ಕುಶಾಲನಗರ, ಫೆ. ೨: ರಸ್ತೆಯಲ್ಲಿ ಮಲಗಿದ್ದ ಜಾನುವಾರುಗಳ ಮೇಲೆ ಲಾರಿ ಚಲಿಸಿದ ಕಾರಣ ಮೂರು ಹಸುಗಳು ರಸ್ತೆಯಲ್ಲಿ ಸಾವಿಗೀಡಾದ ದಾರುಣ ಘಟನೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
ಕುಶಾಲನಗರ - ಮಡಿಕೇರಿ ಹೆದ್ದಾರಿ ರಸ್ತೆಯ ಬೈಚನಹಳ್ಳಿ ಬಳಿ ರಸ್ತೆಯಲ್ಲಿ ದನಗಳು ಮಲಗಿದ್ದ ಸಂದರ್ಭ ಮೈಸೂರು ಕಡೆಯಿಂದ ಮಡಿಕೇರಿ ಕಡೆಗೆ ಸಾಗುತ್ತಿದ್ದ ಲಾರಿ(ಎಂ-೪೩-೭೩೬೯) ಅವುಗಳ ಮೇಲೆ ಚಲಿಸಿದ ಕಾರಣ ಸ್ಥಳದಲ್ಲಿ ಮೃತಪಟ್ಟಿವೆ. ಈ ಬಗ್ಗೆ ಮಾಹಿತಿ ತಿಳಿದ ಕುಶಾಲನಗರ ಪುರಸಭೆ ಅಧಿಕಾರಿಗಳು ಪೌರಕಾರ್ಮಿಕರು ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂಚಾರಿ ಪೊಲೀಸ್ ಠಾಣಾಧಿಕಾರಿ ಚಂದ್ರಪ್ಪ, ಸಹಾಯಕ ಠಾಣಾಧಿಕಾರಿ ಹರೀಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಸ್ಥಳೀಯ ಪಶುವೈದ್ಯರ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಘಟನೆಗೆ ಕಾರಣಕರ್ತನಾದ ಲಾರಿ ಚಾಲಕ ಆದರ್ಶ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.