ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೀಗಂದುಬಿಟ್ಟೀರಾ ಹುಷಾರ್!

ಬೆಂಗಳೂರು, ಜ. ೩೧: ಸಾಜು ಕೆ. ಕುಮಾರನ್ ಎಂಬವರು ರಾಜ್ಯ ರಾಜಧಾನಿಯಿಂದ ಕೊಚ್ಚಿಗೆ ಹೋಗುವ ಏರ್ ಇಂಡಿಯಾ ಎಕ್ಸ್ಪೆÀ್ರ‍್ರಸ್ ವಿಮಾನದಲ್ಲಿ ಟೇಕ್‌ಆಫ್ ಆಗಬೇಕಿತ್ತು. ಆ ಸಮಯದಲ್ಲಿ ತನ್ನ ತಂಗಿ ಮತ್ತು ಅವಳ ನವಜಾತ ಶಿಶುವಿನ ಸಾವಿನ ಸುದ್ದಿ ಕೇಳಿದ ನಂತರ ಅವರು ತನ್ನ ತವರು ಕೇರಳಕ್ಕೆ ಹೋಗಲು ಸಿದ್ಧರಾದರು. ಶೀಘ್ರದಲ್ಲೇ ಕೆಐಎ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯ ಆರಂಭಿಕ ತಪಾಸಣೆಯ ನಂತರ, ಎರಡನೇ ಸುತ್ತಿನ ತಪಾಸಣೆಗಾಗಿ ವಿಮಾನ ಹತ್ತುವ ಮೊದಲು ಕುಮಾರನ್ ಅವರನ್ನು ಮರಳಿ ಕರೆಸಲಾಯಿತು. ಅವರ ಬ್ಯಾಗ್ ಅನ್ನು ತೆರೆಯಲು ಸಹ ವಿನಂತಿಸಲಾಯಿತು. ಇದರಿಂದ ಕೆರಳಿದ ಕುಮಾರನ್ ಅವರು ನಾನೇನು ಬಾಂಬ್ ಅಥವಾ ಚಾಕು ಹೊತ್ತೊಯ್ಯುತ್ತಿದ್ದೀನಾ ಎಂದು ಭದ್ರತಾ ಸಿಬ್ಬಂದಿಯನ್ನು ಕೇಳಿದರು. ಈ ಮಾತುಗಳಿಂದ ಗಾಬರಿಗೊಂಡ ಭದ್ರತಾ ಸಿಬ್ಬಂದಿ ಆವರನ್ನು ತಡೆದು ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸುತ್ತಿರುವಾಗ, ಕುಮಾರನ್ ಅವರು ತುರ್ತಾಗಿ ತನ್ನ ತವರಿಗೆ ಹೋಗುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಅವರ ಸಹೋದರಿ ಮತ್ತು ಅವಳ ಮಗುವಿನ ಸಾವಿನ ಸುದ್ದಿಯ ಬಗ್ಗೆ ಹೇಳಿಕೊಂಡರು. ಇದನ್ನು ಅನುಸರಿಸಿ, ಪೊಲೀಸ್ ಅಧಿಕಾರಿಗಳು ಆ ವ್ಯಕ್ತಿಯನ್ನು ಹೋಗಲು ಬಿಟ್ಟಿದ್ದಾರೆ. ಅವರು ಕರೆದಾಗಲೆಲ್ಲಾ ಹೆಚ್ಚಿನ ವಿಚಾರಣೆಗಾಗಿ ತಮ್ಮ ಮುಂದೆ ಹಾಜರಾಗುವಂತೆ ಅವರು ಒಪ್ಪಿಗೆ ಸೂಚಿಸಿದ ಬಳಿಕ ಈ ಘಟನೆ ನಡೆದಿದೆ.

ಗಡಿಯಲ್ಲಿ ಚೀನಾ ಸೈನಿಕರನ್ನು ದಿಟ್ಟವಾಗಿ ಎದುರಿಸಿದ ಭಾರತೀಯ ಕುರಿಗಾಹಿಗಳು!

