ಕೂಡಿಗೆ, ಜ. ೨೯: ಕುಶಾಲನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಆವರಣದಲ್ಲಿ ನೂತನವಾಗಿ ವೀರಭದ್ರ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಿತು.
ಈ ಸಂದರ್ಭ ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ವಿ. ರಾಜೇಶ್, ಉಪಾಧ್ಯಕ್ಷರುಗಳಾದ ಡಿ.ಆರ್. ಸೋಮಶೇಖರ್, ಡಿ.ವಿ. ಚಂದ್ರು (ರಾಕಿ), ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣ ಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಹ ಕಾರ್ಯದರ್ಶಿ ಡಿ.ವಿ. ಚಂದ್ರಶೇಖರ್ ಸಂಘಟನಾ ಕಾರ್ಯದರ್ಶಿ ಡಿ.ಎನ್. ವಿನೋದ್, ಸಂಚಾಲಕ ಡಿ.ಎನ್. ಶಶಿ, ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಡಿ.ಟಿ. ವಿಜೇಂದ್ರ, ಸುಲೋಚನ, ಡಿ.ಎಸ್. ಜಗದೀಶ್, ಡಿ.ಎಸ್. ಕೋದಂಡರಾಮ್, ಡಿ.ಕೆ. ತಿಮ್ಮಪ್ಪ, ಡಿ.ಟಿ. ನಾಗೇಂದ್ರ, ಡಿ.ಸಿ. ಜಗದೀಶ್, ಹೆಚ್.ಎನ್. ಯೋಗೇಶ್, ಕೆ.ಎಸ್. ಮೇಘರಾಜ್, ದೇವಾಂಗ ಮಹಿಳಾ ಘಟಕದ ಅಧ್ಯಕ್ಷೆ ಪದ್ಮ ಮಹೇಶ್, ಉಪಾಧ್ಯಕ್ಷೆ ಶುಭ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ದಿವ್ಯ ಅನಿಲ್, ಖಜಾಂಚಿ ರೂಪ ಕುಮಾರ್, ಗೀತಾ ಸೋಮಶೇಖರ್, ಶೋಭಾ ಯುವಕ ಸಂಘದ ಡಿ.ಪಿ. ಗಣೇಶ್, ಪ್ರಧಾನ ಅರ್ಚಕರಾದ ಪ್ರಸನ್ನ ಕುಮಾರ್, ವಿಗ್ರಹ ಶಿಲ್ಪಿ ಸುಕುಮಾರ್ ಸೇರಿದಂತೆ ಸಮಿತಿಯ ಸದಸ್ಯರು ಭಾಗವಹಿಸಿದ್ದರು.