ಸಮರ್ಥ, ಶಕ್ತಿಶಾಲಿ, ಸ್ವಾವಲಂಬಿ ಭಾರತ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ

ಮಡಿಕೇರಿ, ಫೆ. ೨: ಸಮರ್ಥ, ಶಕ್ತಿಶಾಲಿ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣವಾಗಬೇಕಾದರೆ ಅದು ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರದಿಂದ ಮಾತ್ರ ಸಾಧ್ಯ ಎಂದು ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ನಗರದ ಕಾವೇರಿ ಹಾಲ್‌ನಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ಮೆಚ್ಚುವ ಪ್ರಧಾನಿ ಮೋದಿ ಅವರಿಂದ ದೇಶದಲ್ಲಿ ಊಹಿಸಲಾಗದ ಹಲವು ಬದಲಾವಣೆಗಳಾಗಿವೆ. ಕಾಶ್ಮೀರದಲ್ಲಿ ೩೭೦ ವಿಧಿ ರದ್ದು, ಪೌರತ್ವ ತಿದ್ದುಪಡಿ, ರಾಮಮಂದಿರ ನಿರ್ಮಾಣ ಧ್ಯೇಯ ಈಡೇರಿದೆ. ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳು ಇಡೀ ಜಗತ್ತನ್ನು ನಿಬ್ಬೆರಗುಗೊಳಿಸಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ಸಮರ್ಥ, ಶಕ್ತಿಶಾಲಿ, ಸ್ವಾವಲಂಬಿ ಭಾರತ ನಿರ್ಮಿಸುವ ಗುರಿ ನನಸಾಗಿದ್ದು, ಮತ್ತಷ್ಟು ಬಲಿಷ್ಠವಾಗಿ ದೇಶ ಕಟ್ಟಲು ಮೋದಿ ನಾಯಕತ್ವ ಬೇಕಿದೆ. ಮೊದಲು ಕಾಶ್ಮೀರದಲ್ಲಿ ಭಾರತ ಧ್ವಜ ಹಾರಿಸಲು ಹೆದರುವ ಸ್ಥಿತಿ ಸೃಷ್ಟಿಯಾಗಿತ್ತು. ಇಂದು ೩೭೦ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಪರಿಣಾಮ ತ್ರಿವರ್ಣ ಧ್ವಜ ನಿರ್ಭಯದಿಂದ ಹಾರಾಡುತ್ತಿದೆ. ಆಯೋಧ್ಯೆ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗಿರುವುದು ಭಾರತೀಯರಿಗೆ ಹೆಮ್ಮೆ ತಂದಿದೆ. ರಾಮಮಂದಿರ ವಿಚಾರದಲ್ಲಿ ಬಿಜೆಪಿ ದುಡುಕಿದರೆ ರಕ್ತದೋಕುಳಿ ಹರಿಯುತ್ತದೆ, ರಾಮ ಕಾಲ್ಪನಿಕ ಎಂದು ವಾದಿಸಿದವರು,

