ಮಡಿಕೇರಿ, ಫೆ. ೪ : ೨೦೨೧ ರಲ್ಲಿ ಕೊಡಗಿಗೆ ಪ್ರವಾಸಕ್ಕೆಂದು ಆಗಮಿಸಿದ್ದ ಮಹಿಳೆಯೋರ್ವಳು, ಆಕೆ ತಂಗಿದ್ದ ಹೋಮ್ಸ್ಟೇನಲ್ಲಿ ಗ್ಯಾಸ್ ಗೀಸರ್ ಬಳಸುತ್ತಿದ್ದಾಗ ಅದರಿಂದ ಸೋರಿಕೆಯಾದ ಕಾರ್ಬನ್ ಮೋನಾಕ್ಸೆöÊಡ್ ವಿಷಾನಿಲ ಸೇವಿಸಿ ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಹಕರ ನ್ಯಾಯಾಲಯವು ಮೃತೆ ಕುಟುಂಬಕ್ಕೆ ರೂ.೩೭.೫ ಲಕ್ಷ ಪರಿಹಾರವಾಗಿ ನೀಡುವಂತೆ ಹೋಮ್ ಸ್ಟೇ ಮಾಲೀಕರಿಗೆ ಆದೇಶಿಸಿದೆ.
ಮುಂಬೈ ಮೂಲದ ಈಶ್ವರನ್ ಅವರು ತಮ್ಮ ಪುತ್ರಿ ವಿಘ್ನೇಶ್ವರಿಯು ಘಟನೆಯಲ್ಲಿ ಮೃತಪಟ್ಟ ಬಳಿಕ ಘಟನೆ ಬಗ್ಗೆ ಗ್ರಾಹಕರ ವಿವಾದ ಹಾಗೂ ಪರಿಹಾರ ಆಯೋಗದ ಗಮನಕ್ಕೆ ತಂದಿದ್ದು, ನೋಂದಾವಣೆ ಗೊಳ್ಳದ ಮಡಿಕೇರಿಯ ಕೂರ್ಗ್ ವ್ಯಾಲಿ ಹೋಂಸ್ಟೇಯ ಶೇಕ್ ಮಹಮದ್ ಇಬ್ರಾಹಿಂ, ಮುಕ್ತಾರ್ ಅಹ್ಮದ್ ಹಾಗೂ ಪಾಂಡಿಯನ್ ಅವರುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ತನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ಆಗಮಿಸಿದ್ದ ವಿಘ್ನೇಶ್ವರಿ, ೨೦೨೧ ರ ಅಕ್ಟೋಬರ್ ೨೪ ರ ಸಂಜೆ ೮:೩೦ ಕ್ಕೆ ಹೋಮ್ ಸ್ಟೇ ಯಲ್ಲಿ ತಂಗಿದ್ದಾಗ ಸ್ನಾನಕ್ಕೆ ತೆರಳಿದಾಗ ಗೀಸರ್ನಿಂದ ಸೋರಿದ ಅನಿಲ ಸೇವಿಸಿ ಮೃತರಾದರು. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಆಕೆ ಕಾರ್ಬನ್ ಮೋನಾಕ್ಸೆöÊಡ್ ಸೇವಿಸಿಯೇ ಸಾವನ್ನಪ್ಪಿದ್ದು ದೃಢಪಟ್ಟಿತ್ತು. ಹೋಮ್ ಸ್ಟೇ ಪರಿಶೀಲನೆ ನಡೆಸಿದ ಪೊಲೀಸರು ಅಲ್ಲಿನ ಸ್ನಾನದ ಮನೆಯಲ್ಲಿ ಸರಾಗ ವಾಯು ಹರಿವಿಗೆ ಯಾವುದೇ ಕಿಟಕಿಗಳು ಇಲ್ಲದಿರುವುದನ್ನು ಖಚಿತ ಪಡಿಸಿದ್ದರು.