ಕಣಿವೆ, ಫೆ. ೩: ಕೂಡು ಮಂಗಳೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿರುವ ವಾರದ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ನಾಯಕ್ ಉದ್ಘಾಟಿಸಿದರು. ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಇಲಾಖೆ, ಸಂಜೀವಿನಿ, ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಜೀವಿನಿ ಸಂತೆ ಮಾರುಕಟ್ಟೆ ಉದ್ಘಾಟಿಸಿದ ಭಾಸ್ಕರ್ ನಾಯಕ್, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿಯೇ ಉತ್ಪಾದನೆ ಮಾಡುವ ಸಾಂಬಾರ ಪದಾರ್ಥಗಳು, ವೈನ್, ಮೇಣದ ಬತ್ತಿ, ಕರವಸ್ತçಗಳು, ಗೃಹೋಪಯೋಗಿ, ಅಲಂಕಾರಿಕಾ ಹಾಗೂ ಮತ್ತಿತರೇ ಮಾದರಿಯ ವಸ್ತುಗಳನ್ನು ತಯಾರಿಸುವ ಮಹಿಳೆಯರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮತ್ತು ಮಹಿಳೆಯರಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸಲು ಇಂತಹ ಸಂಜೀವಿನಿ ಮಾರುಕಟ್ಟೆ ಸಹಕಾರಿ ಎಂದರು.

ಸAಜೀವಿನಿ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಬೆಳೆಯಲು ಸಂಜೀವಿನಿ ಸಂತೆ ಮಾರುಕಟ್ಟೆ ಒಂದು ಶಕ್ತಿಯಾಗಿದೆ. ಮಹಿಳೆಯರು ತಾವು ಉತ್ಪಾದಿಸುವ ಯಾವುದೇ ಪರಿಕರಗಳನ್ನು ದೂರದ ಮಾರುಕಟ್ಟೆಗಳಿಗೆ ಸಾಗಿಸಿ ವ್ಯಾಪಾರ ಮಾಡುವ ಮೂಲಕ ಸ್ವಾವಲಂಬಿಗಳಾಗಿಸಲು ಉತ್ತಮ ವೇದಿಕೆ ಇದಾಗಿದೆ ಎಂದರು. ಸಂತೆ ಮಾರುಕಟ್ಟೆಯಲ್ಲಿ ಕೂಡಿಗೆ ಸುತ್ತಮುತ್ತಲಿನ ಗ್ರಾಮಗಳ ಹತ್ತಾರು ಮಹಿಳೆಯರು ತಾವು ಬೆಳೆದು ತಂದಿದ್ದ ಸೊಪ್ಪುಗಳು, ಹೂವು ಹಣ್ಣುಗಳು, ತಿಂಡಿ-ತಿನಿಸುಗಳು ಹಾಗೂ ವಿವಿಧ ತರಕಾರಿಗಳ ಮಾರಾಟದಲ್ಲಿ ಪಾಲ್ಗೊಂಡಿದ್ದರು.

ಸAಜೀವಿನಿ ತಾಲೂಕು ಮೇಲ್ವಿಚಾರಕಿ ಪದ್ಮಶ್ರೀ, ಒಕ್ಕೂಟದ ಅಧ್ಯಕ್ಷೆ ಶಾರದಾ, ಕೂಡಿಗೆ ಘಟಕದ ಅಧ್ಯಕ್ಷೆ ಪುಷ್ಪಾ, ಪವಿತ್ರಾ, ಪ್ರಕಾಶ, ಹರೀಶ್, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ, ಪಿಡಿಓ ಸಂತೋಷ್ ಇದ್ದರು.