ಇಂದು ಜಾಗತಿಕ ಮಟ್ಟದಲ್ಲಿ ದೇಶದ ರಕ್ಷಣಾ ಪಡೆಯ ಗಟ್ಟಿತನ ಗೊತ್ತಾಗಿದೆ. ಚೀನಾವನ್ನು ಎದುರಿಸಲು ಭಾರತ ಸಮರ್ಥ ಎಂದು ಬೇರೆ ದೇಶಗಳು ಹೇಳುತ್ತಿವೆ. ಪ್ರಪಂಚದ ೫ ಆರ್ಥಿಕ ಬಲಾಡ್ಯ ದೇಶಗಳ ಪೈಕಿ ಭಾರತವು ಇದೆ. ೧೦ ವರ್ಷದಲ್ಲಿ ಪ್ರಪಂಚದಲ್ಲಿ ಆರ್ಥಿಕ ಬಲಾಡ್ಯ ದೇಶದಲ್ಲಿ ಭಾರತ ಮೊದಲ ಸ್ಥಾನದಲ್ಲಿರುತ್ತದೆ ಎಂದು ಭವಿಷ್ಯ ನುಡಿದ ಶ್ರೀನಿವಾಸ್ ಪೂಜಾರಿ, ಎಲ್ಲಾ ಮನೆಗಳಲ್ಲಿಯೂ ಅಡುಗೆ ಅನಿಲ ಸಂಪರ್ಕ ದೊರೆತಿದೆ. ಪ್ರತಿಮನೆಗಳಲ್ಲಿಯೂ ಶೌಚಾಲಯ ನಿರ್ಮಾಣವಾಗಿದೆ. ದೀನ ದಯಾಳ್ ಯೋಜನೆ ಮೂಲಕ ವಿದ್ಯುತ್ ದೊರೆತಿದೆ ಎಂದು ವಿವರಿಸಿದರು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮುಖಂಡರೇ ಬಹಿರಂಗ ವಾಗಿ ಮಾತನಾಡುತ್ತಿದ್ದಾರೆ. ೮ ತಿಂಗಳಲ್ಲಿ ೮ ಮೀಟರ್ ರಸ್ತೆಯಾಗಲಿಲ್ಲ. ಬರ ಪರಿಸ್ಥಿತಿಯಿಂದ ಕುಡಿಯಲು ನೀರಿಲ್ಲ, ಜಾನುವಾರು ಗಳಿಗೆ ಮೇವಿಲ್ಲ. ಒಂದು ರೂಪಾಯಿ ಜನರಿಗಾಗಿ ಬಿಡುಗಡೆ ಮಾಡಿಲ್ಲ. ಜೊತೆಗೆ ಕೇಂದ್ರ ಹಣ ನೀಡಿಲ್ಲ ಎಂದು ಸಿದ್ದರಾಮಯ್ಯ ಮೋದಿ ಕಡೆ ಬೊಟ್ಟು ಮಾಡುತ್ತಾರೆ. ರಾಜ್ಯ ರೈತರ ಪರ ನಿಲುವಿದ್ದರೆ ಸಿದ್ದರಾಮಯ್ಯ ಅವರು ರೂ. ೧೦ ಸಾವಿರ ಕೋಟಿ ಹಣ ಬಿಡುಗಡೆ ಗೊಳಿಸಲಿ, ನಂತರ ಕೇಂದ್ರದ ಬಳಿ ಒಟ್ಟಾಗಿ ನಿಯೋಗ ತೆರಳೋಣ. ೨೨ ಲಕ್ಷ ಕ್ವಿಂಟಲ್ ಅಕ್ಕಿಯನ್ನು ರಾಜ್ಯಕ್ಕೆ ಕೇಂದ್ರ ನೀಡುತ್ತಿದೆ. ನೀಡುತ್ತಿರುವ ಒಂದು ಕಾಳು ಅಕ್ಕಿಯೂ ರಾಜ್ಯ ಸರಕಾರದಲ್ಲ. ಜನರನ್ನು ತಪ್ಪುದಾರಿಗೆ ಎಳೆದೊಯ್ಯಲಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟರ್ ಮಾತನಾಡಿ, ಅಮೃತ ಕಾಲದ ಕಡೆ ಭಾರತ ಮುನ್ನುಗುತ್ತಿದೆ. ನಿನ್ನೆಯ ಬಜೆಟ್ ೨೦೪೭ರ ವಿಕಸಿತ ಭಾರತಕ್ಕೆ ಮುನ್ನುಡಿ ಇಟ್ಟಿದೆ. ಚುನಾವಣೆ ನಡುವೆಯೂ ವಿತ್ತೀಯ ನಿಯಂತ್ರಣ ಇಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಡಿ.ಕೆ. ಸುರೇಶ್ ಪ್ರತ್ಯೇಕತೆ ಕೂಗು ಎತ್ತಿರುವುದು ಖಂಡನೀಯ. ಅದನ್ನು ವಿರೋಧಿಸುವ ಕೆಲಸವೂ ಕಾಂಗ್ರೆಸ್ ನಿಂದ ಆಗಿಲ್ಲ. ದೇಶ ವಿರೋಧಿ ಮಾನಸಿಕತೆ ವಿರುದ್ಧ ನಮ್ಮ ಹೋರಾಟ. ಯುವಜನಾಂಗ ಬಿಜೆಪಿ ಪರವಿದೆ, ಅವರನ್ನು ಒಟ್ಟಾಗಿ ಕರೆದೊಯ್ಯಬೇಕು. ಸಮಾಜದ ಎಲ್ಲಾ ವರ್ಗದವರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ದೊರೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ೫೬ ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಮಾಡದ ಸಾಧನೆ ಮೋದಿ ಸರಕಾರ ೧೦ ವರ್ಷದಲ್ಲಿ ಮಾಡಿದೆ. ಜಾಗತಿಕ ಮಟ್ಟದಲ್ಲಿ ವಿಶ್ವಗುರುವಾಗಿ ಪರಿವರ್ತನೆಯಾಗಿದೆ. ಕೇಂದ್ರದ ಸಾಧನೆಯನ್ನು ಮನೆಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರ ಹೆಗಲ ಮೇಲಿದೆ. ಹಿರಿಯರಿಗೆ ಮಾನ್ಯತೆ ನೀಡಬೇಕು. ಯುವನಾಯಕರನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ೨-೩ ತಿಂಗಳಿಗೊಮ್ಮೆ ಹಿರಿಯ-ಕಿರಿಯ ಸೇರಿದಂತೆ ಎಲ್ಲಾ ಹಂತದ ನಾಯಕರು, ಕಾರ್ಯ ಕರ್ತರನ್ನು ಸೇರಿಸಿಕೊಂಡು ಮುನ್ನಡೆ ಯಲಾಗುವುದು. ಸರಕಾರದ ಸಾಧನೆ ತಲುಪಿಸುವ ಕೆಲಸ ಮಾಡ ಲಾಗುವುದು. ಅಸಮಾಧಾನ ಗಳಿದ್ದಾರೆ ಚರ್ಚಿಸಿ ಬಗೆಹರಿಸಿ ಕೊಳ್ಳೋಣ ಎಂದರು. ನಿಕಟ ಪೂರ್ವ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗ ಬೇಕು ಎಂಬುದು ಜನರ ಇಂಗಿತ ವಾಗಿದೆ. ಹೀಗೆಂದು ಸುಮ್ಮನಿರ ಬಾರದು. ಪಕ್ಷಕ್ಕಾಗಿ ಶ್ರಮಿಸಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಜಿಲ್ಲೆಯಿಂದ ೧ ಲಕ್ಷ ಮತಗಳ ಮುನ್ನಡೆ ನೀಡಬೇಕು ಎಂದು ಕರೆ ನೀಡಿದರು.

