ಕಣಿವೆ, ಫೆ. ೩ : ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಹೊಸಳ್ಳಿಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಸುಣ್ಣದ ಕಲ್ಲು ಗಣಿಗಾರಿಕೆ ನಿಗ್ರಹಿಸಲು ಕ್ರಮ ಕೈಗೊಳ್ಳುವ ಸಂಬAಧ ಜಿಲ್ಲಾಧಿಕಾರಿಗೆ ದೂರು ನೀಡಲು ತೊರೆನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ‘ಶಕ್ತಿ’ ಯಲ್ಲಿ ಪ್ರಕಟವಾದ ಗದ್ದೆಹೊಸಳ್ಳಿಯಲ್ಲಿ ‘ಅಕ್ರಮ ಗಣಿಗಾರಿಕೆ - ಕಣ್ಮುಚ್ಚಿ ಕುಳಿತ ಗಣಿ ಇಲಾಖೆ’ ಎಂಬ ವರದಿಯ ಬಗ್ಗೆ ಗಂಭೀರ ಚರ್ಚೆ ನಡೆಸಿದ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ತೀರ್ಮಾನಿಸಿದರು.
ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ಎಂ.ಟಿ.ಬೇಬಿ, ದೇವರಾಜು, ಪ್ರಕಾಶ್, ಟಿ.ಸಿ. ಶಿವಕುಮಾರ್, ಸಾವಿತ್ರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾತಿ ಅಂಜನಾ ದೇವಿ ಇದ್ದರು.