ಮಡಿಕೇರಿ, ಫೆ. ೧: ಸುಮಾರು ೧೫೦ ವರ್ಷಗಳ ಇತಿಹಾಸ ಹೊಂದಿರುವ ಮಂಜಿನ ನಗರಿಯ ಜಿಲ್ಲಾಕೇಂದ್ರವೂ ಆದ ಮಡಿಕೇರಿ ಕೊಡವ ಸಮಾಜ ಇದೀಗ ಪುನರ್ ನವೀಕರಣಗೊಂಡಿದೆ. ಹಲವಷ್ಟು ಕೆಲಸ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಹಂತಹAತವಾಗಿ ನಡೆಯುತ್ತಿದೆ.

ಕೊಡವ ಜನಾಂಗದ ಪಾಲಿನ ಮೊಟ್ಟ ಮೊದಲ ಕೊಡವ ಸಮಾಜ ಎಂಬ ಹೆಗ್ಗಳಿಕೆಗೆ ಕಾರಣವಾದ ಮಡಿಕೇರಿ ಕೊಡವ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಕೊಡವ ಪದ್ಧತಿ, ಪರಂಪರೆ, ಭಾಷೆ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಮಾರು ೧೫೦ ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಕೊಡವ ಸಂಘವೊAದನ್ನು ಅಸ್ತಿತ್ವಕ್ಕೆ ತರಲಾಯಿತು. ನಂತರದಲ್ಲಿ ಕೊಡವ ಮಕ್ಕಳಿಗೆ ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡವ ವಿದ್ಯಾನಿಧಿಯನ್ನು ಪ್ರಾರಂಭಿಸಿತು. ನಂತರದಲ್ಲಿ ಕೊಡವ ಸಂಘ ಅಭಿವೃದ್ಧಿಯತ್ತ ಬೆಳೆಯತೊಡಗಿತು. ಸುಮಾರು ೫೦ ವರ್ಷಗಳ ಹಿಂದೆ ಈ ಕೊಡವ ಸಂಘವನ್ನು ಮಡಿಕೇರಿ ಕೊಡವ ಸಮಾಜವೆಂಬ ಹೆಸರಿನೊಂದಿಗೆ ತನ್ನದೇ ಆದ ಬೈಲಾವನ್ನು ರೂಪಿಸುವ ಮೂಲಕ ಸಂಘದ ನಿಯಮಾನುಸಾರ ಕಾರ್ಯನಿರ್ವಹಿಸುತ್ತಾ ಬರುತ್ತಿದೆ.

ಆಗಿನ ನೂರಾರು ದಾನಿಗಳ ಸಹಾಯಹಸ್ತದಿಂದ ಮಡಿಕೇರಿ ಕೋಟೆಯ ಮುಂದಿರುವ ಸಮಾಜದ ಜಾಗದಲ್ಲಿ ಮೇಲಿನ ಕೊಡವ ಸಮಾಜ ಹಾಗೂ ಕೆಳಗಿನ ಕೊಡವ ಸಮಾಜ ನಿರ್ಮಾಣವಾಯಿತು. ಕೊಡವ ಆಚಾರ-ವಿಚಾರ, ಪರಂಪರೆಯ ಉಳಿವಿಗೊಂದು ವೇದಿಕೆಯಾದರೆ; ವಿವಾಹ, ನಾಮಕರಣ, ಕೊಡವ ಕೇರಿಗಳ ಸಭೆ ಸಮಾರಂಭಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆತೋರಿದ ಕೊಡವ ಸಾಧಕರನ್ನು ಗುರುತಿಸಿ ಗೌರವಿಸುವ ವೇದಿಕೆಯಾಯಿತು.