೨ ವಿಚಾರಗಳಿಗೆ ಅನುಮೋದನೆ

ಆಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಅಭಿನಂದನೆ ಸಲ್ಲಿಸುವ ಭಾಗವಾಗಿ ಆಯೋಧ್ಯೆ ಪ್ರವಾಸಕ್ಕೆ ಜಿಲ್ಲಾ ಉಪಾಧ್ಯಕ್ಷ ವಿ.ಎಂ. ಲೋಕೇಶ್ ನಿರ್ಣಯ ಮಂಡಿಸಿದರು. ಮಡಿಕೇರಿ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್ ಇದನ್ನು ಅನುಮೋದಿಸಿದರು. ಮಾಜಿ ಜಿಲ್ಲಾಧ್ಯಕ್ಷ ಬಿ.ಡಿ. ಮಂಜುನಾಥ್ ಪಾರಂಪರಿಕವಾಗಿ ವನ್ಯಪ್ರಾಣಿಗಳ ವಸ್ತುಗಳನ್ನು ಸರಕಾರಕ್ಕೆ ನೀಡುವ ವಿಚಾರ ವಿರೋಧಿಸಿ ಸರಕಾರದ ಗಮನ ಸೆಳೆಯಲು ನಿರ್ಣಯ ಮಂಡಿಸಿದರು. ಜಿಲ್ಲಾ ವಕ್ತಾರ ಮಹೇಶ್ ಜೈನಿ ಈ ವಿಚಾರ ಅನುಮೋದಿಸಿದರು. ಇವೆರಡು ವಿಚಾರಕ್ಕೆ ಸಭೆಯಲ್ಲಿ ಪಾಲ್ಗೊಂಡವರು ಕೈಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು.

ನೂತನ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಹಾಗೂ ನಿಕಟಪೂರ್ವ ಅಧ್ಯಕ್ಷ ಪಳೆಯಂಡ ರಾಬಿನ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಮಂಗಳೂರು ವಿಭಾಗದ ಪ್ರಬಾರಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಪ್ರಬಾರಿ ಬಿ.ಬಿ. ಭಾರತೀಶ್, ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಡೀನಾ ಪರ್ಲಕೋಟಿ, ಹೇಮ ಅಜಿತ್ ಪ್ರಾರ್ಥಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ ಸ್ವಾಗತಿಸಿ, ಕುಂಞAಡ ಅರುಣ್ ಭೀಮಯ್ಯ ನಿರೂಪಿಸಿ, ವಂದಿಸಿದರು.