ಮಡಿಕೇರಿ, ಫೆ. ೨: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವದರೊಂದಿಗೆ ಸಂಸ್ಕಾರವAತರನ್ನಾಗಿ ಬೆಳೆಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಡಿಕೇರಿ ನಗರಸಭೆ ಸಹಯೋಗದೊಂದಿಗೆ ವಿಜಯನಗರದ ಸಂತ ಜೋಸೆಫರ ಶಾಲೆ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಮಕ್ಕಳು ದೇಶದ ಮುಂದಿನ ಪ್ರಜೆಗಳು, ಅವರುಗಳನ್ನು ಉತ್ತಮ ರೀತಿಯಲ್ಲಿ ಬೆಳೆಸಿದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಶಿಕ್ಷಣದ ಮೂಲಕ ಬದಲಾವಣೆ ತರಬಹುದು, ಆದರೆ ಕೇವಲ ಪದವಿಯೊಂದೇ ಮುಖ್ಯವಲ್ಲ ಸಮಾಜದಲ್ಲಿ ಹೇಗೆ ಇರಬೇಕೆಂಬುದು ಮುಖ್ಯ. ಹಾಗಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಿಕೊಡಬೇಕು, ಹಿರಿಯರಿಗೆ ಗೌರವ ಕೊಡುವದನ್ನು ತಿಳಿಹೇಳಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು. ಪ್ರಸ್ತುತ ಮಕ್ಕಳಿಗೆ ಮೊಬೈಲ್ ಕೊಟ್ಟು ಅವರ ಪಾಡಿಗೆ ಬಿಟ್ಟು ಬಿಡುವ ಪರಿಸ್ಥಿತಿ ಕಂಡುಬರುತ್ತಿದೆ.

(ಮೊದಲ ಪುಟದಿಂದ) ಪೋಷಕರೇ ಇಂತಹ ತಪ್ಪು ಮಾಡುತ್ತಿದ್ದಾರೆ. ಬದಲಿಗೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಿದರೆ ಅಲ್ಲಿ ಸ್ವಾವಲಂಬಿಯಾಗಿ ಬೆಳೆಯಲು ಅವಕಾಶ ಸಿಗುತ್ತದೆ. ಅಂಗನವಾಡಿಗಳ ಅಭಿವೃದ್ಧಿಗೆ ಪೋಷಕರು ಜವಾಬ್ದಾರಿ ವಹಿಸಿಕೊಳ್ಳಬೇಕು. ತನ್ನಿಂದ ಆಗುವ ಸಹಕಾರ ನೀಡುವದಾಗಿ ಶಾಸಕರು ಹೇಳಿದರು. ಕಾರ್ಯಕರ್ತೆಯರು, ಸಹಾಯಕಿಯರು ಕಡಿಮೆ ವೇಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ, ಅವರುಗಳ ಸಂಕಷ್ಟಕ್ಕೆ ನೆರವಾಗುವದಾಗಿ ಹೇಳಿದರು. ಮಕ್ಕಳ ಸುರಕ್ಷತೆಗಾಗಿ ಆವರಣ ಗೋಡೆ ಹಾಗೂ ಮುಂಭಾಗದಲ್ಲಿ ಶೀಟ್ ಅಳವಡಿಸುವಂತೆ ಇದೇ ಸಂದರ್ಭ ಇಲಾಖೆಯ ಉಪನಿರ್ದೇಶಕ ನಟರಾಜ್ ಅವರಿಗೆ ಶಾಸಕರು ಸೂಚಿಸಿದರು. ವೇದಿಕೆಯಲ್ಲಿದ್ದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್‌ಕುಮಾರ್ ಶೀಟ್ ಅನ್ನು ನಗರಸಭೆಯಿಂದ ಅಳವಡಿಸುವದಾಗಿ ತನದಲ್ಲೂ ಮಕ್ಕಳ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ಡ್ ಸದಸ್ಯ ಅರುಣ್ ಶೆಟ್ಟಿ, ತೀರಾ ಸಣ್ಣದಾಗಿದ್ದ ಅಂಗನವಾಡಿಯಲ್ಲಿ ಮಕ್ಕಳಿಗೆ ಕಷ್ಟವಾಗುತ್ತಿತ್ತು, ಈ ಹಿನ್ನೆಲೆಯಲ್ಲಿ ಪ್ರಯತ್ನ ಪಟ್ಟು ನೂತನ ಅಂಗನವಾಡಿ ನಿರ್ಮಿಸಲಾಗಿದೆ. ಸಂಪಿಗೆಕಟ್ಟೆಯಲ್ಲಿದ್ದ ಅಂಗನವಾಡಿ ಯನ್ನು ಇಲ್ಲಿಗೆ ಸ್ಥಳಾಂತರಿಸುವಲ್ಲಿ ಅಲ್ಲಿನ ಸದಸ್ಯ ಕೆ.ಎಸ್.ರಮೇಶ್ ಅವರ ಸಹಕಾರವನ್ನು ಶ್ಲಾಘಿಸಿದರು. ರೂ.೧೬.೫ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇನ್ನೂ ಕೂಡ ಸೌಲಭ್ಯಗಳ ಅಗತ್ಯವಿದ್ದು ಶಾಸಕರು ಸಹಕರಿಸುವಂತೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರಾದ ಕೆ.ಎಸ್. ರಮೇಶ್, ರಾಜೇಶ್ ಯಲ್ಲಪ್ಪ, ಸಬಿತಾ, ಶಾರದಾ ನಾಗರಾಜ್, ಶ್ವೇತಾ, ಮಾಜಿ ಸದಸ್ಯೆ ಪ್ರತಿಭಾ ಶೆಟ್ಟಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷಿö್ಮ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಕವಿತಾ, ಅಂಗನವಾಡಿ ಕಾರ್ಯಕರ್ತೆಯರು , ಪೋಷಕರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಸದಾಶಿವ ರೈ ಅವರನ್ನು

ಸನ್ಮಾನಿಸಿ, ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಸವಿತಾ ಕೀರ್ತನ್ ಸ್ವಾಗತಿಸಿ, ವಂದಿಸಿದರು.