ಮಡಿಕೇರಿ, ಫೆ. ೪: ಕೊಡಗು ಜಿಲ್ಲೆಯ ರೈತರು - ಬೆಳೆಗಾರರು, ಮಾಜಿ ಸೈನಿಕರು ಸೇರಿದಂತೆ ಕೃಷಿಪ್ರಧಾನವಾದ ಜಿಲ್ಲೆಯ ಬಹುತೇಕ ಮಂದಿ ಕಂದಾಯ ಇಲಾಖೆಗೆ ಸಂಬAಧಿಸಿದAತೆ ಹತ್ತು - ಹಲವಾರು ಸಮಸ್ಯೆಗಳಿಂದಾಗಿ ಇನ್ನಿಲ್ಲದ ಪಡಿಪಾಟಲು ಪಡುತ್ತಿದ್ದಾರೆ.
ಕೆಲವಾರು ವರ್ಷಗಳಿಂದ ಸಮಸ್ಯೆಗಳು ನಿರಂತರವಾಗಿ ಮುಂದುವರಿಯುತ್ತಲೇ ಇವೆಯಲ್ಲದೆ ಶಾಶ್ವತ ಪರಿಹಾರವನ್ನು ಮಾತ್ರ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಹಲವು ಹೋರಾಟಗಳು ನಡೆದರೂ, ಪದೇ ಪದೇ ಸಂಘ - ಸಂಸ್ಥೆಗಳಿAದ ಮಡಿಕೇರಿ, ಫೆ. ೪: ಕೊಡಗು ಜಿಲ್ಲೆಯ ರೈತರು - ಬೆಳೆಗಾರರು, ಮಾಜಿ ಸೈನಿಕರು ಸೇರಿದಂತೆ ಕೃಷಿಪ್ರಧಾನವಾದ ಜಿಲ್ಲೆಯ ಬಹುತೇಕ ಮಂದಿ ಕಂದಾಯ ಇಲಾಖೆಗೆ ಸಂಬAಧಿಸಿದAತೆ ಹತ್ತು - ಹಲವಾರು ಸಮಸ್ಯೆಗಳಿಂದಾಗಿ ಇನ್ನಿಲ್ಲದ ಪಡಿಪಾಟಲು ಪಡುತ್ತಿದ್ದಾರೆ.
ಕೆಲವಾರು ವರ್ಷಗಳಿಂದ ಸಮಸ್ಯೆಗಳು ನಿರಂತರವಾಗಿ ಮುಂದುವರಿಯುತ್ತಲೇ ಇವೆಯಲ್ಲದೆ ಶಾಶ್ವತ ಪರಿಹಾರವನ್ನು ಮಾತ್ರ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಹಲವು ಹೋರಾಟಗಳು ನಡೆದರೂ, ಪದೇ ಪದೇ ಸಂಘ - ಸಂಸ್ಥೆಗಳಿAದ ಭೇಟಿ ಇದೀಗ ಮತ್ತೊಮ್ಮೆ ಜಿಲ್ಲೆಯ ಜನತೆಯಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ.
ಮುಖ್ಯವಾಗಿ ಪಟ್ಟೆ ದಾರ ಹೆಸರು, ಪೌತಿಖಾತೆ, ಕಂದಾಯ ನಿಗದಿಯಾಗ ದಿರುವುದು, ಬಾಣೆ ಜಮೀನು ವಿಚಾರ, ಸರ್ವೇಯರ್ಗಳ ಕೊರತೆಯಿರುವುದು, ಪಿ೧ ನ ತೊಂದರೆ, ಕಡತಗಳ ವಿಲೇವಾರಿಗೆ ನಿರಂತರ ಅಲೆದಾಟ, ಮಾಜಿ ಸೈನಿಕರಿಗೆ ಸಂಬAಧಿಸಿದAತೆ ಭೂ ಮಂಜೂರಾತಿ - ನಿವೇಶನದ ತೊಂದರೆ ಇನ್ನಿತರ ಫಲಾನುಭವಿಗಳ ನಿವೇಶನ ಹೋರಾಟ, ಜಾಗ ಮಂಜೂರಾತಿ ಮತ್ತಿತರ ಹಲವು ಗಂಭೀರ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿನ ಕಂದಾಯ ಸಚಿವರಾಗಿದ್ದ ಆರ್. ಅಶೋಕ್ ಅವರು ಜಿಲ್ಲೆಗೆ ಆಗಮಿಸಿ ಕಂದಾಯ ಇಲಾಖೆಯ ಸಮಸ್ಯೆಗಳ ಕುರಿತಾಗಿ ವಿಶೇಷ ಸಮಾವೇಶವೊಂದನ್ನೂ ಜಿಲ್ಲಾ ಕೇಂದ್ರದಲ್ಲಿ ನಡೆಸಿದ್ದರು.
ಆದರೂ ಬಹುತೇಕ ಸಮಸ್ಯೆಗಳು ಮತ್ತೂ ಮುಂದುವರಿದಿದೆಯಲ್ಲದೆ, ಪರಿಹಾರ ಮಾತ್ರ ದೊರೆತಿಲ್ಲ. ಸಾರ್ವಜನಿಕ ಪರದಾಟ ನಿರಂತರವಾಗಿದೆ. ದಾಖಲಾತಿಗಳ ಸಮಸ್ಯೆಯಿಂದಾಗಿ ಸರಕಾರದ ಹಲವು ಯೋಜನೆಗಳ ಸೌಲಭ್ಯವನ್ನು ಕೂಡ ಪಡೆದುಕೊಳ್ಳಲು ಬಹುತೇಕರಿಗೆ ಸಮಸ್ಯೆಯಾಗುತ್ತಿದೆ. ಸಮಸ್ಯೆಗಳ ಬಗ್ಗೆ ಹಾಲಿ ಶಾಸಕರುಗಳಿಗೂ ಅರಿವಿದ್ದು, ಅವರುಗಳೂ ಸರಕಾರದ ಗಮನ ಸೆಳೆದಿದ್ದಾರೆ.ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವರ ಭೇಟಿಗೆ ಹೆಚ್ಚಿನ ಮಹತ್ವವಿದ್ದು, ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಾರ್ವಜನಿಕರು ಕಾತರದಿಂದಿದ್ದಾರೆ. ಈಗಲೂ ಸಹ ಅದೇ ರಾಗ... ಅದೇ ಹಾಡು... ಎಂಬAತಾಗದಿರಲಿ ಎಂಬದು ಜನರ ಆಶಾಭಾವನೆ ಯಾಗಿದೆ. - ಶಶಿ ಸೋಮಯ್ಯ