ಕರಿಕೆ, ಜ. ೩೦: ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಕೇರಿ ಕ್ಲಸ್ಟರ್ನ ಹಾಕತ್ತೂರು ಪ್ರೌಢ ಶಾಲೆಯ ೯ ಮತ್ತು ೧೦ನೇ ತರಗತಿಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಫೌಂಡೇಶನ್ ವತಿಯಿಂದ ಉಚಿತವಾಗಿ ಸೋಲಾರ್ ಲ್ಯಾಂಪ್ಅನ್ನು ವಿತರಿಸಲಾಯಿತು. ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಇಪ್ಪತ್ತ ಮೂರು ವಿದ್ಯಾರ್ಥಿನಿಯರು ಈ ಸೌಲಭ್ಯವನ್ನು ಪಡೆದುಕೊಂಡರು.
ಈ ಸಂದರ್ಭ ಶಿಕ್ಷಣ ಇಲಾಖೆಯ ಬಿ.ಆರ್.ಸಿ. ಗುರುರಾಜ್, ಬಿಆರ್ಪಿ ಮಂಜುಳಾ ಚಿತ್ರಾಪುರ, ಸಿಆರ್ಪಿ ಹೊಸಗದ್ದೆ ಕಲ್ಪನಾ ಹಾಗೂ ಶಿಕ್ಷಣ ಫೌಂಡೇಶನ್ನ ಜಿಲ್ಲಾ ಸಂಚಾಲಕ ಶಿವಕುಮಾರ್ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.