ವೀರಾಜಪೇಟೆ, ಫೆ. ೨: ಸಮೀಪದ ಕಡಂಗದ ಕೊಕ್ಕಂಡಬಾಣೆ ಉರೂಸ್‌ಗೆ ಇಂದು ಚಾಲನೆ ನೀಡಲಾಯಿತು.

ಮಧ್ಯಾಹ್ನದ ನಮಾಜ್ ಬಳಿಕ ಮುಹ್ಯದ್ದೀನ್ ಜುಮಾ ಮಸೀದಿಯಿಂದ ಹೊರಟ ಬೃಹತ್ ಜಾಥವು ಕೊಕ್ಕಂಡಬಾಣೆ ದರ್ಗಾವನ್ನು ತಲುಪಿತು.

ಉರೂಸ್‌ನ ಧ್ವಜಾರೋಹಣ ಕಾರ್ಯಕ್ರಮವನ್ನು ಜಮಾಹತ್ ಅಧ್ಯಕ್ಷ ಅಬ್ದುಲ್ಲ ಅವರು ನೆರವೇರಿಸಿದರು. ಮದ್ರಸದ ಮುಖ್ಯೋಪಾಧ್ಯಾಯ ಶುಹೈಬ್ ಫೈಜಿ ಮಾತನಾಡಿ; ಉರೂಸ್ ಅಂಗವಾಗಿ ಐದು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ನಂತರ ಜಮಾಅತ್ ಖತೀಬ ಮೊಹಮ್ಮದ್ ರಫೀಕ್ ಲತೀಫಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಸಹ ಕಾರ್ಯದರ್ಶಿ ಸಮೀರ್ ಪಿ.ಎಚ್., ಸಂಸ್ಥೆಯ ಉಪಾಧ್ಯಕ್ಷ ಸಲಾಂ, ಹ್ಯಾರಿಸ್, ಯೂಸಫ್ ಉಸ್ತಾದ್, ಬದ್ರಿಯಾ ಜುಮಾ ಮಸೀದಿ ಖತೀಬ ಇಸ್ಮಾಯಿಲ್ ಲತೀಫ, ಉಸ್ಮಾನ್ ಕೆ.ಇ., ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.