ಮಡಿಕೇರಿ, ಜ. ೩೦: ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸಲೆಂದು ಆರಂಭಗೊAಡ ಯೋಜನೆ ಇದೀಗ ೨ ಮಳೆಗಾಲ ಕಳೆದು, ೩ನೇ ಮಳೆಗಾಲ ಸಮೀಪಿಸಿದರೂ ಮುಕ್ತಾಯ ಗೊಳ್ಳುವಂತೆ ಕಾಣುತ್ತಿಲ್ಲ. ತಡೆಗೋಡೆ ತಲೆಎತ್ತಿ ಮಳೆಯ ಆರ್ಭಟಕ್ಕೆ ಸಮಸ್ಯೆ ಉಂಟಾಗಿ ತಡೆಗೆ ಹಾಕಿದ್ದ ಕಾಂಕ್ರೀಟ್ ಪ್ಯಾನಲ್ಗಳನ್ನು ತೆರವು ಮಾಡಿ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಂಡ ಕೀರ್ತಿ ಇಲಾಖೆಗೆ ಸಲ್ಲುತ್ತದೆ. ೨೦೨೧ ರಿಂದ ಯೋಜನೆ ಕಾರ್ಯಗತ ಹಂತದಲ್ಲಿಯೇ ಇದ್ದು, ಈ ವರ್ಷವೂ ಮುಕ್ತಾಯ ಗೊಳ್ಳುವುದು ಅನುಮಾನವಾಗಿದೆ.
೨೦೧೮ರಲ್ಲಿ ಸುರಿದ ಭಾರೀ ಮಳೆ, ಉಂಟಾದ ಪ್ರಾಕೃತಿಕ ವಿಕೋಪ ಇಡೀ ಜಿಲ್ಲೆಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಅದೆಷ್ಟೋ ರಸ್ತೆ, ಸೇತುವೆ, ಆಸ್ತಿ-ಪಾಸ್ತಿ, ತಡೆಗೋಡೆ ಹಾನಿಯಾಗಿ ವ್ಯತಿರಿಕ್ತ ಪರಿಣಾಮ ಸೃಷ್ಟಿಯಾಗಿತ್ತು. ಅದೇ ರೀತಿ ೨೦೧೯ರಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿದ ಸಂದರ್ಭ ಜಿಲ್ಲಾಡಳಿತ ಭವನ ಎದುರಿನ ಬರೆಯಿಂದ ಮಣ್ಣು ಕುಸಿದ ಪರಿಣಾಮ ಜೊತೆಗೆ ಕೆಳಗಿನ ರಸ್ತೆ ರಾಷ್ಟಿçÃಯ ಹೆದ್ದಾರಿ ೨೭೫ ಆಗಿರುವ ಹಿನ್ನೆಲೆ ಮುಂದಾಗಬಹುದಾದ ಅವಘಡ ತಪ್ಪಿಸಲು ಜರ್ಮನ್ ತಂತ್ರಜ್ಞಾನದ ‘ಆರ್.ಯು. ವಾಲ್’ ಯೋಜನೆಯನ್ನು ಲೋಕೋಪ ಯೋಗಿ ಇಲಾಖೆ ಕೈಗೆತ್ತಿಕೊಂಡಿತು.
ತಾ. ೨೭-೧೧-೨೦೧೯ ರಂದು ಪ್ರಕ್ರಿಯೆ ಆರಂಭಗೊAಡು, ರೂ. ೭ ಕೋಟಿ ಕ್ರಿಯಾಯೋಜನೆ ತಯಾರಿಸಿ ತಾ. ೨೨-೧೧-೨೦೨೦ಕ್ಕೆ ಕಾಮಗಾರಿ ಕಾರ್ಯಾದೇಶ ಗುತ್ತಿಗೆ ಪಡೆದ ಹೈದರಾಬಾದ್ ಮೂಲದ ಅಯ್ಯಪ್ಪ ಕನ್ಸ್ಟ್ರಕ್ಷನ್ ಕಂಪೆನಿಗೆ ನೀಡಿ ಮುಂದಿನ ೧೧ ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳಿಸುವ ಗಡುವು ನೀಡಿ ರೂ. ೬.೨೫ ಕೋಟಿ ಹಣವನ್ನು ಬಿಡುಗಡೆಗೊಳಿಸಲಾಗಿತ್ತು.
ತ್ವರಿತವಾಗಿ ಆರಂಭಗೊAಡ ತಡೆಗೋಡೆ ಕಾಮಗಾರಿ ೨೦೨೨ರ ಹೊತ್ತಿಗೆ ಪ್ಯಾನಲ್ಗಳನ್ನು ಅಳವಡಿಸಿ ಕೆಲಸ ಒಂದು ಹಂತಕ್ಕೆ ಪೂರ್ಣ ಗೊಂಡು ಮೇಲ್ಭಾಗದಲ್ಲಿ ವಾಹನ ನಿಲುಗಡೆ ಉದ್ದೇಶಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ೨೦೨೨ರ ಜುಲೈ ತಿಂಗಳಿನಲ್ಲಿ ತಡೆಗೋಡೆಯ ಅಲ್ಲಲ್ಲಿ ಕಾಣಿಸಿಕೊಂಡ ಉಬ್ಬು, ಬಿರುಕುಗಳು ಆತಂಕ ಸೃಷ್ಟಿಸಿತ್ತು.
ರಾಷ್ಟಿçÃಯ ಹೆದ್ದಾರಿ ೨೭೫ ರಸ್ತೆಯನ್ನು ಹಾದುಹೋಗುವ ಈ ತಡೆಗೋಡೆ ಭಯಕ್ಕೆ ಕಾರಣವಾಯಿತು. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುವ ಹಿನ್ನೆಲೆ ೨೦೨೨ರಲ್ಲಿ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನೇ ಕೆಲ ದಿನಗಳು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯೇ ಕಾರಣ ಎಂದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಜಿಲ್ಲೆಯ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತಕ್ಷಣ ಅಧಿಕಾರಿಗಳು ಕ್ರಮಕ್ಕೆ ಮುಂದಾದರು. ಅಳವಡಿಸಿದ್ದ ಪ್ಯಾನಲ್ಗಳನ್ನು ಕಳಚಿ, ತಡೆ ಗೋಡೆಗೆ ವಿಶಾಲವಾದ ಟಾರ್ಪಲ್ ಹಾಕಿ ಜರ್ಮನ್ ತಂತ್ರಜ್ಞಾನಕ್ಕೆ ಸವಾಲು ಹಾಕಿದ್ದರು. ಆದರೆ, ಮಳೆಯ ಆರ್ಭಟಕ್ಕೆ ಪ್ಲಾಸ್ಟಿಕ್ನಿಂದ ನೀರು ಸೋರಿಕೆಯಾಗಿ ಬರೆಯೊಳಗೆ ನುಗ್ಗಿ ತಡೆಗೋಡೆ ಯೋಜನೆ ಅಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿತ್ತು.
ಅಂದಿನ ಶಾಸಕರುಗಳು ಕೂಡ ಈ ಯೋಜನೆ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.