ಸಿದ್ದಾಪುರ, ಜ. ೩೦: ಸಿದ್ದಾಪುರ ಸೌಹಾರ್ದ ವೇದಿಕೆ ವತಿಯಿಂದ ಹುತಾತ್ಮರ ದಿನಾಚರಣೆ ಅಂಗವಾಗಿ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ, ಸೌಹಾರ್ದ ಸಭೆಯನ್ನು ನಡೆಸಲಾಯಿತು.

ಕಾರ್ಯಕ್ರಮದ ಕುರಿತು ಹಾಸನ ಜಿಲ್ಲೆಯ ಮಾನವ ಬಂಧುತ್ವ ವೇದಿಕೆ ಮಂಗಳೂರು ಸಂಚಾಲಕರಾದ ಸತೀಶ್ ಕುಮಾರ್ ಮಾತನಾಡಿದರು. ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಗೋಪಾಲ್, ನೆಲ್ಲಿಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ಧನಲಕ್ಷಿö್ಮ, ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ಮಾಲತಿ, ಚಿಂತಕರಾದ ಐ.ಅರ್. ದುರ್ಗಾಪ್ರಸಾದ್, ಎಸ್ ವೈ ಎಸ್ ಮಾಧ್ಯಮ ಕಾರ್ಯದರ್ಶಿ ಶಾಫಿ ಸಹದಿ, ಪೆರುಂಬಾಡಿ ವಿದ್ಯಾ ಟ್ರಸ್ಟ್ ಕಾರ್ಯದರ್ಶಿ ಬಶೀರ್, ಸಾಮಾಜಿಕ ಕಾರ್ಯಕರ್ತ ಜೋಕಿಮ್, ಸೌಹಾರ್ದ ವೇದಿಕೆ ಸಮಿತಿ ಅಧ್ಯಕ್ಷ ಎನ್.ಡಿ. ಕುಟ್ಟಪ್ಪ, ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಪಳನಿ ಸ್ವಾಮಿ, ಹೆಚ್.ಬಿ. ರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ವೆಂಕಟೇಶ್ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತಿಶ್ ಹಾಜರಿದ್ದರು. ಪಿ.ಆರ್. ಭರತ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಬ್ದುಲ್ ಸುಕುರ್ ಸ್ವಾಗತಿಸಿದರು.