ಸೋಮವಾರಪೇಟೆ, ಜ. ೩೦: ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಗೌರವ ಲಭಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೆöÊರ್ಸ್ ಆರ್ಗನೈಸೇಷನ್ನ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.
ಕರ್ನಾಟಕ ಟ್ಯಾಕ್ಸಿ ಡ್ರೆöÊರ್ಸ್ ಆರ್ಗನೈಸೇಷನ್ನ ತಾಲೂಕು ಘಟಕದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ-ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಾಗೂ ಚಾಲಕ ಚೈತನ್ಯೋಭವ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ, ಸಂಘಟನೆಯ ವತಿಯಿಂದ ಸಾರ್ವಜನಿಕ ಸೇವೆಗೆ ಒದಗಿಸಲಾಗಿರುವ ನೂತನ ಆಂಬ್ಯುಲೆನ್ಸ್ ವಾಹನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಾಹನ ಚಾಲಕರು ತಮ್ಮ ಕರ್ತವ್ಯದ ಅವಧಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಪ್ರಯಾಣಿಕರ ಹಿತವನ್ನು ಗಮನದಲ್ಲಿರಿಸಿಕೊಳ್ಳಬೇಕು. ದಾಖಲೆಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದ ರಂಜನ್, ಕೆಟಿಡಿಓ ಸಂಘಟನೆ ವತಿಯಿಂದ ದಾನಿಗಳ ಮೂಲಕ ಸಾರ್ವಜನಿಕ ಉಪಯೋಗಕ್ಕೆ ಸುಧಾರಿತ ಆಂಬ್ಯುಲೆನ್ಸ್ ವಾಹನವನ್ನು ಒದಗಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ವಿ. ರವಿ ವಹಿಸಿ ಮಾತನಾಡಿ, ಸಂಘಟನೆಯ ವತಿಯಿಂದ ಕಳೆದ ೩ ವರ್ಷಗಳಿಂದ ಅದ್ದೂರಿ ಗಣರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಸ್ಥಳೀಯ ಮಕ್ಕಳನ್ನು ಒಳಗೊಂಡAತೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಸಲಾಗುತ್ತಿದೆ. ಈ ಬಾರಿ ಬೆಂಗಳೂರಿನ ಕಾವೇರಿ ಆಂಬ್ಯುಲೆನ್ಸ್ನ ವೆಂಕಟೇಶ್ ಅವರ ಸಹಕಾರದಿಂದ ಸೋಮವಾರಪೇಟೆ ಭಾಗದ ಸಾರ್ವಜನಿಕರ ಉಪಯೋಗಕ್ಕಾಗಿ ಅಂಬ್ಯುಲೆನ್ಸ್ ಒದಗಿಸಲಾಗಿದೆ ಎಂದರು.
ರಾಮನಗರ ಜಿಲ್ಲೆ ಗೆಜ್ಜೆಗಾರುಗುತ್ತೆ ಮುರಾರಿ ಸ್ವಾಮಿಗಳ ಪುಣ್ಯಕ್ಷೇತ್ರದ ಪೀಠಾಧಿಪತಿ ಶ್ರೀ ಕುಮಾರಸ್ವಾಮಿ, ವಕ್ಫ್ ಸಲಹಾ ಸಮಿತಿಯ ಶಾಫಿ ಸಅದಿ ತಣ್ಣೀರುಹಳ್ಳ, ಓಎಲ್ವಿ ದೇವಾಲಯದ ಸಹಾಯಕ ಗುರು ಜಾನ್ ಫೆರ್ನಾಂಡಿಸ್ ಅವರುಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಕೆಟಿಡಿಓ ರಾಜ್ಯಾಧ್ಯಕ್ಷ ರಮೇಶ್ ಕುಂದಾಪುರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಕಾನೂನು ಸಲಹೆಗಾರ ಜಯೇಂದ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ಲು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಕೆಟಿಡಿಓ ಖಜಾಂಚಿ ಕೆ.ಎನ್. ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆಟಿಡಿಓ ರಾಜ್ಯ ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ. ರೋಡ್, ಸೋಮವಾರಪೇಟೆಯ ಸಿ.ಕೆ. ಆರ್ಮಿ ಟ್ರೆöÊನಿಂಗ್ ಅಕಾಡೆಮಿಯ ಚಂದ್ರಕುಮಾರ್, ಸ್ವಾಮಿ ಟ್ರಾವೆಲ್ಸ್ನ ರಾಮಚಂದ್ರ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ರಾಮ್ದಾಸ್, ಕರ್ಕಳ್ಳಿಯ ಹಾಕಿ ಕ್ರೀಡಾಪಟು, ಚಿನ್ನದ ಪದಕ ವಿಜೇತೆ ಎಸ್.ಆರ್. ಪುಣ್ಯ ಅವರುಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ರಾಜ್ಯಮಟ್ಟದ ಮುಕ್ತ ನೃತ್ಯೋತ್ಸವ ನಡೆಯಿತು.