ವೀರಾಜಪೇಟೆ, ಜ. ೩೧: ವಾಸಿಸಲೂ ಸ್ವಂತ ಮನೆಯೂ ಇಲ್ಲ, ಹಣವು ಇಲ್ಲ, ನಮಗೊಂದು ವಾಸಿಸಲೂ ಮನೆ ನಿರ್ಮಿಸಿ ಕೊಟ್ಟರೂ ಸಾಕಿತ್ತು. ಹೇಗಾದರೂ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತೇನೆ ಎಂದು ಹೇಳಿಕೊಳ್ಳುತ್ತಾ ಜೀವನ ಸಾಗಿಸುತ್ತಿದ್ದ ಬೆಟ್ಟಕುರುಬರ ಕಾಳ ಅವರ ಮುಖದಲ್ಲಿ ಇದೀಗ ನಗು ಮೂಡಿದೆ. ಮನೆ ಇಲ್ಲದೆ ಹೇಗೆ ಬದುಕಲಿ ಎಂದು ಹತಾಶ ಭಾವ ತೋಡಿಕೊಳ್ಳುತ್ತಿದ್ದ ಕಾಳ ಮತ್ತು ಕುಟುಂಬದವರಿಗೆ ಬದುಕುವ ಧೈರ್ಯ ಬಂದಿದೆ.

ಈ ಬಡ ಕುಟುಂಬದ ಸಂಕಷ್ಟವನ್ನು ಅರ್ಥ ಮಾಡಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಮನೆಯೊಂದನ್ನು ನಿರ್ಮಿಸಿ ಕೊಡುವ ಮೂಲಕ ಆರ್ಜಿ ಗ್ರಾಮದ ಪೆರುಂಬಾಡಿ ನಿವಾಸಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್ ಈ ಬಡ ಸಂಸಾರದ ಬದುಕಿನಲ್ಲಿ ಬದುಕುವ ಭರವಸೆ ಮೂಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪೈಸಾರಿ ಜಾಗದಲ್ಲಿ ಜೋಪಡಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ಈ ಕುಟುಂಬ ವಾಸವಾಗಿತ್ತು. ವಿದ್ಯುತ್ ಸೌಲಭ್ಯ ಇಲ್ಲದ ಜೋಪಡಿಯಲ್ಲಿ ಬದುಕುತ್ತಿದ್ದ ಇವರಿಗೆ ಬಿ.ಎಂ. ಗಣೇಶ್ ಅವರು ಭದ್ರತೆ ಕಲ್ಪಿಸಿಕೊಟ್ಟು ಧೈರ್ಯ ತುಂಬಿದ್ದಾರೆ.

ಈ ಜೋಪಡಿಯಲ್ಲಿ ಸುಮಾರು ವರ್ಷಗಳಿಂದ ಇವರು ವಾಸವಾಗಿದ್ದರು. ಇವರ ಈ ವಿಚಾರ ತಿಳಿದ ಗಣೇಶ್, ಅವರ ಕಷ್ಟಗಳನ್ನು ಅರಿತುಕೊಂಡು

ಈ ಕುಟುಂಬ ವಾಸವಾಗಿತ್ತು. ವಿದ್ಯುತ್ ಸೌಲಭ್ಯ ಇಲ್ಲದ ಜೋಪಡಿಯಲ್ಲಿ ಬದುಕುತ್ತಿದ್ದ ಇವರಿಗೆ ಬಿ.ಎಂ. ಗಣೇಶ್ ಅವರು ಭದ್ರತೆ ಕಲ್ಪಿಸಿಕೊಟ್ಟು ಧೈರ್ಯ ತುಂಬಿದ್ದಾರೆ.

ಈ ಜೋಪಡಿಯಲ್ಲಿ ಸುಮಾರು ವರ್ಷಗಳಿಂದ ಇವರು ವಾಸವಾಗಿದ್ದರು. ಇವರ ಈ ವಿಚಾರ ತಿಳಿದ ಗಣೇಶ್, ಅವರ ಕಷ್ಟಗಳನ್ನು ಅರಿತುಕೊಂಡು

ಒಂದು ಕಾಲದಲ್ಲಿ ಗುಡಿಸಲಿನಲ್ಲಿ ಬಾಳಿ ಬದುಕಿದ್ದು ಇಂದು ಭಗವಂತ ನಮ್ಮನ್ನು ಸುಸ್ಥಿತಿಗೆ ತಂದಿದ್ದಾನೆ. ನಾನೇನು ಆಗರ್ಭ ಶ್ರೀಮಂತನಲ್ಲ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ನನ್ನ ಕೈಲಾದ ಸಹಾಯವನ್ನು ಮಾಡಿ ಮನೆ ಕಟ್ಟಿಸಿ ಕೊಟ್ಟಿದ್ದೇನೆ, ಇನ್ನೂ ವಿದ್ಯುತ್ ಪೂರೈಕೆ ಮತ್ತು ಶೌಚಾಲಯದ ಅವಶ್ಯಕತೆ ಇದೆ. ಕಾಳ ಅವರ ಬಳಿ ಅಗತ್ಯವಾದ ದಾಖಲೆ ಇಲ್ಲದ ಕಾರಣ ಸ್ವಲ್ಪ ವಿಳಂಬವಾಗಿದೆ ಎನ್ನುತ್ತಾರೆ ಗಣೇಶ್.

ನಾವು ಪ್ರತಿದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಬಹಳ ವರ್ಷಗಳಿಂದ ಈ ಜಾಗದಲ್ಲಿ ಟಾರ್ಪಲ್ ಹಾಕಿರುವ ಜೋಪಡಿಯಲ್ಲಿ ವಾಸ ಮಾಡುತ್ತಿದೇವೆ. ಮಳೆ, ಗಾಳಿ, ಬಿಸಿಲು, ಚಳಿ ಯಾವುದನ್ನೂ ಲೆಕ್ಕಿಸದೇ ಇದರಲ್ಲಿ ನಾನು ಮತ್ತು ಕುಟುಂಬ ವಾಸ ಮಾಡುತ್ತಿದ್ದೇವೆ. ನಮ್ಮ ಈ ಸಂಕಷ್ಟಕ್ಕೆ ಮಿಡಿದು ಗಣೇಶ್ ಅವರು ಮನೆ ನಿರ್ಮಿಸಿಕೊಟ್ಟು ನಮ್ಮ ಬದುಕಿಗೆ ಆಶ್ರಯ ಒದಗಿಸಿದ್ದಾರೆ. ಇವರ ಈ ಸೇವೆಯನ್ನು ನಾವೆಂದೂ ಮರೆಯಲಾರೆವು. ಗಣೇಶ್ ನಮ್ಮ ಪಾಲಿನ ದೇವರಾಗಿದ್ದಾರೆ ಎಂದು ಕಾಳ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

- ವಿಶೇಷ ವರದಿ: ಈಶಾನ್ವಿ ಕಿರಣ್