ಕೊಡಗಿನ ಮೊದಲ ಏಕೈಕ ಕೊಡವ ಸಮಾಜವಾದ್ದರಿಂದ ಕೊಡಗಿನವÀರಲ್ಲದೆ ವಿಶ್ವದ ವಿವಿಧೆಡೆ ನೆಲೆಸಿರುವ ಕೊಡವರು ಕೂಡ ಈ ಸಮಾಜದ ಸದಸ್ಯರಾಗಿ ಪ್ರಸ್ತುತ ೩೪೦೦ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಕೊಡವರು ಎಲ್ಲೇ ಇದ್ದರೂ ಈ ಸಮಾಜದಲ್ಲಿ ಸದಸ್ಯತ್ವ ಪಡೆಯಲು ಇಲ್ಲಿ ಅವಕಾಶವಿದೆ. ಪ್ರತೀ ವರ್ಷ ಕೊಡಗಿನ ಸಾಂಪ್ರದಾಯಿಕ ಕೈಲ್‌ಪೋಳ್ದನ್ನು ಆಚರಿಸಿದರೆ ಪುತ್ತರಿ ನಮ್ಮೆಯಲ್ಲಿ ಕೊಡವರಲ್ಲದೆ ಕೊಡವೇತರರು ಒಟ್ಟಾಗಿ ಸೇರಿ ನೆರೆಕಟ್ಟಿ ಕದಿರು ತೆಗೆದು ಹÀಬ್ಬದ ಸಂಭ್ರಮವನ್ನು ಆಚರಿಸುತ್ತಾ ಬರುತ್ತಿದ್ದಾರೆ. ಈವರೆಗೆ ಈ ಸಮಾಜದಲ್ಲಿ ೧೫ ಅಧ್ಯಕ್ಷರು ಹಾಗೂ ೧೮ ಕಾರ್ಯದರ್ಶಿಗಳು ಸೇರಿದಂತೆ ಹಲವರು ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಬೆಳೆಯುತ್ತಿರುವ ಮಡಿಕೇರಿ ನಗರದಲ್ಲಿ ಕೊಡವ ಸಮಾಜ ಹಳೆಯ ಕಟ್ಟಡದಿಂದ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಕಳೆದ ಹÀನ್ನೆರಡು ವರ್ಷದ ಹಿಂದೆ ಆಗಿನ ಆಡಳಿತ ಮಂಡಳಿ ಮೇಲಿನ ಕೊಡವ ಸಮಾಜವನ್ನು ಕೆಡವಿ ನಗರಕ್ಕೆ ಎದ್ದುಕಾಣುವಂತ ಬೃಹತ್ತಾದ ಕಟ್ಟಡವನ್ನು ನಿರ್ಮಿಸಿ ಹಲವು ವಾಣಿಜ್ಯ ಸಂಕೀರ್ಣ, ಕೊಡಗು ಸೌಹಾರ್ದ ಸಹಕಾರಿ ಸಂಘ, ಕೊಡವ ವಿದ್ಯಾನಿಧಿ, ಸಮಾಜದ ಮುಖ್ಯ ಕಚೇರಿಯನ್ನು ಪ್ರಾರಂಭಿಸಲಾಯಿತು. ಸಮಾಜದ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಕೂಡ ಉತ್ತಮ ಅಭಿವೃದ್ಧಿಯನ್ನು ಪಡೆÀಯುತ್ತಿದೆ.

ಅದರಂತೆ ಹಳೆಯದಾದ ಕೆಳಗಿನ ಕೊಡವ ಸಮಾಜ ಕಟ್ಟಡವನ್ನು ಈಗಿನ ಆಡಳಿತ ಮಂಡಳಿ ಪುನರ್ ನವೀಕರಣ ನಡೆಸಲು ಮುಂದಾಯಿತು. ಪುನರ್ ನವೀಕರಣ ಕಾರ್ಯಕ್ಕೆ ಸುಮಾರು ರೂ. ೧ ಕೋಟಿ ೨೦ ಲಕ್ಷ ಅಂದಾಜಿಸಲಾಯಿತು. ಪುರಾತತ್ವ ಇಲಾಖೆ, ನಗರಸಭೆ ಹಾಗೂ ಇನ್ನಿತರೆ ಹಲವು ಸಂಸ್ಥೆಗಳ ಅನುಮತಿ ಪಡೆದು ಹಲವು ದಾನಿಗಳ ಸಹಕಾರದಿಂದ ಈವರೆಗೆ ಸುಮಾರು ೮೮ ಲಕ್ಷ ಸಂಗ್ರಹಿಸಲಾಗಿ ಕಳೆದ ಕೆಲವು ತಿಂಗಳಿAದ ಪುನರ್ ನವೀಕರಣ ಕಾರ್ಯ ನಡೆದಿದೆ. ನೂತನ ಸಭಾಂಗಣ, ಅತ್ಯಾಧುನಿಕ ಮಾದರಿಯ ಅಡುಗೆ ಕೋಣೆ ಹಾಗೂ ಹಲವು ಅಭಿವೃದ್ಧಿ ಕಾರ್ಯವನ್ನು ಮಾಡಲಾಗಿದೆ. ಮಡಿಕೇರಿಯ ಚೈನ್‌ಗೇಟ್ ಬಳಿ ಇರುವ ಸಮಾಜದ ಜಾಗದಲ್ಲಿಯೂ ಹಲವು ಅಭಿವೃದ್ಧಿ ಕಾರ್ಯಗಳು ನಡೆಸಲು ಸಿದ್ಧತೆ ನಡೆಸುತ್ತಿದ್ದು, ಸಮಾಜದ ವತಿಯಿಂದಲೇ ಪೆಟ್ರೋಲ್ ಬಂಕ್ ಪ್ರಾರಂಭಕ್ಕೂ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತದ ಕೆಲಸ ಕಾರ್ಯದ ನಡುವೆಯೇ ಇದೀಗ ಸಭೆ ಸಮಾರಂಭಗಳೂ ಆಯೋಜನೆಗೊಳ್ಳುತ್ತಿದೆ. ಅಗತ್ಯ ವ್ಯವಸ್ಥೆಗಳಿಗಾಗಿ ಇನ್ನಷ್ಟು ಕಾಮಗಾರಿ ನಡೆಯಬೇಕಿದ್ದು, ದಾನಿಗಳ ಸಹಕಾರವನ್ನು ಪಡೆಯಲಾಗುತ್ತಿದೆ. - ಕರುಣ್