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ), ಜ. ೩೧: ಭಾರತದ ಸೈನಿಕರ ಜೊತೆ ಗುದ್ದಾಟ ನಡೆಸಿ ಸೋತು ಸುಣ್ಣವಾದ ಚೀನಾ ದೇಶದ ಸೈನಿಕರು ಇದೀಗ ಲಡಾಖ್ನ ಕುರಿ ಮೇಯಿಸುವ ಸ್ಥಳೀಯರ ಜೊತೆಗಿನ ವಾಕ್ಸಮರದಲ್ಲೂ ಸೋಲು ಕಂಡಿದ್ದಾರೆ. ಕುರಿ ಹಾಗೂ ಸಾಕು ಪ್ರಾಣಿಗಳನ್ನು ಮೇಯಿಸುವ ಹಕ್ಕಿಗೆ ಸಂಬAಧಿಸಿದAತೆ ಚೀನಾ ಸೈನಿಕರ ಜೊತೆ ಲಡಾಖ್ ಗಡಿ ಭಾಗದ ಕುರಿಗಾಹಿಗಳು ಗುದ್ದಾಟ ನಡೆಸಿದರು. ಭಾರತ-ಚೀನಾ ನಡುವಣ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಸ್ಥಳೀಯ ಕುರಿಗಾಹಿಗಳು ತಮ್ಮ ಪ್ರಾಣಿಗಳನ್ನು ಮೇಯಿಸುತ್ತಿದ್ದರು. ಆದರೆ, ೨೦೨೦ರ ಗಲ್ವಾನ್ ಸಂಘರ್ಷದ ಬಳಿಕ ಈ ಭಾಗದಲ್ಲಿ ಕುರಿಗಾಹಿಗಳ ಓಡಾಟಕ್ಕೆ ಅಡೆ ತಡೆ ಎದುರಾಗಿತ್ತು. ಆದರೆ, ಇದೀಗ ಮತ್ತೆ ಈ ಭಾಗದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಮೇಯಿಸುತ್ತಿರುವ ಕುರಿಗಾಹಿಗಳು ಇದನ್ನು ಪ್ರಶ್ನಿಸಲು ಬಂದ ಚೀನಾ ಸೇನೆಗೆ ದಟ್ಟ ಉತ್ತರ ನೀಡಿದ್ದಾರೆ. ಇದು ಭಾರತದ ಗಡಿ ಪ್ರದೇಶ. ನಮಗೆ ಬರಲು ಬೇಡ ಎನ್ನಲು ನೀವು ಯಾರು ಎಂದು ಕುರಿಗಾಹಿಗಳು ಚೀನಾ ಸೈನಿಕರಿಗೆ ಪ್ರಶ್ನಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯರ ಮನ ಗೆದ್ದಿದೆ.

ಜಾರ್ಖಂಡ್ ಸಿಎಂ. ಹೇಮಂತ್ ಸೊರೇನ್ ಬಂಧನ

ರಾAಚಿ, ಜ. ೩೧: ಜಾರ್ಖಂಡ್ ಮುಖ್ಯಮಂತ್ರಿ ಜೆಎಂಎAನ ಹೇಮಂತ್ ಸೋರೆನ್ ಅವರನ್ನು ಇಂದು ತಡರಾತ್ರಿ ಇಡಿ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೋರೆನ್ ಅವರನ್ನು ಇಂದು ದೀರ್ಘಕಾಲ ವಿಚಾರಣೆ ನಡೆಸಿದ ಬಳಿಕ ಇಡಿ ಅಧಿಕಾರಿಗಳು ಬಂಧಿಸಿದರು. ಬಳಿಕ ಹೇಮಂತ್ ಸೋರೆನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ನೂತನ ಮುಖ್ಯಮಂತ್ರಿಯಾಗಿ ಬಹುಮತದ ಶಾಸಕರು ಸಚಿವರಾಗಿದ್ದ ಚಂಪೈ ಸೊರೇನ್ ಅವರನ್ನು ಆಯ್ಕೆ ಮಾಡಲಾಗುವುದಾಗಿ ಘೋಷಿಸಿದ್ದಾರೆ.

