕಟ್ಟಿಸಿ ಕ್ಯಾಂಡಲ್ ಹಿಡಿದು ತಳಿಯತಕ್ಕಿ ಬೊಳಕ್‌ನೊಂದಿಗೆ ಸ್ವಾಗತ ಮಾಡಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಕೂಡಲೇ ಸಂಬAಧಪಟ್ಟವರು ಜನಾಂಗದ ಕ್ಷಮೆಯನ್ನು ಕೋರಬೇಕು. ಉಳಿದ ಹೋಂ ಸ್ಟೇ, ರೆಸಾರ್ಟ್ಗಳು ಕೂಡ ಕೊಡವ ಪದ್ದತಿ ಸಂಸ್ಕೃತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ನಿಲ್ಲಬೇಕು ಎಂದಿದ್ದಾರೆ.