ಸೋಮವಾರಪೇಟೆ, ಜ. ೩೦: ಸಮೀಪದ ಮಸಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಬ್ಬೂರುಕಟ್ಟೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯ ವತಿಯಿಂದ ರೂ. ೧೦ ಸಾವಿರ ನೆರವು ಒದಗಿಸಲಾಯಿತು.
ಶಾಲೆಯ ಶಿಕ್ಷಕ ಕೆ.ಜಿ. ನಾಗೇಂದ್ರ ಅವರ ಮನವಿಯ ಮೇರೆಗೆ ಶಾಲೆಯ ಗ್ರಂಥಾಲಯ ನಿರ್ವಹಣೆಗಾಗಿ ಬ್ಯಾಂಕ್ನಿAದ ರೂ. ೧೦ ಸಾವಿರ ಹಣವನ್ನು ಒದಗಿಸಲಾಗಿದ್ದು, ಶಾಖಾ ವ್ಯವಸ್ಥಾಪಕ ನಾಗರಾಜ್ ಅವರು ಚೆಕ್ ವಿತರಿಸಿದರು.
ಗೆಜ್ಜೆಹಣಕೋಡು: ತಾಲೂಕಿನ ಗೆಜ್ಜೆಹಣಕೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸೋಮವಾರಪೇಟೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯಿಂದ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.
ಗಣರಾಜ್ಯೋತ್ಸವ ಅಂಗವಾಗಿ ಶಾಖೆಯ ವತಿಯಿಂದ ಸಿಎಸ್ಆರ್ ಕಾರ್ಯಕ್ರಮದಡಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಸ್ಥಾಪಕ ಸ್ವರೂಪ್ ಅವರು ಕಲಿಕೋಪಕರಣಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಾವತಿ ಅವರು, ಮುಂದಿನ ಶೈಕ್ಷಣಿಕ ಸಾಲಿನಿಂದ ಗೆಜ್ಜೆಹಣಕೋಡು ಸರ್ಕಾರಿ ಶಾಲೆಯಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ಜಾರಿಗೊಳಿಸಲಾಗುತ್ತಿದೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಎಲ್ಲರ ನೆರವು ಅಗತ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಮೃತ್ಯುಂಜಯ, ಚೇತನ್, ಪೊಲೀಸ್ ಠಾಣೆಯ ಮುಖ್ಯಪೇದೆ ಗಣಪತಿ, ಶಿಕ್ಷಕಿ ಗುಣವತಿ ಅವರುಗಳು ಉಪಸ್ಥಿತರಿದ್ದರು.