ಟಿಪ್ಪು ಸುಲ್ತಾನ್ ಪ್ರತಿಮೆಗೆ ಚಪ್ಪಲಿ ಹಾರ

ರಾಯಚೂರು, ಜ. ೩೧: ಟಿಪ್ಪು ಸುಲ್ತಾನ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಉದ್ವಿಗ್ನಗೊಳ್ಳುವಂತೆ ಮಾಡಿದೆ. ಕೆಲ ಕಿಡಿಗೇಡಿಗಳು ಬುಧವಾರ ಬೆಳ್ಳಂಬೆಳಗ್ಗೆ ಟಿಪ್ಪು ಸುಲ್ತಾನ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದು, ಘಟನೆಯನ್ನು ಖಂಡಿಸಿ ಟಿಪ್ಪು ವೃತ್ತದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದರು. ವಿಧ್ವಂಸಕ ಕೃತ್ಯದ ಹಿಂದಿರುವವರನ್ನು ಕೂಡಲೇ ಬಂಧಿಸುವAತೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಸ್ಥಳದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ದುಷ್ಕರ್ಮಿಗಳ ಸುಳಿವು ಪಡೆಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮಕೈಗೊಂಡಿದ್ದಾರೆ.

ಕAದಾಯ ದಾಖಲೆ ಡಿಜಿಟಲೀಕರಣ: ಕೃಷ್ಣ ಬೈರೇಗೌಡ

ಬೆಳಗಾವಿ, ಜ. ೩೧: ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಹಾಗೂ ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಯಲು ‘ಭೂಸುರಕ್ಷಾ' ಯೋಜನೆಯನ್ನು ಒಂದು ವಾರದೊಳಗೆ ರಾಜ್ಯದಾದ್ಯಂತ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿನ ಹಳೆಯ ದಾಖಲೆಗಳು ಶಿಥಿಲಾವಸ್ಥೆಗೆ ತಲುಪಿವೆ. ದಾಖಲೆ ಪಡೆಯಲು ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಆ ದಾಖಲೆಗಳನ್ನು ಶಾಶ್ವತವಾಗಿ ಸಂರಕ್ಷಿಸುವುದು ಮತ್ತು ನಕಲಿ ಸೃಷ್ಟಿಗೆ ತಡೆಯೊಡ್ಡುವ ಸಲುವಾಗಿ ೩೧ ಜಿಲ್ಲೆಗಳ ತಲಾ ಒಂದು ತಾಲೂಕಿನಲ್ಲಿ ಪ್ರಥಮ ಹಂತವಾಗಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಎಲ್ಲ ದಾಖಲೆಗಳನ್ನು ೧೦೦ ದಿನಗಳಲ್ಲಿ ಡಿಜಿಟಲೀಕರಣ ಮಾಡಲಾಗುವುದು ಎಂದರು. ಭೂಮಾಪನ ಇಲಾಖೆಯಲ್ಲಿನ ಕೆಲಸಗಳಿಗೆ ವೇಗ ನೀಡಲು ಫೆಬ್ರವರಿಯಲ್ಲಿ ೭೫೦ ಪರವಾನಗಿ ಭೂಮಾಪಕರನ್ನು (ಲೈಸೆನ್ಸ್ ಸರ್ವೇಯರ್ಸ್) ತಾಲೂಕು ಕೇಂದ್ರಗಳಲ್ಲಿ ನಿಯೋಜಿಸಲಾಗುವುದು. ೩೫೭ ಸರ್ಕಾರಿ ಸರ್ವೇಯರ್‌ಗಳು ಮತ್ತು ಸಹಾಯಕ ನಿರ್ದೇಶಕರ ನೇಮಕಾತಿಗೆ ಅನುಮೋದನೆ ಸಿಕ್ಕಿದ್ದು, ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದು. ಖಾಲಿ ಇರುವ ೫೯೨ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು. ರೂ. ೩೦ ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಸರ್ವೇಯರ್‌ಗಳಿಗೆ ಉಪಕರಣ ಒದಗಿಸಲಾಗುವುದು. ಇದರಿಂದಾಗಿ ನಿಗದಿತ ಸಮಯದಲ್ಲಿ ಸಿಬ್ಬಂದಿ ಹೆಚ್ಚಿನ ಸಮೀಕ್ಷೆ ಕೈಗೊಳ್ಳಬಹುದು ಎಂದರು.