ಕೋವರ್ ಕೊಲ್ಲಿ ಇಂದ್ರೇಶ್

ವಾರಣಾಸಿ, ಫೆ. ೧: ವಾರಣಾಸಿ ಜಿಲ್ಲಾ ನ್ಯಾಯಾಲಯವು ಬುಧವಾರ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ವಿಗ್ರಹಗಳ ಮುಂದೆ ಅರ್ಚಕರು ಪ್ರಾರ್ಥನೆ ಸಲ್ಲಿಸಬಹುದು ಎಂದು ತೀರ್ಪು ನೀಡಿದ ೮ ಗಂಟೆಗಳ¯ತೋರುತ್ತಿರುವ ಆತುರವು ಆ ಪ್ರಕರಣದಲ್ಲಿ ಪ್ರತಿ ವಾದಿಗಳಿಗೆ ಯಾವುದೇ ಕಾನೂನಿನ ಬೆಂಬಲ ಸಿಗಬಾರದು ಎಂಬುದಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಟೀಕಿಸಿದ್ದಾರೆ.

ತೀರ್ಪಿನ ವಿರುದ್ಧ ಬುಧವಾರ ರಾತ್ರಿಯೇ

ಮೇಲ್ಮನವಿ ಸಲ್ಲಿಸಿದ ಮಸೀದಿ ಸಮಿತಿ

ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧ ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ಬುಧವಾರ ರಾತ್ರಿ ನಿರಾಕರಿಸಿದೆ.

ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿಯು ಗುರುವಾರ ಮುಂಜಾನೆ ೩ ಗಂಟೆಗೆ ಉನ್ನತ ನ್ಯಾಯಾಲಯದ ರಿಜಿಸ್ಟಾçರ್ ಅವರನ್ನು ಸಂಪರ್ಕಿಸಿತು. ರಿಜಿಸ್ಟಾçರ್ ಅವರು ಬೆಳಿಗ್ಗೆ ೪ ಗಂಟೆಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ. ವೈ. ಚಂದ್ರಚೂಡ್ ಅವರಿಗೆ ಮಾಹಿತಿ ನೀಡಿದರು.

ಆದರೆ ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧ ಯಾವುದೇ ಪರಿಹಾರಕ್ಕಾಗಿ ಮಸೀದಿ ಸಮಿತಿಯು ಮೊದಲು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸಬೇಕು ಎಂದು ಸಿಜೆಐ ಹೇಳಿದರು. ೆ್ಲÃ ರಾತ್ರಿ ೧೦.೩೦ ಗಂಟೆಗೆ ಜ್ಞಾನವಾಪಿ ಆವರಣದಲ್ಲಿ ಹಿಂದೂಗಳು ಪೂಜೆ ಸಲ್ಲಿಸಿದ್ದಾರೆ. ವಿವರಗಳ ಪ್ರಕಾರ, ನ್ಯಾಯಾಲಯದ ಆದೇಶದ ನಂತರ ಶೀಘ್ರದಲ್ಲೇ ಪೂಜೆಯ ಸಿದ್ಧತೆಗಳು ಪ್ರಾರಂಭವಾಗಿದ್ದವು ಮತ್ತು ಆವರಣದಲ್ಲಿ ಭಾರೀ ಭದ್ರತೆಯೊಂದಿಗೆ ಆರತಿಯನ್ನು ನಡೆಸಲಾಯಿತು.

ಈ ಬೆಳವಣಿಗೆಯನ್ನು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ದೃಢಪಡಿಸಿದ್ದು, ಅರ್ಚಕರೊಬ್ಬರು ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ನಂತರ ಶಾಯನ್ ಆರತಿಯನ್ನು ನೆರವೇರಿಸಿದರು ಎಂದು ತಿಳಿಸಿದ್ದಾರೆ.

