ಪಾಲಿಬೆಟ್ಟ, ಫೆ. ೧: ಪಾಲಿಬೆಟ್ಟದ ಪಿಬಿಟಿ ಬಿಲ್ಡರ್ಸ್ ಅವರಿಂದ ೨ನೇ ವರ್ಷದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವು ೩ ದಿನಗಳ ಕಾಲ ಪಾಲಿಬೆಟ್ಟದ ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಜುಮ್ಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡೆಗೆ ಒತ್ತು ನೀಡಬೇಕಾಗುತ್ತದೆ. ಗೆಲುವು ಸೋಲು ಸಹಜ. ಸೋಲನ್ನು ಗೆಲುವು ಎಂದು ಸ್ವೀಕಾರ ಮಾಡಬೇಕಾಗುತ್ತದೆ. ಕ್ರೀಡೆಯಿಂದ ಮನುಷ್ಯನ ಶಾರೀರಿಕ ಬೆಳವಣಿಗೆ ಸಾಧ್ಯ ಎಂದರು. ೩ ದಿನಗಳ ಪಂದ್ಯಾಟದಲ್ಲಿ ಬಾಡಗ-ಬಾಣಂಗಾಲ ತಂಡ ಚಾಂಪಿಯನ್
ಪಾಲಿಬೆಟ್ಟ, ಫೆ. ೧: ಪಾಲಿಬೆಟ್ಟದ ಪಿಬಿಟಿ ಬಿಲ್ಡರ್ಸ್ ಅವರಿಂದ ೨ನೇ ವರ್ಷದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವು ೩ ದಿನಗಳ ಕಾಲ ಪಾಲಿಬೆಟ್ಟದ ಸಾರ್ವಜನಿಕ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಜುಮ್ಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡೆಗೆ ಒತ್ತು ನೀಡಬೇಕಾಗುತ್ತದೆ. ಗೆಲುವು ಸೋಲು ಸಹಜ. ಸೋಲನ್ನು ಗೆಲುವು ಎಂದು ಸ್ವೀಕಾರ ಮಾಡಬೇಕಾಗುತ್ತದೆ. ಕ್ರೀಡೆಯಿಂದ ಮನುಷ್ಯನ ಶಾರೀರಿಕ ಬೆಳವಣಿಗೆ ಸಾಧ್ಯ ಎಂದರು. ೩ ದಿನಗಳ ಪಂದ್ಯಾಟದಲ್ಲಿ ೧೯ ತಂಡಗಳು ಭಾಗವಹಿಸಿದ್ದು, ಅದರಲ್ಲಿ ಬಾಡಗ ಬಾಣಂಗಾಲ ಸಿಗ್ನೇಚರ್ಸ್ ತಂಡ ಪ್ರಥಮ, ಮಾಲ್ದಾರೆ ಬಾಯ್ಸ್ - ಮಾಲ್ದಾರೆ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಪಾಲಿಬೆಟ್ಟದ ಜಾಫರ್ ಅವರ ಪುತ್ರ ಮೊಹಮ್ಮದ್ ಶಜೀನ್ ಪಿಯಾನೋದಲ್ಲಿ ರಾಷ್ಟçಗೀತೆಯನ್ನು ನುಡಿಸಿದರು. ಜಿ.ಪಂ. ಮಾಜಿ ಸದಸ್ಯರು, ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ವಿಜು ಸುಬ್ರಮಣಿ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಂ.ಬಿ. ಪವಿತ್ರ, ಅಬ್ದುಲ್ ನಾಸಿರ್, ಉದ್ಯಮಿಗಳಾದ ಟಿ.ಜಿ. ವಿಜೇಶ್, ಸುಧಾಕರ್ ರೈ, ಎಂ.ಎ. ಇಸ್ಮಾಯಿಲ್, ಅಬ್ದುಲ್ ಜಬ್ಬಾರ್, ಸಿದ್ದಾಪುರ ಠಾಣಾಧಿಕಾರಿ ಶಿವಣ್ಣ, ದೇವಯ್ಯ ಮತ್ತು ಆಯೋಜಕರುಗಳಾದ ಜಕ್ರಿಯ, ನೌಷಾದ್, ರಷೀದ್ ಅವರುಗಳು ಬಹುಮಾನ ವಿತರಣೆಯನ್ನು ಮಾಡಿದರು.