ವಿಶ್ವನಾಥ ದೇವಾಲಯದ ಮುಂಭಾಗದಲ್ಲಿ ಭವ್ಯವಾದ ನಂದಿ ಕುಳಿತಿರುವ ‘ತೇಖಾನಾ’ ಕಡೆಗೆ ಹೋಗುವ ಮಾರ್ಗವನ್ನು ಗುರುವಾರ ಸುಮಾರು ೧೨.೦೦ ಗಂಟೆಗೆ ತೆರೆಯಲಾಯಿತು. ಜ್ಞಾನವಾಪಿ ಆವರಣದ ಸಮೀಕ್ಷೆಯ ಸಮಯದಲ್ಲಿ ಕಂಡುಬAದ ವಿಗ್ರಹಗಳನ್ನು ಇರಿಸಲಾಯಿತು ಮತ್ತು ಪ್ರಾರ್ಥನೆಯನ್ನು ನಡೆಸಲಾಯಿತು, ನಂತರ ಪ್ರಸಾದವನ್ನು ಅರ್ಪಿಸಲಾಯಿತು. ವಿಷ್ಣುವಿನ ಪ್ರತಿಮೆ, ಗಣೇಶನ ಪ್ರತಿಮೆ, ಹನುಮಂತನ ಎರಡು ಪ್ರತಿಮೆಗಳು ಮತ್ತು ಅದರ ಮೇಲೆ ರಾಮನ ಬರಹವಿರುವ ಕಲ್ಲನ್ನು ಇಡಲಾಗಿದೆ. ಗುರುವಾರದಿಂದ, ಜ್ಞಾನವಾಪಿ ಸಂಕೀರ್ಣದ ಅಧಿಕಾರಿಗಳು ಪ್ರಾರ್ಥನೆಯ ಪಠಣದೊಂದಿಗೆ ಶಾಯನ್ ಆರತಿ ಮತ್ತು ಮಂಗಲ್ ಆರತಿ ಸೇರಿದಂತೆ ಎಲ್ಲಾ ಪೂಜಾ ವಿಧಿಗಳನ್ನು ಕೈಗೊಳ್ಳುತ್ತಾರೆ.

ಪೊಲೀಸ್ ಭದ್ರ ಕೋಟೆ

ಏತನ್ಮಧ್ಯೆ, ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಉತ್ತರ ಪ್ರದೇಶ ಪೊಲೀಸರು ಜಾಗರೂಕರಾಗಿದ್ದು ಯಾವುದೇ ವದಂತಿಗಳು ಹರಡುತ್ತವೆಯೇ ಎಂದು ಸಾಮಾಜಿಕ ಮಾಧ್ಯಮದ ಮೇಲೆ ನಿಗಾ ಇಟ್ಟಿದ್ದರು. ವಾರಣಾಸಿಯ ಜ್ಞಾನವಾಪಿ ಸಂಕೀರ್ಣದ ಸುತ್ತಲೂ ಭಾರೀ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನ್ಯಾಯಾಲಯದ ತೀರ್ಪಿನ ನಂತರ, ವಕೀಲ ಸೋಹನ್ ಲಾಲ್ ಆರ್ಯ ಸುದ್ದಿಗಾರರಿಗೆ ಮಾತನಾಡಿ, ಭಕ್ತರಿಗಾಗಿ ವ್ಯಾಸ್ ಕಾ ತೇಖಾನಾವನ್ನು ಇನ್ನೂ ತೆರೆಯಲಾಗಿಲ್ಲ ಎಂದರು. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕಾಶಿ ವಿಶ್ವನಾಥ ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ಪಾಂಡೆ, "ನ್ಯಾಯಾಲಯವು ಹಲವು ವರ್ಷಗಳಿಂದ ಮುಚ್ಚಲಾಗಿದ್ದ ‘ತಹಖಾನಾ’ ದಲ್ಲಿ ಆರಾಧನೆಯನ್ನು ತೆರೆಯಲು ಮತ್ತು ನಂತರ ಪೂಜೆ ನಡೆಸಲು ಆದೇಶಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ, ನಮ್ಮ ದೇವರನ್ನು ಆರಾಧಿಸುವ ಹಕ್ಕನ್ನು ನಮಗೆ ನೀಡಲಾಗಿದೆ ಎಂದರು. ನೆಲಮಹಡಿ ಸ್ವಚ್ಛಗೊಳಿಸಿದ ನಂತರ, ಲಕ್ಷಿö್ಮ ದೇವಿ ಹಾಗೂ ಗಣೇಶ ದೇವರುಗಳಿಗೆ ಆರತಿಯನ್ನು ಮಾಡಲಾಯಿತು ಎಂದು ಕೆಲವು ಸ್ಥಳೀಯರು ತಿಳಿಸಿದ್ದಾರೆ.

ಪೂಜೆಗೆ ಅಖಿಲೇಶ್ ಯಾದವ್ ಟೀಕೆ

ಈ ಕುರಿತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ‘ನ್ಯಾಯಾಲಯದ ಆದೇಶವನ್ನು ಅನುಸರಿಸುವಾಗ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ವಾರಣಾಸಿ ಜಿಲ್ಲಾ ನ್ಯಾಯಾಲಯವು ಪೂಜೆಗೆ ವ್ಯವಸ್ಥೆ ಕಲ್ಪಿಸಲು ಏಳು ದಿನಗಳ ಅವಧಿಯನ್ನು ನಿಗದಿಪಡಿಸಿದೆ. ಆದರೆ, ನ್ಯಾಯಾಲಯದ ಆದೇಶಗಳ ಜಾರಿಯಲ್ಲಿ ಸರ್ಕಾರ